T20 ವಿಶ್ವಕಪ್ 2026: T20 ನಿಂದ ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಈ ಸೋಲಿನ ಭಾರತ ತಂಡಕ್ಕೆ ಸೆಮಿನಲ್ಗೇರಲು ಅವಕಾಶವಿದೆ. ಈ ಅವಕಾಶದೊಂದಿಗೆ ಟೀಮ್ ಇಂಡಿಯಾ ತನ್ನ ಗೆಲುವಿನ ಅಂತರವನ್ನೂ ಸಹ ನೋಡಿಕೊಳ್ಳಬೇಕಾಗಿದೆ. ಏಕೆಂದರೆ ಸೆಮಿಫೈನಲ್ ರೇಸ್ನಲ್ಲಿ ಒಟ್ಟು 4 ತಂಡಗಳು, ಈ ನಾಲ್ಕು ತಂಡಗಳಲ್ಲಿ ಎರಡು ತಂಡಗಳು ಮುಂದಿನ ಹಂತಕ್ಕೆ ಬರಲಿವೆ.
ಆದರೆ ಇತ್ತ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತ ನೆಟ್ ರನ್ ರೇಟ್ (NRR) -3.800 ಗೆ ಕುಸಿದಿದೆ. ಹೀಗಾಗಿ ಭಾರತ ತಂಡವು ಮುಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಲೇಬೇಕು. ಅದರಂತೆ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿಯ ಸಮೀಕರಣಗಳು ಹೇಗಿವೆ ಎಂದು ನೋಡುವುದಾದರೆ…
- ಎರಡು ಗೆಲುವು: ಭಾರತ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸಬೇಕು. ಅಂದರೆ ಝಿಂಬಾಬ್ವೆ (ಫೆಬ್ರವರಿ 26) ಮತ್ತು ವೆಸ್ಟ್ ಇಂಡೀಸ್ (ಮಾರ್ಚ್ 1) ತಂಡಗಳನ್ನು ಸೋಲಿಸಬೇಕು.
- 4 ಅಂಕಗಳು: ಮುಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಟೀಮ್ ಇಂಡಿಯಾ ಒಟ್ಟು 4 ಅಂಕಗಳನ್ನು ಪಡೆಯಲಿದೆ.
- ಭಾರೀ ಅಂತರದ ಗೆಲುವು: ಪ್ರಸ್ತುತ ನೆಟ್ ರನ್ ರೇಟ್ ತುಂಬಾ ಕಡಿಮೆ ಭಾರತ, ಮುಂಬರುವ ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಬಹಳ ಮುಖ್ಯ. ಒಂದು ವೇಳೆ ಪಾಯಿಂಟ್ಸ್ ಟೈಂ ಉಂಟಾದರೆ, ಉತ್ತಮ ರನ್ ರೇಟ್ ಇರುವ ತಂಡಕ್ಕೆ ಆದ್ಯತೆ ಸಿಗುತ್ತದೆ.
- ಇತರ ತಂಡಗಳ ಫಲಿತಾಂಶ: ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ವಿರುದ್ಧವೂ ಗೆದ್ದರೆ ಭಾರತದ ಹಾದಿ ಸುಗಮವಾಗುತ್ತದೆ. ಒಂದು ವೇಳೆ ವೆಸ್ಟ್ ಇಂಡೀಸ್ ಅಥವಾ ಝಿಂಬಾಬ್ವೆ ಇತರ ಪಂದ್ಯಗಳನ್ನು ಗೆದ್ದರೆ, ಅಂಕಗಳ ಸಮಬಲ ಏರ್ಪಟ್ಟು ರನ್ ರೇಟ್ ಲೆಕ್ಕಾಚಾರಕ್ಕೆ ಬರಲಿದೆ.
ಅಂದರೆ ಇಲ್ಲಿ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸದೇ ಟೀಮ್ ಇಂಡಿಯಾ ಸೆಮಿಫೈನಲ್ ಗೇರಬೇಕಿದ್ದರೆ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಭಾರೀ ಅಂತರದಿಂದ ಸೋಲಿಸಬೇಕು. ಈ ಮೂಲಕ ಉತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳಬಹುದು.
ಇದರಿಂದ ಝಿಂಬಾಬ್ವೆ ಅಥವಾ ವೆಸ್ಟ್ ಇಂಡೀಸ್ ಉಳಿದ 2 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೂ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾವನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಈ ಮೂಲಕ ಭಾರತ ತಂಡವು ಗ್ರೂಪ್-1 ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಸೆಮಿಫೈನಲ್ ಗೇರಬಹುದು.
ಇಲ್ಲಿ ಭಾರತ ತಂಡಕ್ಕೆ ಗೆಲುವಿನೊಂದಿಗೆ ನೆಟ್ ರನ್ ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್ ಗೇರಬೇಕಿದ್ದರೆ ಕೇವಲ ಗೆದ್ದರೆ ಮಾತ್ರ ಸಾಕಾಗುವುದಿಲ್ಲ, ಬದಲಾಗಿ -3.800 ಇರುವ ನೆಟ್ ರನ್ ರೇಟ್ ಅನ್ನು ಪ್ಯಾಸಿಟಿಮ್ ಆಗಿ ಬದಲಿಸಬೇಕಾದ ಅನಿವಾರ್ಯತೆ ಕೂಡ ಇದೆ.
ಇದನ್ನೂ ಓದಿ: ಟಿ20 ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲುಂಡ ಟೀಮ್ ಇಂಡಿಯಾ
ಮುಂದಿನ ಪಂದ್ಯಗಳು: ಭಾರತದ
- ಫೆಬ್ರವರಿ 26: ಭಾರತ vs ಜಿಂಬಾಬ್ವೆ (ಚೆನ್ನೈ, ಸಂಜೆ 7:00)
- ಮಾರ್ಚ್ 1: ಭಾರತ vs ವೆಸ್ಟ್ ಇಂಡೀಸ್ (ಕೋಲ್ಕತ್ತಾ, ಸಂಜೆ 7:00)