ಊಟ ಮಾಡಿಲ್ಲಾ ಅಂದ್ರು ಮೊಬೈಲ್ , ಹಠ ಮಾಡಿದ್ರು ಮೊಬೈಲ್ , ಮಲಗೋದಕ್ಕೂ ಮೊಬೈಲ್ , ಕೈ ಕಟ್ಟಿ ಕೂರೋದಕ್ಕೂ ಮೊಬೈಲ್ . ಹೀಗೆ ಕಡ್ಡಾಯವಾಗಿ ಮಕ್ಕಳಿಗೆ ಮೊಬೈಲ್ ಕೊಟ್ಟು ಇವತ್ತು ಮೊಬೈಲ್ ಅಡಿಕ್ಷನ್ ಶುರುವಾಗಿದೆ. ಪೋಷಕರ ಮೊಬೈಲ್ ಗೀಳು ಮಕ್ಕಳ ಮೇಲೆ ಕೂಡ ಪರಿಣಾಮ ಬೀರುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮಗುವಿಗೆ ಊಟ ಮಾಡಿಸೋದ್ರಿಂದ ಮಲಗಿಸೋವರೆಗೂ ಎಲ್ಲದಕ್ಕೂ ಮಕ್ಕಳ ಕೈನಲ್ಲಿ ಮೊಬೈಲ್ ಕೊಟ್ಟು ಬಿಡ್ತಾರೆ. ಇದೀಗ ಮಾಡೋಣ ಮಾರಾಯ ಅನ್ನೋ ಹಾಗೆ ಮಕ್ಕಳ ಮೊಬೈಲ್ ಅಡಿಕ್ಷನ್ (ಮೊಬೈಲ್ ಚಟ) ಪೋಷಕರಿಗೆ ಗೋಳು ಕೊಡುತ್ತಿದೆ. ಇನ್ನು ಮಕ್ಕಳ ಮೊಬೈಲ್ ಅಡಿಕ್ಷನ್ ನಿಂದ ಏನು ಮಾಡಬೇಕು ಎನ್ನುವುದನ್ನು ಡಾಕ್ಟರ್ ಸೌಜನ್ಯ ಮಾಹಿತಿ ತಿಳಿದುಕೊಳ್ಳಿ.