
ನಟಿ ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಕನ್ನಡದ ನಟಿಯಾದರೂ ಈಗ ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿಯೇ. ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆದು, ತಮಿಳಿನಲ್ಲೂ ಬೇಡಿಕೆಯ ನಟಿ ಎನಿಸಿಕೊಂಡು ಬಳಿಕ ಪ್ರಶಸ್ತಿಗೆ ಪದಾರ್ಪಣೆ ಮಾಡಿ, ಅಲ್ಲಿಯೂ ಸಹ ಸಾವಿರಾರು ಕೋಟಿ ಗಳಿಕೆಯ ಸಿನಿಮಾಗಳ ಭಾಗವಾಗಿ ಈಗ ಬಾಲಿವುಡ್ ನ ಬ್ಯುಸಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ ರಶ್ಮಿಕಾ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಜೊತೆಗೆ ವಿವಾಹವಾದ ನಟಿ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬ ಇಂದು (ಏಪ್ರಿಲ್ 05). ಅಂದಹಾಗೆ ಈ ಬ್ಯೂಸಿ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಇರುವ ಸಿನಿಮಾಗಳೆಷ್ಟು?
ರಶ್ಮಿಕಾ ಮಂದಣ್ಣ ಭಾರತದ ಬಲು ಬ್ಯುಸಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಅವರ ಕೈಯಲ್ಲಿ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯ ಹಲವು ಸಿನಿಮಾಗಳಿವೆ. ಪ್ರಸ್ತುತ ಅವರ ಒಂದು ಹಿಂದಿ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದುವೇ ‘ಕಾಕ್ಟೇಲ್ 2’. ಶಾಹಿದ್ ಕಪೂರ್ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಕೃತಿ ಸನೋನ್ ಅವರುಗಳೊಟ್ಟಿಗೆ ರಶ್ಮಿಕಾ ಮಂದಣ್ಣ ‘ಕಾಕ್ಟೇಲ್ 2’ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಏಪ್ರಿಲ್ 8ಕ್ಕೆ ಬಿಡುಗಡೆಯಾಗಲಿದೆ.
ಇದೀಗ ಪತಿ ವಿಜಯ್ ದೇವರಕೊಂಡ ಜೊತೆಗೆ ‘ರಣಬಾಲಿ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ‘ಜಯಮ್ಮ’ ಹೆಸರಿನ ಪಾತ್ರ. ಹಲವು ವರ್ಷಗಳ ಬಳಿಕ ಮತ್ತೆ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ ರಶ್ಮಿಕಾ. ಇದರ ಜೊತೆಗೆ ‘ಮೈಸಾ’ ಹೆಸರಿನ ಆಕ್ಷನ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಇದು ಮಹಿಳಾ ಪ್ರಧಾನ ಸಿನಿಮಾ ಎಂಬುದು ವಿಶೇಷ. ಇದು ಅವರ ಮೊದಲ ಸೋಲೊ ಆಕ್ಷನ್ ಸಿನಿಮಾ ಆಗಿರುತ್ತದೆ.
ಇದನ್ನೂ ಓದಿ:’ಈಗ ನಾವು ಮೂವರು’; ಮದುವೆ ಆದ ಒಂದೇ ತಿಂಗಳಿಗೆ ಸಿಹಿ ಸುದ್ದಿ ಕೊಟ್ರಾ ರಶ್ಮಿಕಾ?
ವಿಜಯ್ ದೇವರಕೊಂಡ ಜೊತೆಗೆ ‘ಗೀತಾ ಗೋವಿಂದಂ 2’ ಸಿನಿಮಾ ಸಹ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಸಿನಿಮಾವನ್ನು ದಿಲ್ ರಾಜು ನಿರ್ಮಿಸಲಿದೆ, ಸಿನಿಮಾದ ಘೋಷಣೆ ಸಹ ಆಗಿದೆ. ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶನ ಮಾಡುತ್ತಿರುವ ಫ್ಯೂಚರಿಸ್ಟಿಕ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗಟ್ಟಿಯಾಗುತ್ತಿದೆ. ಅಂದಹಾಗೆ ‘ಪುಷ್ಪ 3’ ಸಿನಿಮಾದಲ್ಲಿಯೂ ರಶ್ಮಿಕಾ ಇರುವುದು ಖಾತ್ರಿ.
ಇವುಗಳ ಜೊತೆಗೆ ತಮಿಳಿನಲ್ಲಿ ಅಜಿತ್ ನಟಿಸಲಿರುವ ಹೊಸ ಸಿನಿಮಾಕ್ಕೆ ರಶ್ಮಿಕಾ ನಾಯಕಿ ಎನ್ನುತ್ತಿದ್ದಾರೆ. ಹಿಂದಿಯಲ್ಲಿ ಸಹ ಕೆಲ ಹೊಸ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಟೈಗರ್ ಶ್ರಾಫ್ ಜೊತೆಗೆ ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ. ಕೆಲ ಸಿನಿಮಾಗಳ ಘೋಷಣೆ ಆಗಿದೆ, ಕೆಲ ಸಿನಿಮಾಗಳ ಘೋಷಣೆ ಆಗಬೇಕಿದೆ. ಒಟ್ಟಾರೆ ರಶ್ಮಿಕಾರ ವೃತ್ತಿ ಜೀವನ ಬಲು ಜೋರಾಗಿಯೇ ನಡೆಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ