Headlines

ಬೆಣ್ಣೆಯಂತೆ ಹದವಾಗಿ ಮಟನ್ ಬೇಯಿಸೋದು ಹೇಗೆ? ಟೇಸ್ಟಿ ಅಡುಗೆಗೆ ಈ ಸ್ಟೆಪ್‌ಗಳೆಲ್ಲಾ ಅನಿವಾರ್ಯ

ಬೆಣ್ಣೆಯಂತೆ ಹದವಾಗಿ ಮಟನ್ ಬೇಯಿಸೋದು ಹೇಗೆ? ಟೇಸ್ಟಿ ಅಡುಗೆಗೆ ಈ ಸ್ಟೆಪ್‌ಗಳೆಲ್ಲಾ ಅನಿವಾರ್ಯ

ಬೆಣ್ಣೆಯಂತೆ ಹದವಾಗಿ ಮಟನ್ ಬೇಯಿಸೋದು ಹೇಗೆ? ಟೇಸ್ಟಿ ಅಡುಗೆಗೆ ಈ ಸ್ಟೆಪ್‌ಗಳೆಲ್ಲಾ ಅನಿವಾರ್ಯ

ಮಟನ್ ಕಲ್ಲಿನಂತೆ ಗಟ್ಟಿಯಾಗುತ್ತಿದೆಯೇ? ಚಿಂತೆ ಬಿಡಿ. ಮಟನ್ ಅನ್ನು ಬೆಣ್ಣೆಯಂತೆ ಮೃದುವಾಗಿ ಬೇಯಿಸುವ ರಹಸ್ಯ ವಿಧಾನಗಳನ್ನು ತಿಳಿಯಿರಿ. ಈ ಸುಲಭ ಸಲಹೆಗಳಿಂದ ನಿಮ್ಮ ಬಾಡೂಟದ ರುಚಿ ಹೆಚ್ಚಿಸಿ.

ವೀಕೆಂಡ್ ಬಂದ್ರೆ ಬಹುತೇಕರಿಗೆ ಬಾಡೂಟ ಬೇಕೇ ಬೇಕು. ಚಿಕನ್ ಆದ್ರೆ 10 ರಿಂದ 15 ನಿಮಿಷದಲ್ಲಿ ಬೇಯುತ್ತದೆ. ಮಟನ್ ಬೇಯಿಸಲು ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ. ಕೆಲವೊಮ್ಮೆ ನಾಲ್ಕರಿಂದ ಐದು ವಿಷಲ್ ಕೂಗಿಸಿದ್ರೂ ಮಟನ್ ಬೇಯಲ್ಲ. ಮಟನ್ ಸರಿಯಾಗಿ ಬೇಯದಿದ್ರೆ ಅಡುಗೆ ರುಚಿ ಸಂಪೂರ್ಣ ಕೆಡುತ್ತದೆ.

ಕೆಲವೊಂದು ವಿಧಾನಗಳ ಮೂಲಕ ಮಟನ್ ಬೇಯಿಸಿದ್ರೆ ಕಡಿಮೆ ಸಮಯದಲ್ಲಿ ಹದವಾಗಿ ಬೇಯುತ್ತದೆ. ಮಟನ್ ಖರೀದಿಯಿಂದಲೇ ಅಡುಗೆ ಕೆಲಸ ಆರಂಭಿಸಬೇಕಾಗುತ್ತದೆ. ಮಸಾಲೆಯಲ್ಲಿ ಮಟನ್ ಚೆನ್ನಾಗಿ ಮಿಕ್ಸ್ ಆದರೆ ಮಾತ್ರ ಒಂದೊಳ್ಳೆ ಅಡುಗೆ ಆಗುತ್ತದೆ. ಹಾಗಾದ್ರೆ ಮಟನ್ ಬೇಯಿಸೋದು ಹೇಗೆ ಅಂತ ನೋಡೋಣ ಬನ್ನಿ.

ಖರೀದಿ ಮಾಡುವಾಗಲೇ ಅದು ಎಳೆ ಅಥವಾ ಬಲಿತ ಮತ್ತು ಕುರಿ ಅಥವಾ ಮೇಕೆ ಮಾಂಸ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಟನ್ ತೆಗೆದುಕೊಂಡು ಬರುತ್ತಿದ್ದಂತೆ ಅದನ್ನು ಬಿಸಿನೀರಿನಲ್ಲಿಯೇ ಎರಡರಿಂದ ಮೂರು ಬಾರಿ ತೊಳೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ತಣ್ಣೀರು ಬಳಸಬೇಡಿ. ತಣ್ಣೀರಿನಿಂದ ಮಟನ್ ತೊಳೆದ್ರೆ ಅದು ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಬಿಸಿನೀರಿನಲ್ಲಿ ತೊಳೆದುಕೊಂಡು ಮಟನ್ ಬೇಯಿಸುವ ಮುನ್ನ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಇದರಿಂದ ಮಟನ್ ಹದವಾಗಿ ಬೇಯುತ್ತದೆ. ಮಟನ್ ಬೇಯಿಸಲು ಕುಕ್ಕರ್ ಆದ್ರೆ ಒಳ್ಳೆಯದು. ಕಡಿಮೆ ಉರಿಯಲ್ಲಿಯೇ ಮಟನ್ ಬೇಯಿಸಿಕೊಂಡ್ರೆ ಅದು ಹದವಾಗಿ ಬೇಯುತ್ತದೆ.

ಮಟನ್ ಬೇಯಿಸಿಕೊಳ್ಳುವಾಗ ಯಾವುದೇ ಮಸಾಲೆಯನ್ನು ಸೇರಿಸಿಕೊಳ್ಳಬೇಡಿ. ಕೇವಲ ಚಿಟಿಕೆ ಅರಿಶಿಣ ಮತ್ತು 1 ಟೇಬಲ್ ಸ್ಪೋನ್‌ನಷ್ಟು ಎಣ್ಣೆ ಹಾಕಿಕೊಳ್ಳಬೇಕು. ಒಂದು ಹಂತಕ್ಕೆ ಮಟನ್ ಬೇಯುತ್ತಿದ್ದಂತೆ ನಂತರವೇ ಮಸಾಲೆಗಳನ್ನು ಸೇರಿಸಿಕೊಳ್ಳಬೇಕು. ಮಸಾಲೆ ಸೇರಿಸಿಕೊಂಡ ನಂತರವೂ ಮುಚ್ಚಳ ಮುಚ್ಚಿ ಒಂದು ವಿಷಲ್ ಕೂಗಿಸಿಕೊಳ್ಳಬೇಕು.

ಇದನ್ನೂ ಓದಿ: ಈರುಳ್ಳಿ ಗೊಜ್ಜು ಹೀಗೆ ಮಾಡಿ: ಈ ಸಣ್ಣ ಟ್ರಿಕ್ ನಿಮ್ಮ ಗೊಜ್ಜಿನ ರುಚಿಯನ್ನು ನೂರರಷ್ಟು ಹೆಚ್ಚಿಸುತ್ತೆ, ಇಲ್ಲದಿದ್ದರೆ ರುಚಿ ಅಷ್ಟಕಷ್ಟೇ!

ಮಟನ್ ಅಡುಗೆ ಮಾಡುವ ಸಂದರ್ಭದಲ್ಲಿ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಸೇರಿಸಿಕೊಳ್ಳಬೇಕಾಗುತ್ತದೆ. ಆದ್ರೆ ಈ ಸಂದರ್ಭದಲ್ಲಿ ತಣ್ಣೀರಿನ ಬದಲಾಗಿ ಬೆಚ್ಚಗಿನ ನೀರು ಹಾಕಿಕೊಳ್ಳಿ. ಇದರಿಂದ ಮಟನ್ ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳಲ್ಲ. ಬಿಸಿಯಾಗಿರುವ ಮಟನ್‌ಗೆ ತಣ್ಣೀರು ಸೇರಿಸಿದ್ರೆ ಕುದಿಯೋದು ನಿಧಾನವಾಗುತ್ತದೆ

ಇದನ್ನೂ ಓದಿ: ಅಡುಗೆಮನೆ ಗುಟ್ಟು; ಮೂರ್ನಾಲ್ಕು ವಿಷಲ್ ಕೂಗಿಸಿದ್ರೂ ತೊಗರಿಬೇಳೆ ಬೇಯುತ್ತಿಲ್ಲವೇ? ಈ ಟ್ರಿಕ್ಸ್ ಬಳಸಿ

Source link

Leave a Reply

Your email address will not be published. Required fields are marked *