
ಐಪಿಎಲ್ 2026: ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆಟಗಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಶುಕ್ರವಾರ (ಏ.10) ನಡೆಯಲಿರುವ ಈ ಅಂಗಡಿ ಆರ್ಸಿಬಿ ಪರ ಕಣಕ್ಕಿಳಿಯುವ ವಿದೇಶಿ ವೇಗಿ ಯಾರು ಈಗ ಕುತೂಹಲ. ಏಕೆಂದರೆ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಹೇಲ್ವುಡ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಆರ್ ಆರ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ಜೇಕಬ್ ಡಫಿ ಆಡುವ ಬಳಗದಿಂದ ಹೊರಗುಳಿಯಬೇಕಾಗಬಹುದು.
ಆದರೆ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಈ ತಂತ್ರವನ್ನು ಅನುಸರಿಸಿದರೆ, ಇಬ್ಬರು ವಿದೇಶಿ ವೇಗಿಗಳನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಇದಕ್ಕಾಗಿ ಆರ್ಸಿಬಿ ಮುಂದಿರುವ ಆಯ್ಕೆಗಳು ಈ ಕೆಳಗಿನಂತಿವೆ…
- ಐಪಿಎಲ್ ನಿಯಮದ ಪ್ರಕಾರ ಒಂದು ಗರಿಷ್ಠ ನಾಲ್ವರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿದೆ. ಪ್ರಸ್ತುತ ಆರ್‌ಸಿಬಿ ತಂಡದಲ್ಲಿ ಫಿಲ್ ಸಾಲ್ಟ್ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಡ್ ಪ್ರಮುಖ ವಿದೇಶಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇವರ ನಡುವೆ ಇಬ್ಬರು ವಿದೇಶಿ ವೇಗಿಗಳನ್ನು ಸೇರಿಸುವುದು ಸವಾಲಿನ ಕೆಲಸ.
ಇಬ್ಬರನ್ನೂ ಆಡಿಸಲು ಇರುವ ಆಯ್ಕೆಗಳು:
ಒಬ್ಬ ವಿದೇಶಿ ಬ್ಯಾಟರ್ ಅನ್ನು ಕೈಬಿಡುವುದು: ತಂಡದ ಬೌಲಿಂಗ್ ಅನ್ನು ಸಮರ್ಥಿಸಲು ಆರ್‌ಸಿಬಿ ಒಬ್ಬ ವಿದೇಶಿ ಪವರ್-ಹಿಟ್ಟರ್ ಅನ್ನು ಕೈಬಿಡಲಾಗಿದೆ. ಅಂದರೆ ಫಿಲ್ ಸಾಲ್ಟ್ ಅಥವಾ ಟಿಮ್ ಡೇವಿಡ್ ಅಥವಾ ರೊಮಾರಿಯೋ ಶೆರ್ಫಡ್… ಇವರಲ್ಲಿ ಇಬ್ಬರನ್ನು ಕೈ ಬಿಡುವುದು ಅನಿವಾರ್ಯ.
ಫಿಲ್ ಸಾಲ್ಟ್ಗೆ ಕೊಕ್: ಆರ್ಸಿಬಿ ಮ್ಯಾನೇಜ್ಮೆಂಟ್ ಫಿಲ್ ಸಾಲ್ಟ್ ಬದಲಿಗೆ ಜೋಶ್ ಹೇಝಲ್ವುಡ್ ಅಥವಾ ಜೇಕಬ್ ಡಫಿ ಅವರನ್ನು ಆಡಿಸಿದರೆ, ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಬಹುದು.
ಫಿನಿಶರ್ ಬದಲಿಗೆ: ಸ್ಪೋಟಕ ದಾಂಡಿಗ ಟಿಮ್ ಡೇವಿಡ್ ಅಥವಾ ರೊಮಾರಿಯೋ ಶೆರ್ಫಡ್ ಬದಲಿಗೆ ಹೆಚ್ಚುವರಿ ವಿದೇಶಿ ಬೌಲರ್ ಅನ್ನು ಆಯ್ಕೆ ಮಾಡಿದರೆ, ಕೆಳ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅವರಿಗೆ ಫಿನಿಶಿಂಗ್ ಜವಾಬ್ದಾರಿಯನ್ನು ಹೊರಿಸಲಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಳಕೆ:
ಐಪಿಎಲ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಚಾಣಾಕ್ಷತನದಿಂದ ಬಳಸಿಕೊಂಡರೆ ಆರ್ಸಿಬಿ ಜೋಶ್ ಹೇಝಲ್ವುಡ್ ಹಾಗೂ ಜೇಕಬ್ ಡಫಿಯನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಇದಕ್ಕಾಗಿ ಆರ್ಸಿಬಿ ಮಾಡಬೇಕಿರುವುದು…
- 3 ವಿದೇಶಿ ಆಟಗಾರರು: ಪಂದ್ಯದ ಆರಂಭದಲ್ಲಿ ಆರ್ಸಿಬಿ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಹೆಸರಿಸಬೇಕು.
- ಇಂಪ್ಯಾಕ್ಟ್ ಸಬ್: ಮೊದಲು ಬ್ಯಾಟಿಂಗ್ ಮಾಡುವಾಗ ವಿದೇಶಿ ಆಟಗಾರರೊಂದಿಗೆ ಆಡಿ, ನಂತರ ಬೌಲಿಂಗ್ ಮಾಡುವಾಗ ಒಬ್ಬ ಭಾರತೀಯ ಬ್ಯಾಟರ್ ಬದಲಿಗೆ ಜೇಕಬ್ ಡಫಿ ಅಥವಾ ಜೋಶ್ ಹೇಝಲ್ವುಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತರಬಹುದು.
- ಏನು ಮಾಡಬೇಕು: ಇದಕ್ಕಾಗಿ ಆರ್ಸಿಬಿ ಫಿಲ್ ಸಾಲ್ಟ್, ಟಿಮ್ ಡೇವಿಡ್ ಮತ್ತು ಜೋಶ್ ಹೇಝಲ್ವುಡ್ ಅವರನ್ನು ಪ್ಲೇಯಿಂಗ್ ಇಲ್ಲವೆನ್ನಲ್ಲಿ ಸೇರಿಸಬೇಕು. ಜೊತೆಗೆ ರೊಮಾರಿಯೊ ಶೆಫರ್ಡ್ ಹಾಗೂ ಜೇಕಬ್ ಡಫಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಮಾಡಬೇಕು.
- ಮಾಸ್ಟರ್ ಪ್ಲ್ಯಾನ್: ಮೂವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಮತ್ತೋರ್ವ ವಿದೇಶಿ ಆಟಗಾರನನ್ನು ಕಣಕ್ಕಿಳಿಸಬಹುದು. ಅದರಂತೆ ಬ್ಯಾಟಿಂಗ್‌ಗೆ ಅನಿವಾರ್ಯತೆ ಇದ್ದರೆ ಮಾತ್ರ ರೊಮಾರಿಯೋ ಶೆರ್ಫಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬೇಕು. ಒಂದು ವೇಳೆ ಆರ್ಸಿಬಿ ತಂಡಕ್ಕೆ ರೊಮಾರಿಯೊ ಶೆಫರ್ಡ್ ಅವರ ಬ್ಯಾಟಿಂಗ್ ಅನಿವಾರ್ಯತೆ ಬರದಿದ್ದರೆ, ಬೌಲಿಂಗ್ ವೇಳೆ ಜೇಕಬ್ ಡಫಿಯನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಬಹುದು.
ಈ ಮೂಲಕ ಜೇಕಬ್ ಡಫಿ ಹಾಗೂ ಜೋಶ್ ಹೇಝಲ್ವುಡ್ ಅವರನ್ನು ಆರ್ಸಿಬಿ ಜೊತೆಯಾಗಿ ಕಣಕ್ಕಿಳಿಸಬಹುದು. ಅಂದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಜೇಕಬ್ ಡಫಿಯನ್ನು ಆಡಿಸಲು ಅಗತ್ಯವಿಲ್ಲ, ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುವಾಗ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಯ್ಕೆ ಮಾಡುವುದು ಅನಿವಾರ್ಯ.
ಜೊತೆಗೆ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ರೊಮಾರಿಯೋ ಶೆಫರ್ಡ್ ಮತ್ತು ಜೇಕಬ್ ಡಫಿ ಅವರನ್ನು ಸೇರಿಸಬೇಕು. ಇಲ್ಲಿ ಆರ್ಸಿಬಿ ಶೀಘ್ರವಾಗಿ ಹೆಚ್ಚಿನ ಹಣವನ್ನು ಕಳೆದುಕೊಂಡರೆ ಮಾತ್ರ ಶೆಫರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು. ಒಂದು ಆರ್ಸಿಬಿ 3 ಅಥವಾ 4 ವೇಳೆ ಕಳೆದುಕೊಂಡು ಬೃಹತ್ ಮೊತ್ತ ಪೇರಿಸಿದರೆ ಶೆಫರ್ಡ್ ಅವಶ್ಯಕತೆ ಎದುರಾಗುವುದಿಲ್ಲ.
ಇದನ್ನೂ ಓದಿ: ವಿಡಿಯೋ: ಗ್ಲೆನ್ ಫಿಲಿಪ್ಸ್ ಇದ್ದಾರೆ ಎಚ್ಚರಿಕೆ..!
ಹೀಗಾಗಿ ಬ್ಯಾಟಿಂಗ್ ವೇಳೆ ಇಂಪ್ಯಾಕ್ಟ್ ಪ್ಲೇಯರ್ ನನ್ನನ್ನು ಬಳಸಿಕೊಂಡಿರುವುದು ಉತ್ತಮ. ಜೊತೆಗೆ ಬೌಲಿಂಗ್ ವೇಳೆ ಬ್ಯಾಟರ್‌ನ ಕೈ ಬಿಟ್ಟು ಜೇಕಬ್ ಡಫಿ ಇನ್‌ಪ್ಯಾಕ್ಟ್ ಆಗಿ ಆಡುವ ಬಳಗಕ್ಕೆ ಸೇರಿಸಬಹುದು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೋಶ್ ಹೇಝಲ್ವುಡ್ ಹಾಗೂ ಜೇಕಬ್ ಡಫಿ ಎಂಬ ವೇಗಾಸ್ತ್ರದೊಂದಿಗೆ ಕಣಕ್ಕಿಳಿಯಬಹುದು.