Headlines

ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ


ಸರ್ಕಾರದಿಂದ ಎಲ್ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ

ಜನವರಿ, ಮಾರ್ಚ್ 15: ಸರ್ಕಾರವು ಎಲ್ಪಿಜಿ ಪೂರೈಕೆಯಲ್ಲಿ ತೊಂದರೆ ಆಗಿಲ್ಲ ಎಂದು ಹೇಳುತ್ತಿದ್ದರೂ ಗ್ಯಾಸ್ ಸಿಲಿಂಡರ್ (LPG ಸಿಲಿಂಡರ್) ಸಿಗುವುದು ತಡವಾಗುತ್ತಿರುವುದು ಹೌದು. ಜನರೂ ಕೂಡ ಎಂದಿಗಿಂತ ಹೆಚ್ಚು ಬೇಗ ಎಲ್ ಪಿಜಿ ಗ್ಯಾಸ್ ಬುಕಿಂಗ್ ಮಾಡುತ್ತಿರುವುದೂ ಹೌದು. ಇದೇ ವೇಳೆ, ಎಲ್ಪಿಜಿ ಪೂರೈಕೆ ಮತ್ತು ವಿತರಣೆ ನಿಯಂತ್ರಣ ಆದೇಶದಲ್ಲಿ (LPG ಪೂರೈಕೆ ಮತ್ತು ವಿತರಣಾ ಕ್ರಮ) ಸರ್ಕಾರ ಬದಲಾವಣೆ ಮಾಡಿದೆ. ಪೈಪ್ಡ್ ಗ್ಯಾಸ್ ಅಥವಾ ಪಿಎನ್ ಜಿ (ಪಿಎನ್ಜಿ-ಪೈಪ್ಡ್ ನ್ಯಾಚುರಲ್ ಗ್ಯಾಸ್) ಸೌಲಭ್ಯ ಹೊಂದಿರುವ ಜನರಿಗೆ ಎಲ್ಪಿಜಿ ಸಿಗದಂತೆ ಕಾನೂನು ಬದಲಾಯಿಸಲಾಗಿದೆ.

ಇದರಂತೆ ಪಿಎನ್ಜಿ ಸಂಪರ್ಕ ಇರುವ ಮನೆಗಳಿಗೆ ಹೊಸ ಎಲ್ಪಿಜಿ ಸಂಪರ್ಕ ಸಿಗೋದಿಲ್ಲ. ಎಲ್ಪಿಜಿ ಕೆನೆಕ್ಷನ್ ಹೊಂದಿರುವ ಪಿಎನ್‌ಜಿ ಗ್ರಾಹಕರು ಎಲ್ಪಿಜಿ ಸಿಲಿಂಡರ್ ಪೂರೈಕೆ ಸಿಗೋದಿಲ್ಲ. ಸದ್ಯ ಪಿಎನ್‌ಜಿ ಮತ್ತು ಎಲ್‌ಪಿಜಿ ಎರಡೂ ಸಂಪರ್ಕ ಹೊಂದಿರುವ ಕುಟುಂಬಗಳು ತಮ್ಮ ಪಿಜಿ ಸೌಲಭ್ಯವನ್ನು ಬಿಟ್ಟುಕೊಡುತ್ತವೆ.

ಇದನ್ನೂ ಓದಿ: ಗ್ಯಾಸ್ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಭಾರತದಲ್ಲಿ ಒಂದೂವರೆ ಕೋಟಿಗೂ ಅಧಿಕ ಮನೆಗಳ ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಥವಾ ಪಿಎನ್ ಜಿ ಕನೆಕ್ಷನ್ ಇದೆ. ಸದ್ಯದ ತೈಲ ಬಿಕ್ಕಟ್ಟಿನಲ್ಲಿ ಸರ್ಕಾರವು ಗೃಹಬಳಕೆಯ ಪಿಎನ್‌ಜಿ ಸಂಪರ್ಕಗಳಿಗೆ ಪೂರೈಕೆಗೆ ಮೊದಲ ಆದ್ಯತೆ ಕೊಡುತ್ತಿದೆ. ಹೀಗಾಗಿ, ಪಿಎನ್ ಜಿ ಗ್ರಾಹಕರು ಗ್ಯಾಸ್ ಕೊರತೆ ಬಗ್ಗೆ ಹೆಚ್ಚು ಕಳವಳಪಡುವ ಅವಶ್ಯಕತೆ ಇಲ್ಲ.

ಪ್ರಸ್ತುತ ಪಿಎನ್‌ಜಿ ದರಗಳು ಪ್ರತೀ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಪಿಎನ್‌ಜಿ ಗ್ಯಾಸ್‌ಗೆ 45 ರೂನಿಂದ 60 ರೂವರೆಗೆ ಇವೆ. ಜಿಎಐಎಲ್‌ನ ಪಿಎನ್‌ಜಿ ದರ ಬೆಂಗಳೂರಿನಲ್ಲಿ ಒಂದು ಎಸ್‌ಸಿಎಂಗೆ 52 ರೂ ಇದೆ. ಒಂದು ಎಸ್ಸಿಎಂ ಎಂದರೆ ಅಂದಾಜು 800 ಗ್ರಾಮ್ ಇರುತ್ತದೆ. ವಿದ್ಯುತ್ ದರದ ರೀತಿ ಪಿಎನ್ಜಿ ಕನೆಕ್ಷನ್ನಲ್ಲಿ ನೀವು ಬಳಸುವ ಗ್ಯಾಸ್ ಪ್ರಮಾಣದ ಬಿಲ್ ಬರುತ್ತದೆ.

ಸರ್ಕಾರ ಸದ್ಯ ಎಲ್ಪಿಜಿ ಗ್ರಾಹಕರನ್ನು ಪಿಎನ್‌ಜಿ ಸಂಪರ್ಕಕ್ಕೆ ವರ್ಗವಾಗುವಂತೆ ಮನವೊಲಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ಎಲ್ಲಾ ನಗರ ಮತ್ತು ಪ್ರದೇಶಗಳಲ್ಲಿ ಪಿಎನ್ಜಿ ನೆಟ್ವರ್ಕ್ ಇಲ್ಲ. ನೀವಿರುವ ಪ್ರದೇಶದಲ್ಲಿ ಪಿಎನ್‌ಜಿ ಸಂಪರ್ಕ ಲಭ್ಯವಿದ್ದರೆ ಅದನ್ನು ಹೊಂದುವುದು ಉತ್ತಮ. ಸರ್ಕಾರವು ಇಂಥ 60 ಲಕ್ಷ ಮನೆಗಳನ್ನು ಗುರುತಿಸಿದೆ, ಅವು ಪಿಎನ್‌ಜಿ ಕೊಡುಗೆ ಪಡೆಯಲು ಅವಕಾಶವಿದೆ.

ಇದನ್ನೂ ಓದಿ: LPG ಕೊರತೆ: ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಸಿಲಿಂಡರ್ ದರ 4 ಸಾವಿರ ರೂಪಾಯಿಗೆ ಏರಿಕೆ?

ಭಾರತದಲ್ಲಿ ಸದ್ಯ 32 ಕೋಟಿಗೂ ಅಧಿಕ ಎಲ್ ಪಿಜಿ ಗ್ರಾಹಕರಿದ್ದಾರೆ. ಭಾರತಕ್ಕೆ ಬೇಕಾದ ಶೇ. 60% ಎಲ್ಪಿಜಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು. ಈ ಆಮದಿತ ಎಲ್ಪಿಜಿಯಲ್ಲಿ ಶೇ. 90ರಷ್ಟವು ಈಗ ಯುದ್ಧವಾಗುತ್ತಿರುವ ಗಲ್ಫ್ ರಾಷ್ಟ್ರಗಳಿಂದ ಬರಬೇಕು. ಹೀಗಾಗಿ, ಎಲ್ಪಿಜಿ ಪೂರೈಕೆ ಭಾರತದಲ್ಲಿ ವ್ಯತ್ಯಯ ಆಗಿರುವುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *