
ಜನವರಿ 16: ಹಾರ್ಮುಜ್ ಜಲಸಂಧಿಯನ್ನು ಬ್ಲಾಕ್ ಮಾಡಿದ್ದ ಇರಾನ್ ಮೊನ್ನೆಯಷ್ಟೇ ಎರಡು ಭಾರತೀಯ ಗ್ಯಾಸ್ ಟ್ಯಾಂಕರ್‌ಗಳು (ಭಾರತೀಯ ಫ್ಲ್ಯಾಗ್ಡ್ ಗ್ಯಾಸ್ ಟ್ಯಾಂಕರ್‌ಗಳು) ಸಾಗಲು ಅನುಮತಿ ನೀಡಿದೆ. ಈ ವಿಚಾರದ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಹೇಳಿದ್ದಾರೆ. ಭಾರತೀಯ ಹಡಗುಗಳಿಗೆ ಇರಾನ್ ಅನುಮತಿಸಿರುವುದರ ಹಿಂದೆ ಯಾವುದೇ ಒಪ್ಪಂದವಿಲ್ಲ. ಇದು ಎರಡು ದೇಶಗಳ ನಡುವಿನ ಸಂಬಂಧದ ಫಲ, ಮಾತುಕತೆ ಫಲ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ, ಭಾರತದ ಹಡಗುಗಳಿಗೆ ಇರಾನ್ ಒಪ್ಪಿಗೆ ಕೊಟ್ಟಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಜೈಶಂಕರ್ ಅವರು ಈ ಸ್ಪಷ್ಟನೆ ಕೊಟ್ಟಿದ್ದು, ಇರಾನ್ ಮಾಡಿರುವ ಸಹಾಯಕ್ಕೆ ಬದಲಾಗಿ ಭಾರತಕ್ಕೆ ಹೆಚ್ಚಿನ ನೆರವು ನೀಡಿಲ್ಲ.
ಇದನ್ನೂ ಓದಿ: ಸರ್ಕಾರದಿಂದ ಎಲ್ ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ
‘ಇದು ವಿನಿಮಯದ ವಿಚಾರ ಅಲ್ಲ. ಭಾರತ ಮತ್ತು ಇರಾನ್ ನಡುವೆ ಸಂಬಂಧ ಮೊದಲಿನಿಂದಲೂ ಇದೆ. ಇದರ ಆಧಾರದ ಮೇಲೆ ನಾನು ಮಾತುಕತೆ ನಡೆಸಿದೆ. ಈ ಮಾತುಕತೆಯು ಕೆಲ ಫಲ ಕೊಟ್ಟಿದೆ. ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಮಾತುಕತೆಯಿಂದ ಫಲ ದೊರಕುತ್ತಿದೆ ಎಂದಾದರೆ ಖಂಡಿತವಾಗಿಯೂ ನಾನು ಆ ಯೋಜನೆಗೆ ಮುಂದುವರಿಯುತ್ತೇನೆ’ ಎಂದು ಸಲಹೆ ನೀಡಿದರು.
‘ಇವು ಇನ್ನೂ ಆರಂಭಿಕ ದಿನಗಳಷ್ಟೇ. ನಮ್ಮ ಇನ್ನೂ ಹಲವು ಹಡಗುಗಳು ಅಲ್ಲಿವೆ. ಈಗ ಎರಡು ಹಡಗುಗಳನ್ನು ಬಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ. ಆದಾಗ್ಯೂ, ಮಾತುಕತೆ ಮುಂದುವರಿಯುತ್ತಿದೆ ಹೌದು’ ಎಂದು ಜೈಶಂಕರ್ ವಿವರಿಸಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?
ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಇರಾನ್ ಅಧ್ಯಕ್ಷ ಮಸೂದ್ ಪೆಜೆಶಕಿಯನ್ ಜೊತೆ ಮಾತನಾಡಿ, ಇಂಧನ ಮತ್ತು ಸರಕುಗಳ ಸಾಗಣೆ ವಿಚಾರವನ್ನು ಚರ್ಚಿಸಿದ್ದಾರೆ. ಅದೇ ವೇಳೆ, ಇರಾನ್‌ನಿಂದ ತಡೆ ಎದುರಿಸುತ್ತಿರುವ ಹಾರ್ಮುಜ್ ಜಲಸಂಧಿ ಮೂಲಕ ಎಲ್ ಪಿಜಿ ಎರಡು ಭಾರತೀಯ ಟ್ಯಾಂಕರ್‌ಗಳು ಅರೇಬಿಯನ್ ಸಮುದ್ರ ಪ್ರವೇಶಿಸಿ ಭಾರತವನ್ನು ತಲುಪುತ್ತಿದ್ದಾರೆ. ಶಿವಾಲಿಕ್ ಮತ್ತು ನಂದಾದೇವಿ ಹೆಸರಿನ ಈ ಹಡಗುಗಳು ಇನ್ನೆರಡು ದಿನದೊಳಗೆ ಮುಂದ್ರಾ ಮತ್ತು ಕಾಂಡ್ಲಾ ಪೋರ್ಟ್‌ಗಳಿಗೆ ಬರುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ