Cooker rice recipes indian style: ಕುಕ್ಕರ್ನಲ್ಲಿ ಅನ್ನ ಮಾಡೋದು ಸಹಜ. ಇದು ಬಹಳ ಬೇಗ ಕೂಡ ಆಗುವುದು. ಆದರೆ ಕುಕ್ಕರ್ ಅನ್ನ ಮುದ್ದೆ ಮುದ್ದೆ ಆಗುತ್ತೆ ಎಂದು ಅನೇಕರು ಬೇಸರ ಮಾಡಿಕೊಳ್ಳೋದುಂಟು. ಇದಕ್ಕೂ ಪರಿಹಾರ ಇದೆ.

ಹೌದು, ಅನ್ನ ಮಾಡುವ ವಿಧಾನವನ್ನು ಸ್ವಲ್ಪ ಬದಲಾಯಿಸಿದರೆ ಅನ್ನ ಮಂಡಕ್ಕಿ ಥರ ಉದುರು ಉದುರು ಆಗುವುದು. ಇದಕ್ಕೆ ಸಿಂಪಲ್ ಟಿಪ್ಸ್ ಬಳಸಿ.

ಅನ್ನ ಉದುರುದುರು ಆಗಲು ಯಾವ ರೀತಿಯ ಅಕ್ಕಿಯನ್ನು ಆಯ್ಕೆ ಮಾಡಿಕೊಳ್ತೀವಿ ಎನ್ನೋದು ಮುಖ್ಯ. ಹಳೆ ಅಕ್ಕಿ ಆದರೆ ಬೆಸ್ಟ್. ಆದರೆ ಚೆನ್ನಾಗಿ ಮೂರು ಬಾರಿ ವಾಶ್ ಮಾಡಿಕೊಳ್ಳಬೇಕು.

ಅಂದಹಾಗೆ ಒಂದು ಕಪ್ ಅಕ್ಕಿಗೆ ಒಂದೂವರೆ ಕಪ್ ಅಥವಾ ಎರಡೂವರೆ ಕಪ್ ನೀರು ಹಾಕಿ ಬೇಯಲು ಇಡಬೇಕು. ಆಗ ಇನ್ನೊಂದು ವಿಧಾನವನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಅಕ್ಕಿ ಚೆನ್ನಾಗಿ ಬೇಯುತ್ತದೆ.

ಕುಕ್ಕರ್ ಅಕ್ಕಿಗೆ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ. ಅಥವಾ ಒಂದು ಚಮಚ ನಿಂಬೆರಸ ಹಾಕಿ. ಆಗ ಅಕ್ಕಿ ಉದುರುದುರು ಆಗುವುದು. ವಿಸಿಲ್ ಹೊಡೆದ ಮೇಲೆ ತಕ್ಷಣ ಕುಕ್ಕರ್ ಮುಚ್ಚಳ ತೆಗೆಯದೆ, ಹದಿನೈದು ನಿಮಿಷ ಬಿಟ್ಟು ತೆಗೆಯಿರಿ, ಆಗ ಅನ್ನ ಚೆನ್ನಾಗಿ ಬೆಂದಿರುತ್ತದೆ.

Source link
ಕುಕ್ಕರ್ ಅನ್ನ ಮುದ್ದೆ ಮುದ್ದೆ ಆಗ್ತಿದ್ಯಾ? ಮಂಡಕ್ಕಿ ಥರ ಉದುರು ಉದುರು ಆಗಲು ಈ ಪದಾರ್ಥ ಹಾಕ್ಬೇಕು!