Headlines

IND vs PAK: ಹೀಗೆ ಗೆದ್ದರೆ ಮಾತ್ರ ಭಾರತ vs ಪಾಕಿಸ್ತಾನ್ ಮತ್ತೆ ಮುಖಾಮುಖಿ

IND vs PAK: ಹೀಗೆ ಗೆದ್ದರೆ ಮಾತ್ರ ಭಾರತ vs ಪಾಕಿಸ್ತಾನ್ ಮತ್ತೆ ಮುಖಾಮುಖಿ


T20 ವಿಶ್ವಕಪ್ 2026: T20 ನಿಂದ ಮೊದಲ ಸುತ್ತಿನಿಂದ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಈ ಎಂಟು ತಂಡಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಿರುವುದು ವಿಶೇಷ. ಅಂದರೆ ಗ್ರೂಪ್-ಎ ಯಿಂದ ಉಭಯ ತಂಡಗಳು ಸೂಪರ್-8 ಸುತ್ತಿಗೆ ಪ್ರವೇಶಿಸಿದೆ. ಇದಾಗ್ಯೂ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗುವುದಿಲ್ಲ.

ಏಕೆಂದರೆ ಉಭಯ ತಂಡಗಳು ಬೇರೆ ಬೇರೆ ಗುಂಪುಗಳಲ್ಲಿ ಸ್ಥಾನ ಪಡೆದಿವೆ. ಸೂಪರ್-8 ಸುತ್ತಿನಲ್ಲಿ ಎಂಟು ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಆ ಗುಂಪಿನಲ್ಲಿರುವ ತಂಡಗಳು…

  • ಗುಂಪು 1: ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.
  • ಗುಂಪು 2: ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ.

ಸೂಪರ್-8 ಪಂದ್ಯಗಳು ನಡೆಯುವುದು ಗುಂಪಿನಲ್ಲಿರುವ ತಂಡಗಳ ನಡುವೆ. ಅಂದರೆ ಭಾರತ ತಂಡವು ತನ್ನ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ವಿರುದ್ಧ ತಲಾ ಒಂದೊಂದು ಪಂದ್ಯಗಳನ್ನಾಡಲಿದೆ.

ಅತ್ತ ಗ್ರೂಪ್-2 ಪಾಕಿಸ್ತಾನ್ ತಂಡವು ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಎದುರಿಸಲಿದೆ. ಹೀಗಾಗಿ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಗೆ ಯಾವುದೇ ಅವಕಾಶವಿಲ್ಲ. ಇದಾಗ್ಯೂ ಮುಂದಿನ ಹಂತಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎದುರಾಗಬಹುದು.

ನಾಕೌಟ್ನಲ್ಲಿ ಮುಖಾಮುಖಿ:

ಸೂಪರ್-8 ಸುತ್ತಿನಲ್ಲಿ ಎರಡು ಗುಂಪುಗಳಿಗೆ ಪ್ರತ್ಯೇಕ ಪಾಯಿಂಟ್ಸ್ ಟೇಬಲ್ ಇರಲಿದೆ. ಈ ಅಂಕ ಪಟ್ಟಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಟಾಪ್-2 ನಲ್ಲಿ ಕಾಣಿಸಿಕೊಂಡರೆ ಮಾತ್ರ ಸೆಮಿಫೈನಲ್‌ಗೆ ಪ್ರವೇಶಿಸಲಾಗಿದೆ. ಅದರಂತೆ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಬಹುದು.

ಆದರೆ ಇಲ್ಲಿ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಬೇಕಿದ್ದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಉಭಯ ತಂಡಗಳ ಸ್ಥಾನಗಳು ಬದಲಾಗಬೇಕು. ಅದರ ವಿವರಗಳು ಈ ಕೆಳಗಿನಂತಿವೆ…

  • ಸೂಪರ್-8 ಸುತ್ತಿನಲ್ಲಿ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಭಾರತವು ಮೊದಲ ಸ್ಥಾನವನ್ನು ಪಡೆದರೆ, ಗ್ರೂಪ್-2 ಅಂಕದಲ್ಲಿ ಪಾಕಿಸ್ತಾನ್ ದ್ವಿತೀಯ ಸ್ಥಾನವನ್ನು ಪಡೆಯಬೇಕು. ಹೀಗಾದಲ್ಲಿ ಮಾತ್ರ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ.
  • ಸೂಪರ್-8 ಸುತ್ತಿನಲ್ಲಿ ಗ್ರೂಪ್-2ರ ಪಾಯಿಂಟ್ಸ್ ಟೇಬಲ್‌ನಲ್ಲಿ ಪಾಕಿಸ್ತಾನ್ ತಂಡ ಮೊದಲ ಸ್ಥಾನ ಪಡೆದರೆ, ಗ್ರೂಪ್-2 ಅಂಕಪಟ್ಟಿಯಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದರೂ ಸಹ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಬದುರಾಗಲಿದೆ.

ಫೈನಲ್‌ನಲ್ಲಿ ಮುಖಾಮುಖಿ:

ಭಾರತ ಮತ್ತು ಪಾಕಿಸ್ತಾನ್ ಸೂಪರ್-8 ಸುತ್ತಿನ ಅಂಕಗಳ ಮೊದಲ ಸ್ಥಾನಗಳು ಅಥವಾ ಎರಡನೇ ಸ್ಥಾನಗಳನ್ನು ಪಡೆದರೆ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲು ಸಾಧ್ಯವಿಲ್ಲ. ಇದಾಗ್ಯೂ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಗೆದ್ದರೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: T20 World Cup 2026: ಸೂಪರ್-8 ಸುತ್ತಿನ ಸಂಪೂರ್ಣ ಸಾಧ್ಯತೆ ಇಲ್ಲಿದೆ

ಅಂದರೆ ಉಭಯ ತಂಡಗಳು ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದರೆ ಅಥವಾ ದ್ವಿತೀಯ ಸ್ಥಾನಗಳನ್ನು ಹೊಂದಿದ್ದರೆ ಸೆಮಿಫೈನಲ್‌ನಲ್ಲಿ ಬೇರೆ ತಂಡಗಳ ವಿರುದ್ಧ ಸೆಣಸಲಿದೆ. ಈ ಪಂದ್ಯಗಳಲ್ಲಿ ಜಯ ಸಾಧಿಸಿ ಭಾರತ ಮತ್ತು ಪಾಕಿಸ್ತಾನ್ ಫೈನಲ್‌ಗೇರಿದರೆ ಮತ್ತೊಮ್ಮೆ ಇಂಡೋ-ಪಾಕ್ ಕ್ರಿಕೆಟ್ ಕದನ ವೀಕ್ಷಿಸುವ ಅವಕಾಶ ಲಭ್ಯವಾಗಲಿದೆ.

ರಂದು ಪ್ರಕಟಿಸಲಾಗಿದೆ – 10:31 am, ಗುರುವಾರ, 19 ಫೆಬ್ರವರಿ 26



Source link

Leave a Reply

Your email address will not be published. Required fields are marked *