Mutton Cooking Tips Kannada: ಚಿಕನ್ ಸುಲಭವಾಗಿ ಬೇಯುತ್ತೆ. ಆದರೆ ಮಟನ್ ಅಷ್ಟು ಸುಲಭವಲ್ಲ. ಮಟನ್ ಸರಿಯಾಗಿ ಬೇಯದಿದ್ದರೆ ರುಚಿ ಕೆಡುವುದಲ್ಲದೆ, ಜಿಗುಟಾಗಿ ತಿನ್ನಲು ಕಷ್ಟವಾಗುತ್ತೆ. ಆದ್ದರಿಂದ ಕೇವಲ 10-20 ನಿಮಿಷದಲ್ಲಿ ಮಟನ್ ಮೃದುವಾಗಿ ಬೇಯಲು ಇಲ್ಲಿವೆ ಕೆಲವು ಅದ್ಭುತ ಟಿಪ್ಸ್.

ಮಟನ್ ಅಡುಗೆ ಮಾಡುವಾಗ ತಾಳ್ಮೆ ಬಹಳ ಮುಖ್ಯ. ಮಾಂಸ ಎಷ್ಟೇ ಚೆನ್ನಾಗಿದ್ದರೂ ಅದು ಸಾಫ್ಟ್ ಆಗಿ ಬೇಯದಿದ್ದರೆ ಮಜಾ ಇರುವುದಿಲ್ಲ. ಆದ್ದರಿಂದ ಮಟನ್ ಅನ್ನು ಹೋಟೆಲ್ ಶೈಲಿಯಲ್ಲಿ ಮೃದುವಾಗಿ ಬೇಯಿಸಲು ಮತ್ತು ಗ್ಯಾಸ್ ಉಳಿತಾಯ ಮಾಡಲು ನೀವು ಈ ಕೆಳಗಿನ ಹಳೆಯ ಕಾಲದ ಟಿಪ್ಸ್ ಫಾಲೋ ಮಾಡಬಹುದು.

ಮಟನ್ ಮಾರುಕಟ್ಟೆಯಿಂದ ತಂದ ನಂತರ ಅದನ್ನು ತಣ್ಣೀರಿನ ಬದಲು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಅಡುಗೆ ಮಾಡುವಾಗಲೂ ತಣ್ಣೀರು ಬಳಸಬೇಡಿ, ಬಿಸಿ ನೀರನ್ನು ಬಳಸುವುದರಿಂದ ಮಟನ್ ಬೇಗನೆ ಬೇಯುತ್ತದೆ.

ಇದು ಬಹಳ ಮುಖ್ಯ. ಯಾವಾಗಲೂ ಮಟನ್ ಬೇಯಲು ಇಟ್ಟಾಗ ಆರಂಭದಲ್ಲೇ ಮಸಾಲೆಗಳನ್ನು ಹಾಕಬೇಡಿ. ಕೇವಲ ಎಣ್ಣೆ, ಅರಿಶಿನ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಟನ್ ಅನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಚೆನ್ನಾಗಿ ಬೆಂದ ನಂತರವೇ ಮಸಾಲೆಗಳನ್ನು ಸೇರಿಸಿ.

ಅಡುಗೆಯ ಆರಂಭದಲ್ಲೇ ಅತಿಯಾಗಿ ಉಪ್ಪು ಹಾಕಬೇಡಿ. ಉಪ್ಪು ಮಾಂಸವನ್ನು ಬೇಗನೆ ಮೃದುವಾಗಲು ಬಿಡುವುದಿಲ್ಲ. ಮಾಂಸ ಮುಕ್ಕಾಲು ಭಾಗ ಬೆಂದ ನಂತರ ಉಪ್ಪು ಸೇರಿಸುವುದು ಉತ್ತಮ.

ಮಟನ್ ಬೇಯಿಸುವಾಗ ಪ್ರತಿ ಮೂರು ನಿಮಿಷಕ್ಕೊಮ್ಮೆ ಸ್ವಲ್ಪ ಉಗುರುಬೆಚ್ಚಗಿನ ನೀರನ್ನು ಚಿಮುಕಿಸುತ್ತಿರಿ. ಇದು ಮಾಂಸವು ಒಣಗದಂತೆ ಮತ್ತು ಬೇಗನೆ ಸಾಫ್ಟ್ ಆಗಲು ನೆರವಾಗುತ್ತದೆ.

ಮಟನ್ ತುಂಡುಗಳು ಚಿಕ್ಕದಾಗಿದ್ದರೆ 20 ನಿಮಿಷದಲ್ಲಿ ಆಗುವ ಅಡುಗೆ 10 ನಿಮಿಷದಲ್ಲೇ ಆಗುತ್ತದೆ. ಪಾತ್ರೆಗಿಂತ ಪ್ರೆಶರ್ ಕುಕ್ಕರ್ನಲ್ಲಿ ಮಟನ್ ಬೇಯಿಸುವುದು ಉತ್ತಮ. ಮಧ್ಯಮ ಉರಿಯಲ್ಲಿ ಬೇಯಿಸಿದರೆ ಮಾಂಸದ ರುಚಿ ಹೆಚ್ಚುತ್ತದೆ.

ಮಟನ್ ಬೇಗ ಬೇಯಲು ಅಡುಗೆ ಮಾಡುವಾಗ ಅದರ ಜೊತೆಗೆ ‘ಹಸಿ ಪರಂಗಿಕಾಯಿ’ (Raw Papaya) ಸಣ್ಣ ತುಂಡನ್ನು ಅಥವಾ ಅದರ ಪೇಸ್ಟ್ ಅನ್ನು ಸೇರಿಸಿದರೆ ಮಟನ್ ಬೆಣ್ಣೆಯಂತೆ ಮೃದುವಾಗಿ ಬೇಯುತ್ತದೆ.

Source link
ಮಟನ್ ಬೇಗ ಮೃದುವಾಗಿ ಬೇಯಬೇಕೆಂದರೆ ಇದನ್ನ ಕರಿ ಮಧ್ಯದಲ್ಲಿ ಹಾಕಿ, ಹತ್ತು ನಿಮಿಷದಲ್ಲಿ ರೆಡಿಯಾಗುತ್ತೆ