
ಸಾಮಾನ್ಯವಾಗಿ ನಾವೆಲ್ಲರೂ ಲೋಷನ್‌ನ ದೊಡ್ಡ ಬಾಟಲಿಗಳನ್ನೇ ಖರೀದಿಸುತ್ತೇವೆ. ಯಾಕೆಂದರೆ ಚಳಿ ಇರಲಿ, ಬೇಸಿಗೆ ಇರಲಿ, ಕೈ-ಕಾಲುಗಳಿಗೆ ಲೋಷನ್ ಬೇಕೇಬೇಕು. ‘ಒಂದು ಖರೀದಿಸಿದರೆ ಇನ್ನೊಂದು ಫ್ರೀ’ (Buy One, Get One Free) ಅಂತ ಆಫರ್ ಕಂಡಾಗಂತೂ, ಆನ್‌ಲೈನ್ ಅಥವಾ ಮಾಲ್‌ನಲ್ಲಿ ಖುಷಿಯಿಂದ ಎರಡು ಬಾಟಲಿಗಳನ್ನು ತಂದುಬಿಡುತ್ತೇವೆ. ಆದರೆ, ಎಕ್ಸ್‌ಪೈರಿ ಡೇಟ್ ನೋಡೋದನ್ನೇ ಮರೆತುಬಿಡುತ್ತೇವೆ. ಹೀಗೆ ಹಣ ಉಳಿಸುವ ಸಣ್ಣ ಪ್ರಯತ್ನದಿಂದ ಕೊನೆಗೆ ನಷ್ಟವೇ ಹೆಚ್ಚು.
ಎಕ್ಸ್‌ಪೈರ್ ಆದ ಲೋಷನ್ ಬಳಸಿದರೆ ಅಲರ್ಜಿ, ತುರಿಕೆ, ದದ್ದುಗಳು ಅಥವಾ ಮೊಡವೆಗಳಂತಹ ಚರ್ಮದ ಸಮಸ್ಯೆಗಳು ಬರಬಹುದು. ಆದರೆ, ಇಡೀ ಲೋಷನ್ ಬಾಟಲಿಯನ್ನು ಹಾಗೆಯೇ ಎಸೆಯುವ ಬದಲು, ಅದನ್ನು ಬೇರೆ ರೀತಿಯಲ್ಲಿ ಬಳಸಬಹುದು.