ಹೀಗೆ ಮಾಡಿದ್ರೆ ಹಸಿ ತೆಂಗಿನಕಾಯಿ ತುರಿ 6 ತಿಂಗಳಾದ್ರೂ ಹಾಳಾಗಲ್ಲ; ಎಷ್ಟೋ ಜನರಿಗೆ ಗೊತ್ತಿಲ್ಲದ ಸೀಕ್ರೇಟ್!

ಹೀಗೆ ಮಾಡಿದ್ರೆ ಹಸಿ ತೆಂಗಿನಕಾಯಿ ತುರಿ 6 ತಿಂಗಳಾದ್ರೂ ಹಾಳಾಗಲ್ಲ; ಎಷ್ಟೋ ಜನರಿಗೆ ಗೊತ್ತಿಲ್ಲದ ಸೀಕ್ರೇಟ್!

ಹೀಗೆ ಮಾಡಿದ್ರೆ ಹಸಿ ತೆಂಗಿನಕಾಯಿ ತುರಿ 6 ತಿಂಗಳಾದ್ರೂ ಹಾಳಾಗಲ್ಲ; ಎಷ್ಟೋ ಜನರಿಗೆ ಗೊತ್ತಿಲ್ಲದ ಸೀಕ್ರೇಟ್!

How to keep fresh coconut from spoiling: ಇಂದು ಗಡಿಬಿಡಿಯ ಜೀವನದಲ್ಲಿದ್ದೇವೆ, ತೆಂಗಿನಕಾಯಿ ತುರಿಯನ್ನು ಹೇಗೆ ಜಾಸ್ತಿ ದಿನ ಇಡಬಹುದು? ಹಾಳಾಗದಂತೆ ಹೇಗೆ ತಡೆಯಬಹುದು ಎಂದು ಅನೇಕರಿಗೆ ಸಂದೇಹ ಇರುತ್ತದೆ. ಇದಕ್ಕೆ ಉತ್ತಮವಾದ ಪರಿಹಾರ ಇಲ್ಲಿದೆ, ಈ ವಿಧಾನಗಳನ್ನು ಅನುಸರಿಸಿ.

ತೆಂಗಿನಕಾಯಿ ತುರಿಯನ್ನು 1 ರಿಂದ 3 ತಿಂಗಳು ಕಾಲ ಇಡಬಹುದು. ತೆಂಗಿನಕಾಯಿ ತುರಿದ ಬಳಿಕ, ಅದನ್ನು ಗಾಳಿಯಾಡದ ಡಬ್ಬ ಅಥವಾ ಜಿಪ್-ಲಾಕ್ ಬ್ಯಾಗ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಿ.

ತೆಂಗಿನಕಾಯಿ ತುರಿಯನ್ನು ಐಸ್ ಕ್ಯೂಬ್ ಟ್ರೇಗಳಲ್ಲಿ ಹಾಕಿ ಒತ್ತಿಡಿ. ಇದು ಗಟ್ಟಿ ಆದ್ಮೇಲೆ ಕ್ಯೂಬ್‌ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಫ್ರೀಜರ್‌ನಲ್ಲಿಡಿ. ಅಡುಗೆ ಮಾಡುವಾಗ ಎಷ್ಟು ಬೇಕೋ ಅಷ್ಟು ಕ್ಯೂಬ್‌ ಬಳಸಬಹುದು.

ತೆಂಗಿನಕಾಯಿ ತುರಿಯಲ್ಲಿ ನೀರಿನಾಂಶ ಹೆಚ್ಚಿದ್ದರೆ ಅದು ಬೇಗ ಹಾಳಾಗುವುದು. ತೆಂಗಿನ ತುರಿಯನ್ನು ಒಂದು ಬಾಣಲೆಯಲ್ಲಿ ಹಾಕಿ 2-3 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಅದನ್ನು ಡಬ್ಬದಲ್ಲಿ ಹಾಕಿಡಿ. ಇದರಿಂದ ತೇವಾಂಶ ಆರಿ, ಹೆಚ್ಚು ದಿನ ಬಾಳಿಕೆ ಬರುವುದು.

ತೆಂಗಿನಕಾಯಿ ತುರಿಯುವ ಮೊದಲು, ಹೋಳುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು, ಆಮೇಲೆ ತುರಿದರೆ, ಅದರಲ್ಲಿರುವ ಎಣ್ಣೆಯಂಶ ತಾಜಾವಾಗಿರುತ್ತದೆ.

ತೆಂಗಿನಕಾಯಿ ತುರಿಗೆ ಉಪ್ಪು ಅಥವಾ ನಿಂಬೆ ರಸ ಬೆರೆಸಿ ಫ್ರಿಡ್ಜ್‌ನಲ್ಲಿ ಇಡಬಹುದು

ಪದೇ ಪದೇ ಫ್ರೀಜರ್‌ನಿಂದ ಆ ಡಬ್ಬವನ್ನು ಹೊರತೆಗೆದು, ಒಳಗೆ ಇಡಬೇಡಿ.ಬೇಕಾದಷ್ಟನ್ನು ಮಾತ್ರ ತೆಗೆದು, ಉಳಿದಿದ್ದನ್ನು ತಕ್ಷಣವೇ ಇಡಿ.ತುರಿಯುವ ಮಣೆ, ಮಿಕ್ಸಿ ಜಾರ್ ಸಂಪೂರ್ಣವಾಗಿ ಒಣಗಿರಲಿ.

Source link

Leave a Reply

Your email address will not be published. Required fields are marked *