ಕಡ್ಲೆ ಉಸ್ಲಿ ಮಾಡ್ಬೇಕು ಇಲ್ಲ ಚೋಲೆ ಮಸಾಲ ಮಾಡ್ಬೇಕು ಅಂತ ಪ್ಲಾನ್ ಮಾಡಿರ್ತೀರಿ. ಆದ್ರೆ ಕಡಲೆಯನ್ನು ರಾತ್ರಿ ಪೂರ್ತಿ ನೆನೆ ಹಾಕೋಕೆ ಮರೆತಿರ್ತೀರಿ. ಇಂಥ ಟೈಂನಲ್ಲಿ ನಿಮ್ಮ ಪ್ಲಾನ್ ಕ್ಯಾನ್ಸಲ್ ಆಗುತ್ತೆ. ರಾತ್ರಿ ಪೂರ್ತಿ ಕಡಲೆ ಕಾಳನ್ನು ನೆನೆಸದೆ ಉಸ್ಲಿ ಮಾಡ್ಬಹುದು. ಅದು ಹೇಗೆ ಗೊತ್ತಾ?

ಕಡಲೆ ಕಾಳು ಕಟ್ಟಿಯಾಗಿರುತ್ತೆ. ಅದನ್ನು ನೆನೆಸದೆ ಬೇಯಿಸೋದು ಕಷ್ಟ., ಕಡಲೆ ಕಾಳು ಮೃದುವಾಗ್ಲಿ ಎನ್ನವ ಕಾರಣಕ್ಕೆ ರಾತ್ರಿ ಪೂರ್ತಿ ಕಾಳನ್ನು ನೀರಿನಲ್ಲಿ ನೆನೆ ಹಾಕ್ತಾರೆ. ಆದ್ರೆ ನೀವು ರಾತ್ರಿ ಪೂರ್ತಿ ಇದನ್ನು ನೆನೆ ಹಾಕಬೇಕಾಗಿಲ್ಲ. ಕೆಲ ಟ್ರಿಕ್ಸ್ ಬಳಸಿ, ಮೃದುವಾದ ಕಡಲೆ ಉಸ್ಲಿ ಮಾಡಬಹುದು.

ನೀವು ಕಡಲೆ ಕಾಳಿನ ಪಲ್ಯ, ಉಸ್ಲಿ ಅಥವಾ ಬಾಜಿ ಮಾಡುವ ಪ್ಲಾನ್ ನಲ್ಲಿದ್ರೆ ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಸಿ. ನೀರು ಕುದಿಯುತ್ತಿದ್ದಂತೆ ಇನ್ನೊಂದು ಇನ್ನೊಂದು ಪಾತ್ರೆಗೆ ಕಡಲೆ ಕಾಳು ಹಾಕಿ, ಅದರ ಮೇಲೆ ಬಿಸಿ ನೀರನ್ನು ಹಾಕಿ. ಸುಮಾರು 20 -30 ನಿಮಿಷ ನೀವು ಅದನ್ನು ಹಾಗೆ ಬಿಡಬೇಕು.

ನೀವು ಕಡಲೆ ಕಾಳನ್ನು ಬಿಸಿ ನೀರಿನಲ್ಲಿ ನೆನೆ ಹಾಕಿದಾಗ ಅದು ಬೇಗ ಮೃದುವಾಗುತ್ತದೆ. ರಾತ್ರಿ ಪೂರ್ತಿ ನೆನೆ ಹಾಕಿದಾಗ ಉಬ್ಬಿ ಬರುವಂತೆ ಕಡಲೆ ಗಾತ್ರ ಹೆಚ್ಚಾಗುವುದಿಲ್ಲ. ಆದ್ರೆ ಬೇಯಿಸಲು ತೊಂದ್ರೆ ಆಗೋದಿಲ್ಲ. ನೀವು ಈ ಕಡಲೆಯನ್ನು ಬೇಯಿಸಲು ಪಾತ್ರೆ ಬದಲು ಕುಕ್ಕರ್ ಬಳಸಬೇಕು. ಫ್ರೆಶರ್ ಕುಕ್ಕರ್ ಗೆ ಬಿಸಿ ನೀರನ್ನು ಹಾಕಿ, ಕಡಲೆ ಹಾಕಿ, ಚಿಟಕಿ ಉಪ್ಪು, ಎಣ್ಣೆ ಹಾಕಿ ಬೇಯಿಸಬೇಕು. ಕುಕ್ಕರ್ 6 -7 ಸಿಟಿ ಹೊಡೆಸಿ. ಇದ್ರಿಂದ ಕಡಲೆ ಬೇಗ ಬೇಯುತ್ತದೆ. ಅದ್ರ ಟೆಕ್ಸ್ಚರ್ ಹಾಳಾಗೋದಿಲ್ಲ.

ನೆನೆಸದೆ ಕಡಲೆ ಕಾಳು ಬೇಗ ಮೃದುವಾಗ್ಬೇಕು ಅಂದ್ರೆ ಅಡುಗೆ ಸೋಡಾ ಬಳಸಬಹುದು. ಆದ್ರೆ ಅಡುಗೆ ಸೋಡಾ ಅತಿಯಾದ್ರೆ ರುಚಿ ಹಾಗೂ ಪೋಷಕಾಂಶ ಹಾಳಾಗಬಹುದು. ನೀವು ಅಡುಗೆ ಸೋಡಾ ಬಳಸುತ್ತಿದ್ದರೆ ಅತಿ ಕಡಿಮೆ ಪ್ರಮಾಣದಲ್ಲಿ ಇದನ್ನು ಬಳಸಬೇಕು.

ನೀವು ಹೊಟೇಲ್, ರೆಸ್ಟೋರೆಂಟ್ ನಂತೆ ಕಡಲೆ ಬಣ್ಣ ಗಾಢವಾಗಿರಬೇಕು ಅಂದ್ರೆ ಒಂದು ಟ್ರಿಕ್ಸ್ ಫಾಲೋ ಮಾಡ್ಬೇಕು. ಟೀ ಎಲೆಗಳು ನಿಮ್ಮ ಕಡಲೆ ಕಾಳಿನ ಬಣ್ಣವನ್ನು ಗಾಢವಾಗಿಡುತ್ತದೆ. ನೀವು ಕುಕ್ಕರ್ ನಲ್ಲಿ ಕಡಲೆ ಕಾಳನ್ನು ಬೇಯಿಸುವ ಮೊದಲು ಒಂದು ಬಟ್ಟೆಗೆ ಟೀ ಎಲೆಗಳನ್ನು ಹಾಕಿ, ಅದನ್ನು ಕಟ್ಟಿ, ಕುಕ್ಕರ್ ಒಳಗೆ ಇಡಬೇಕು. ಇದು ಕಡಲೆ ಬಣ್ಣವನ್ನು ಗಾಢಗೊಳಿಸುತ್ತದೆ.

ಕಡಲೆ ಕಾಳಿನ ರುಚಿ ಹೆಚ್ಚಾಗ್ಬೇಕು ಅಂದ್ರೆ ನೀವು ಅದಕ್ಕೆ ಏನೆಲ್ಲ ಮಸಾಲೆ ಹಾಕ್ತೀರಿ ಅನ್ನೋದು ಮುಖ್ಯವಾಗುತ್ತದೆ. ಗರಂ ಮಸಾಲೆ ಜೊತೆ ಮೆಂತ್ಯ ಎಲೆ, ಮಾವಿನ ಕಾಯಿ ಪುಡಿ ಇವೆಲ್ಲ ಅದರ ರುಚಿಯನ್ನು ಡಬಲ್ ಮಾಡುತ್ತದೆ. ಶುಂಠಿ, ಬೆಳ್ಳುಳ್ಳಿ, ಟೊಮೆಟೊವನ್ನು ನೀವು ಬಳಸಬೇಕು.

ಕಡಲೆಯಲ್ಲಿರುವ ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಊಟದ ನಡುವೆ ತಿಂಡಿ ತಿನ್ನುವ ಹಂಬಲವನ್ನು ಕಡಿಮೆ ಮಾಡುತ್ತದೆ. ಇದು ಕ್ಯಾಲೋರಿ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ನಿಯಮಿತವಾಗಿ ಕಡಲೆ ತಿನ್ನುವುದರಿಂದ ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಮೆದುಳಿನ ಕಾರ್ಯ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

Source link
ರಾತ್ರಿಯಿಡಿ ನೆನೆ ಹಾಕ್ಬೇಕಾಗಿಲ್ಲ, ಅರೆ ಕ್ಷಣದಲ್ಲಿ ಮೃದುವಾಗುತ್ತೆ ಕಡಲೆ