ಜೀನ್ಸ್ ಪ್ಯಾಂಟ್ 2 ದಿನಕ್ಕೊಮ್ಮೆ ತೊಳೆಯಬೇಕಾ ಅಥವಾ ವಾರಕ್ಕೊಮ್ಮೆ? ತಜ್ಞರ ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

ಜೀನ್ಸ್ ಪ್ಯಾಂಟ್  2 ದಿನಕ್ಕೊಮ್ಮೆ ತೊಳೆಯಬೇಕಾ ಅಥವಾ ವಾರಕ್ಕೊಮ್ಮೆ? ತಜ್ಞರ ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

ಜೀನ್ಸ್ ಪ್ಯಾಂಟ್  2 ದಿನಕ್ಕೊಮ್ಮೆ ತೊಳೆಯಬೇಕಾ ಅಥವಾ ವಾರಕ್ಕೊಮ್ಮೆ? ತಜ್ಞರ ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

How to wash jeans: ಜೀನ್ಸ್ ಒಂದು ಸ್ಟೈಲಿಶ್ ಮತ್ತು ಆರಾಮದಾಯಕ ಉಡುಗೆ. ಪುರುಷರು, ಮಹಿಳೆಯರು, ಮಕ್ಕಳು ಹೀಗೆ ಎಲ್ಲರೂ ಜೀನ್ಸ್ ಧರಿಸಲು ಇಷ್ಟಪಡುತ್ತಾರೆ. ಆದರೆ, ಅವುಗಳನ್ನು ಯಾವಾಗ ತೊಳೆಯಬೇಕು ಎಂಬ ಬಗ್ಗೆ ಅನೇಕರಲ್ಲಿ ಗೊಂದಲವಿರುತ್ತದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬ ವಿವರ ಇಲ್ಲಿದೆ…

ಇಂದಿನ ದಿನಗಳಲ್ಲಿ ಜೀನ್ಸ್ ಕೇವಲ ಒಂದು ಬಟ್ಟೆಯಲ್ಲ, ಅದು ಪ್ರತಿಯೊಬ್ಬರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ. ಕಾಲೇಜು, ಆಫೀಸ್ ಅಥವಾ ಸಾಮಾನ್ಯ ಹೊರಗಿನ ಓಡಾಟಕ್ಕೂ ಸರಿಯಾಗಿ ಹೊಂದಿಕೊಳ್ಳುವ ಜೀನ್ಸ್ ಪ್ಯಾಂಟ್ ಸ್ಟೈಲ್ ಮತ್ತು ಕಂಫರ್ಟ್ ಎರಡನ್ನೂ ನೀಡುತ್ತದೆ. ಆದರೆ ಅದನ್ನು ಪದೇ ಪದೇ ಅಥವಾ ತಪ್ಪಾಗಿ ತೊಳೆಯುವುದು ಎಲ್ಲರೂ ಮಾಡುವ ಸಾಮಾನ್ಯ ತಪ್ಪು. ಹೀಗೆ ಮಾಡುವುದರಿಂದ ಜೀನ್ಸ್ ಬಟ್ಟೆ ಬೇಗನೆ ಹಾಳಾಗಬಹುದು ಅಥವಾ ಬಣ್ಣ ಮಸುಕಾಗಬಹುದು. ಕೆಲವರು ಪ್ರತಿ ಬಾರಿ ಧರಿಸಿದಾಗಲೂ ತೊಳೆಯುತ್ತಾರೆ, ಇನ್ನು ಕೆಲವರು ತಿಂಗಳುಗಟ್ಟಲೆ ತೊಳೆಯುವುದೇ ಇಲ್ಲ. ಜೀನ್ಸ್‌ನ ಬಾಳಿಕೆ, ಫಿಟ್ಟಿಂಗ್ ಮತ್ತು ಬಣ್ಣವನ್ನು ಕಾಪಾಡಿಕೊಳ್ಳಲು ಅದನ್ನು ಸರಿಯಾದ ಸಮಯದಲ್ಲಿ ತೊಳೆಯುವುದು ಬಹಳ ಮುಖ್ಯ.

ಜೀನ್ಸ್ ಇತರ ಬಟ್ಟೆಗಳಿಗಿಂತ ಗಟ್ಟಿಯಾಗಿರುತ್ತದೆ, ಆದರೆ ಹಾಗೆಂದು ಹೇಗೆಂದರೆ ಹಾಗೆ ತೊಳೆಯಬಾರದು. ಪದೇ ಪದೇ ತೊಳೆಯುವುದರಿಂದ ಬಣ್ಣ ಹೋಗುವುದು ಮತ್ತು ಬಟ್ಟೆ ಲೂಸ್ ಆಗುವುದು ಸಂಭವಿಸಬಹುದು.

ಜೀನ್ಸ್ ಅನ್ನು ಯಾವಾಗ ತೊಳೆಯಬೇಕು ಎಂಬುದು ನೀವು ಅದನ್ನು ಎಷ್ಟು ಬಾರಿ ಧರಿಸುತ್ತೀರಿ, ವಾತಾವರಣ ಮತ್ತು ನಿಮ್ಮ ಬಳಕೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ವಿಷಯದಲ್ಲಿ ಫ್ಯಾಷನ್ ತಜ್ಞರು ಭಿನ್ನ ಅಭಿಪ್ರಾಯ ಹೊಂದಿದ್ದರೂ, ಬ್ರಿಟಿಷ್ ಫ್ಯಾಷನ್ ಡಿಸೈನರ್ ಟಾನ್ ಫ್ರಾನ್ಸ್ ಅವರು ತಾವು ತಮ್ಮ ಜೀನ್ಸ್ ಅನ್ನು 20 ಬಾರಿ ಧರಿಸಿದ ನಂತರ ತೊಳೆಯುವುದಾಗಿ ತಿಳಿಸಿದ್ದಾರೆ.

ಸಾಮಾನ್ಯವಾಗಿ, ಜೀನ್ಸ್ ಅನ್ನು 10 ರಿಂದ 12 ಬಾರಿ ಧರಿಸಿದ ನಂತರ ತೊಳೆಯಬೇಕು. ಆದರೆ ನೀವು ಅತಿಯಾದ ಬಿಸಿಲು ಅಥವಾ ಬೆವರುವ ಪ್ರದೇಶದಲ್ಲಿದ್ದರೆ, 2 ರಿಂದ 3 ಬಾರಿ ಧರಿಸಿದ ನಂತರ ತೊಳೆಯುವುದು ಉತ್ತಮ. ಚಳಿಗಾಲದಲ್ಲಿ ಜೀನ್ಸ್ ಅನ್ನು 7 ರಿಂದ 8 ಬಾರಿ ಧರಿಸಿದ ನಂತರ ತೊಳೆಯಬಹುದು.

ಜೀನ್ಸ್ ಅನ್ನು ಉಲ್ಟಾ ಮಾಡಿ ತೊಳೆಯಿರಿ: ತೊಳೆಯುವ ಮೊದಲು ಜೀನ್ಸ್ ಅನ್ನು ಯಾವಾಗಲೂ ಒಳಗಿನ ಭಾಗ ಹೊರಗೆ ಬರುವಂತೆ (Inside-out) ತಿರುಗಿಸಿ. ಇದರಿಂದ ಹೊರಗಿನ ಬಣ್ಣವು ನೇರವಾಗಿ ಡಿಟರ್ಜೆಂಟ್ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ಬಣ್ಣ ಮಾಸುವುದಿಲ್ಲ.ತಣ್ಣೀರು ಬಳಸಿ: ಜೀನ್ಸ್ ತೊಳೆಯಲು ಯಾವಾಗಲೂ ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರನ್ನು ಬಳಸಿ. ಬಿಸಿ ನೀರು ಬಟ್ಟೆಯ ನಾರನ್ನು ಹಾನಿಗೊಳಿಸಿ ಬಣ್ಣ ಹೋಗುವಂತೆ ಮಾಡುತ್ತದೆ.ಮೃದುವಾದ ಡಿಟರ್ಜೆಂಟ್ ಬಳಸಿ: ಕಠಿಣವಾದ ರಾಸಾಯನಿಕಗಳಿಲ್ಲದ ಮೃದುವಾದ ಡಿಟರ್ಜೆಂಟ್ ಜೀನ್ಸ್‌ಗೆ ಉತ್ತಮ. ಇದು ಬಟ್ಟೆಯ ಬಾಳಿಕೆಯನ್ನು ಹೆಚ್ಚಿಸುತ್ತದೆ.ಪದೇ ಪದೇ ತೊಳೆಯಬೇಡಿ: ಪ್ರತಿ ಬಾರಿ ಧರಿಸಿದ ನಂತರ ಜೀನ್ಸ್ ತೊಳೆಯುವ ಅಗತ್ಯವಿಲ್ಲ. ಪ್ರತಿ 2 ರಿಂದ 3 ವಾರಕ್ಕೊಮ್ಮೆ ತೊಳೆಯುವುದು ಸೂಕ್ತ.ನೇರ ಸೂರ್ಯನ ಬೆಳಕಿನಿಂದ ದೂರವಿಡಿ: ಜೀನ್ಸ್ ಅನ್ನು ನೇರವಾಗಿ ಬಿಸಿಲಿನಲ್ಲಿ ಒಣಗಿಸುವುದರಿಂದ ಬಣ್ಣ ಬೇಗನೆ ಮಾಸುತ್ತದೆ. ನೆರಳಿನಲ್ಲಿ ಅಥವಾ ಗಾಳಿಯಾಡುವ ಜಾಗದಲ್ಲಿ ಒಣಗಿಸುವುದು ಉತ್ತಮ.

Source link

Leave a Reply

Your email address will not be published. Required fields are marked *