Headlines

‘ಹೌಸ್ ಆಫ್ ಡ್ರಾಗನ್’ ಸೀಸನ್ 3 ಟೀಸರ್ ರಿಲೀಸ್: ಈ ಬಾರಿ ಇನ್ನೂ ರೋಚಕ

‘ಹೌಸ್ ಆಫ್ ಡ್ರಾಗನ್’ ಸೀಸನ್ 3 ಟೀಸರ್ ರಿಲೀಸ್: ಈ ಬಾರಿ ಇನ್ನೂ ರೋಚಕ


ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್ನ ದೈತ್ಯ ವೆಬ್ ಸರಣಿ ‘ಹೌಸ್ ಆಫ್ ದಿ ಡ್ರ್ಯಾಗನ್’ (ಹೌಸ್ ಆಫ್ ದಿ ಡ್ರ್ಯಾಗನ್) ಈಗ ತನ್ನ ಮೂರನೇ ಸೀಸನ್‌ನೊಂದಿಗೆ ಮರಳಲು ಸಜ್ಜಾಗಿದೆ. ಈ ಸರಣಿಯ ಬಗ್ಗೆ ಹೆಚ್ಚು ತಿಳಿದಿಲ್ಲದವರಿಗಾಗಿ ಹೇಳಬೇಕೆಂದರೆ, ಇದು ಜಗತ್ತಿನ ನಂಬರ್ 1 ವೆಬ್ ಸರಣಿಯಾದ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಮೂರನೇ ಭಾಗವಾಗಿ ‘ಗೇಮ್ ಆಫ್ ಥ್ರೋನ್ಸ್’ ಕಥೆ ಸುಮಾರು 200 ವರ್ಷಗಳ ಹಿಂದೆ ನಡೆದ ಕಥೆಯಾಗಿದೆ. ರಾಜಮನೆತನದ ಆಂತರಿಕ ಕಲಹ, ಬೆಂಕಿ ಉಗುಳುವ ದೈತ್ಯ ಡ್ರ್ಯಾಗನ್‌ಗಳು ಮತ್ತು ಅಧಿಕಾರದ ಹಪಾಹಪಿಯೇ ಈ ಸರಣಿಯ ಜೀವಾಳ. ಇದೀಗ ಈ ವೆಬ್ ಸರಣಿಯ ಮೂರನೇ ಸೀಸನ್ ನ ಟ್ರೈಲರ್ ಬಿಡುಗಡೆ ಆಗಿದ್ದು, ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

‘ಹೌಸ್ ಆಫ್ ದಿ ಡ್ರ್ಯಾಗನ್’ ವೆಬ್ ಸರಣಿ ಪ್ರಮುಖವಾಗಿ ‘ಟಾರ್ಗೇರಿಯನ್’ ರಾಜವಂಶದ ಸುತ್ತ ಸುತ್ತುತ್ತದೆ. ಈ ಮನೆತನದವರಿಗೆ ಡ್ರ್ಯಾಗನ್‌ಗಳನ್ನು ನಿಯಂತ್ರಿಸುವ ವಿಶೇಷ ಶಕ್ತಿ ಇರುತ್ತದೆ. ಇಲ್ಲ ಏಳು ಕಿಂಗ್ಡಮ್‌ಗಳಿಗೆ ಅವರೇ ಅಧಿಪತಿಗಳಾಗಿರುತ್ತಾರೆ. ಆದರೆ ಅದೇ ಕುಟುಂಬದ ಕೆಲವರ ನಡುವೆ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ ಯುದ್ಧ ಶುರುವಾಗಿದೆ. ಈ ಯುದ್ಧದಲ್ಲಿ ತಂತ್ರ, ಕುತಂತ್ರ, ನಂಬಿಕೆ ದ್ರೋಹ ಎಲ್ಲವೂ ಇವೆ. ಅವೆಲ್ಲವುಗಳ ಕಥೆ ಈ ‘ಹೌಸ್ ಆಫ್ ದಿ ಡ್ರ್ಯಾಗನ್’ ಒಳಗೊಂಡಿದೆ.

ಇದೀಗ ಮೂರನೇ ಸೀಸನ್ ಟೀಸರ್ ಬಿಡುಗಡೆಯಾಗಿದೆ, ಇದರಲ್ಲಿ ರಾಣಿ ರೇನಿರಾ ಟಾರ್ಗೇರಿಯನ್ ತನ್ನ ಅಧಿಕಾರವನ್ನು ಮರಳಿ ಪಡೆಯಲು ದೃಢನಿಶ್ಚಯ ಮಾಡಿದಂತೆ ತೋರುತ್ತಿದೆ. ತನ್ನ ಮಗನ ಸಾವು ಮತ್ತು ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ರೇನಿರಾ ಈಗ ಯುದ್ಧಭೂಮಿಗೆ ಧುಮುಕಿದ್ದಾಳೆ. ಟೀಸರ್‌ನಲ್ಲಿ ಇರುವ ದೃಶ್ಯಗಳು ಎಷ್ಟು ಭೀಕರವಾಗಿರಲಿದೆ ಎಂದು ಮುನ್ಸೂಚನೆ ನೀಡುತ್ತಿದೆ. ಮಗ-ತಾಯಿಯ ನಡುವೆ, ಪತಿ-ಪತ್ನಿಯ ನಡುವೆಯೇ ಅಪನಂಬಿಕೆ, ಕಿತ್ತಾಟಗಳು ಶುರುವಾಗಿರುವ ಸೂಚನೆಯನ್ನು ಟೀಸರ್ ನೀಡುತ್ತಿದೆ.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್

‘ಗೇಮ್ ಆಫ್ ಥ್ರೋನ್ಸ್’ನ ಮತ್ತೊಂದು ಪ್ರೀಕ್ವೆಲ್ ಆಗಿರುವ ‘ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್’ ಜಿಯೋ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಇದು ಈ ಸರಣಿಯ ಮೊದಲ ಸೀಸನ್ ಆಗಿದೆ. ಅದು ಮುಗಿದ ಬಳಿಕ ‘ಹೌಸ್ ಆಫ್ ದಿ ಡ್ರ್ಯಾಗನ್’ ಮೂರನೇ ಸೀಸನ್ ಪ್ರಸಾರ ಆಗಲಿದೆ. ಇದೀಗ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ನಿರ್ದಿಷ್ಟವಾಗಿ ಬಿಡುಗಡೆಯಾಗಿದೆ ಎಂದು ಘೋಷಿಸಲಾಗಿದೆಯಾದರೂ, ಜೂನ್ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಕಳೆರಡು ಸೀಸನ್ ಇನ್ನೂ ಅದ್ಧೂರಿಯಾಗಿ ಮೂರನೇ ಸೀಸನ್ ಇರುವುದು ಟೀಸರ್ ನಿಂದ ಖಾತ್ರಿ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *