Headlines

ಫ್ರೀಜರ್‌ ಭಾಗದಲ್ಲಿ ಬೆಟ್ಟದಂತೆ ಐಸ್ ಕಟ್ಟಿಕೊಂಡಿದೆಯೇ? ಹತ್ತೇ ನಿಮಿಷದಲ್ಲಿ ತೆಗೆಯಲು ಇಲ್ಲಿದೆ ಸಿಂಪಲ್ ಟ್ರಿಕ್

ಫ್ರೀಜರ್‌ ಭಾಗದಲ್ಲಿ ಬೆಟ್ಟದಂತೆ ಐಸ್ ಕಟ್ಟಿಕೊಂಡಿದೆಯೇ? ಹತ್ತೇ ನಿಮಿಷದಲ್ಲಿ ತೆಗೆಯಲು ಇಲ್ಲಿದೆ ಸಿಂಪಲ್ ಟ್ರಿಕ್

ಫ್ರೀಜರ್‌ ಭಾಗದಲ್ಲಿ ಬೆಟ್ಟದಂತೆ ಐಸ್ ಕಟ್ಟಿಕೊಂಡಿದೆಯೇ? ಹತ್ತೇ ನಿಮಿಷದಲ್ಲಿ ತೆಗೆಯಲು ಇಲ್ಲಿದೆ ಸಿಂಪಲ್ ಟ್ರಿಕ್

Freezer defrosting tips: ಫ್ರೀಜರ್‌ನಲ್ಲಿ ಐಸ್ ಬೆಟ್ಟದಂತೆ ಜಮೆಯಾಗಿದೆಯೇ? ಕೇವಲ 10 ನಿಮಿಷಗಳಲ್ಲಿ ಅದನ್ನು ಕರಗಿಸುವ ಸರಳ ವಿಧಾನ ಮತ್ತು ಫ್ರಿಜ್ ನಿರ್ವಹಣೆಯ ಕೆಲವು ಮುಖ್ಯ ಟಿಪ್ಸ್ ಈ ಲೇಖನದಲ್ಲಿದೆ.

ಫ್ರೀಜರ್ ತೆರೆದ ತಕ್ಷಣ ಬೆಟ್ಟದಂತೆ ಜಮೆಯಾಗಿರುವ ಮಂಜುಗಡ್ಡೆ ಕಂಡರೆ, ನಿಮ್ಮ ಫ್ರಿಡ್ಜ್ ಸರಿಯಾದ ನಿರ್ವಹಣೆ ಮತ್ತು ಸ್ವಚ್ಛತೆಯನ್ನು ಕೇಳುತ್ತಿದೆ ಎಂದರ್ಥ. ಇದು ಪ್ರತಿಯೊಬ್ಬರ ಮನೆಯಲ್ಲೂ ಎದುರಾಗುವ ಸಾಮಾನ್ಯ ಸಮಸ್ಯೆ. ಇದನ್ನು ಸರಿಪಡಿಸಲು ಹಲವರು ಮೆಕ್ಯಾನಿಕ್‌ಗಳನ್ನು ಕರೆಸುತ್ತಾರೆ. ಆದರೆ ಈ ಕೆಳಗೆ ತಿಳಿಸಿರುವಂತೆ ಮಾಡಿದರೆ ಕೇವಲ 10 ನಿಮಿಷದಲ್ಲಿ ಮಂಜುಗಡ್ಡೆಯನ್ನು ಕರಗಿಸಬಹುದು.

ಇದಕ್ಕೆ ಮುಖ್ಯ ಕಾರಣ ತೇವಾಂಶ (Moisture). ನೀವು ಪದೇ ಪದೇ ಫ್ರಿಡ್ಜ್ ಬಾಗಿಲು ತೆರೆದಾಗ, ಹೊರಗಿನ ಬಿಸಿ ಮತ್ತು ತೇವಾಂಶದ ಗಾಳಿ ಒಳಗೆ ಹೋಗುತ್ತದೆ. ಈ ಗಾಳಿಯು ಫ್ರೀಜರ್‌ನ ತಣ್ಣನೆಯ ಮೇಲ್ಮೈಗೆ ತಗುಲಿದಾಗ ನೀರಿನ ಹನಿಗಳಾಗಿ ಬದಲಾಗಿ, ನಂತರ ಮಂಜುಗಡ್ಡೆಯ ಪದರವಾಗಿ ಗಟ್ಟಿಯಾಗುತ್ತದೆ.

ಬಾಗಿಲು ಸರಿಯಾಗಿ ಮುಚ್ಚದಿರುವುದು (ಗ್ಯಾಪ್ ಇದ್ದರೆ ಹೊರಗಿನ ಗಾಳಿ ಒಳಗೆ ಹೋಗುತ್ತದೆ).ಬಿಸಿ ಆಹಾರವನ್ನು ನೇರವಾಗಿ ಫ್ರೀಜರ್‌ನಲ್ಲಿ ಇಡುವುದು (ಇದರಿಂದ ಉಂಟಾಗುವ ಹಬೆ ಐಸ್ ಆಗಿ ಬದಲಾಗುತ್ತದೆ).ಬಾಗಿಲಿನ ರಬ್ಬರ್ (Gasket) ಹಾಳಾಗಿರುವುದು.ಡಿಫ್ರಾಸ್ಟ್ ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷವಿರುವುದು.

ಹಂತ 1:ಫ್ರಿಡ್ಜ್ ಆಫ್ ಮಾಡಿ ಮತ್ತು ಪ್ಲಗ್ ತೆಗೆಯಿರಿ – ಸುರಕ್ಷತೆಯ ದೃಷ್ಟಿಯಿಂದ ಇದು ಬಹಳ ಮುಖ್ಯ.ಹಂತ 2: ಫ್ರೀಜರ್ ಖಾಲಿ ಮಾಡಿ – ಸ್ವಚ್ಛತೆ ಸುಲಭವಾಗಲು ಅದರೊಳಗಿನ ಎಲ್ಲಾ ಸಾಮಾನನ್ನು ಹೊರಗೆ ತೆಗೆಯಿರಿ.ಹಂತ 3: ಬಿಸಿ ನೀರಿನ ಬಳಕೆ – ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದನ್ನು ಫ್ರೀಜರ್ ಒಳಗಡೆ ಇಡಿ. ಬಿಸಿ ಹಬೆಯಿಂದ ಮಂಜುಗಡ್ಡೆ ವೇಗವಾಗಿ ಕರಗಲು ಶುರುವಾಗುತ್ತದೆ.ಹಂತ 4: ಬಾಗಿಲು ಮುಚ್ಚಿ – ಬಿಸಿ ನೀರಿನ ಪಾತ್ರೆ ಇಟ್ಟ ನಂತರ 5 ನಿಮಿಷ ಫ್ರೀಜರ್ ಬಾಗಿಲು ಮುಚ್ಚಿಡಿ. ಇದರಿಂದ ಒಳಗೆ ಹಬೆ ತುಂಬಿಕೊಂಡು ಐಸ್ ಸಡಿಲವಾಗುತ್ತದೆ.ಹಂತ 5: ಐಸ್ ತೆಗೆಯಿರಿ – ಈಗ ಪ್ಲಾಸ್ಟಿಕ್ ಸ್ಕ್ರಾಪರ್ ಅಥವಾ ಸೌಟಿನಿಂದ ಐಸ್ ಅನ್ನು ಮೆಲ್ಲಗೆ ತೆಗೆಯಿರಿ.ನೆನಪಿಡಿ: ಐಸ್ ತೆಗೆಯಲು ಎಂದಿಗೂ ಚಾಕು ಅಥವಾ ಚೂಪಾದ ವಸ್ತುಗಳನ್ನು ಬಳಸಬೇಡಿ. ಕೊನೆಯಲ್ಲಿ ಫ್ರೀಜರ್ ಅನ್ನು ಒಣ ಬಟ್ಟೆಯಿಂದ ಒರೆಸಿ ಮತ್ತೆ ಆನ್ ಮಾಡಿ.

ಫ್ರೀಜರ್ ಬಾಗಿಲನ್ನು ಪದೇ ಪದೇ ತೆರೆಯಬೇಡಿ.ಬಿಸಿ ಆಹಾರವನ್ನು ನೇರವಾಗಿ ಒಳಗಡೆ ಇಡಬೇಡಿ, ಮೊದಲು ಅದು ತಣ್ಣಗಾಗಲಿ.ಬಾಗಿಲಿನ ರಬ್ಬರ್ ಸೀಲ್ ಅನ್ನು ಆಗಾಗ ಪರೀಕ್ಷಿಸಿ.ತಿಂಗಳಿಗೊಮ್ಮೆ ಫ್ರಿಡ್ಜ್ ಸ್ವಚ್ಛಗೊಳಿಸಿ.

ಐಸ್ ಹೆಚ್ಚಾದಷ್ಟೂ ಕೂಲಿಂಗ್ ಕಡಿಮೆಯಾಗುತ್ತದೆ.ಕರೆಂಟ್ ಬಿಲ್ ಜಾಸ್ತಿ ಬರುತ್ತದೆ.ಆಹಾರ ಪದಾರ್ಥಗಳು ಸರಿಯಾಗಿ ಫ್ರೀಜ್ ಆಗುವುದಿಲ್ಲ.ಫ್ರಿಡ್ಜ್‌ನ ಜೀವಿತಾವಧಿ ಕಡಿಮೆಯಾಗುತ್ತದೆ.

ತೀವ್ರ ಬೇಸಿಗೆಯಲ್ಲಿ ಫ್ರಿಡ್ಜ್ ಮೇಲಿನ ಒತ್ತಡ ಕಡಿಮೆ ಮಾಡಲು ಸರಿಯಾದ ತಾಪಮಾನ ಕಾಪಾಡುವುದು ಅಗತ್ಯ.ಫ್ರಿಡ್ಜ್ ಸೆಕ್ಷನ್: 3°C ನಿಂದ 5°C ನಡುವೆ ಇರುವುದು ಉತ್ತಮ.ಫ್ರೀಜರ್ ಸೆಕ್ಷನ್: -18°C ಅಥವಾ ಅದಕ್ಕಿಂತ ಕಡಿಮೆ ಇರಬೇಕು.

Source link

Leave a Reply

Your email address will not be published. Required fields are marked *