ಬೆಂಗಳೂರು, (ಫೆಬ್ರವರಿ 09): ಶೇ.5ರಷ್ಟು ಬೆಂಗಳೂರು ನಮ್ಮ ಮೆಟ್ರೋ (ನಮ್ಮ ಮೆಟ್ರೋ) ಟಿಕೆಟ್ ದರ ಒಂದಕ್ಕೆ ಬಿಎಂಆರ್ ಸಿಎಲ್ (BMRCL) ಮುಂದಾಗಿತ್ತು. ಆದರೆ, ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯನ್ನ ಬಿಎಂಆರ್ ಸಿಎಲ್ ಕೈ ಬಿಟ್ಟಿದೆ. ಹೀಗಾಗಿ ಮೆಟ್ರೋ ದರ ಯಥಾಸ್ಥಿತಿ ಮುಂದುವರಿಯಲಿದೆ. ಆದರೆ ಇಲ್ಲಿ ನಾವು ಗಮನಿಸಬೇಕಿರುವುದು ಏನು ಅಂದ್ರೆ ತಾತ್ಕಾಲಿಕವಾಗಿ ಅಷ್ಟೇ ತಡೆ ಹಿಡಿದಿರುವುದು. ಹೀಗಾಗಿ ಮುಂದೆ ಯಾವ ಕ್ಷಣದಲ್ಲಿ ಯಾವ ನಿರ್ಧಾರ ಆದ್ರೂ ಅಚ್ಚರಿ ಏನಿಲ್ಲ.ಇಲ್ಲಿ ನಾವು ಸ್ಪಷ್ಟವಾಗಿ ಗಮನಿಸಬೇಕಿರುವುದು ಅಂದ್ರೆ, ಮೆಟ್ರೋ ದರ ಏರಿಕೆಯಲ್ಲಿ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ. ಪ್ರಸ್ತಾವನೆ ಸಲ್ಲಿಸಬಹುದು ಅಷ್ಟೇ, ಬದಲಿಗೆ ಎಲ್ಲವೂ ಫೇರ್ ಫಿಕ್ಸೇಷನ್ ಸಮಿತಿ ಶಿಫಾರಸ್ಸಿನಂತೆ ದರ ನಿಗದಿ ಆಗುತ್ತೆ.
ಮೆಟ್ರೋ ಟಿಕೆಟ್ ದರ ಹೇಗಿರುತ್ತದೆ?
ಮೆಟ್ರೋ O ಮತ್ತು M ಕಾಯ್ದೆ 2002ರಂತೆ ದರ ನಿಗದಿ ಆಗುತ್ತೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ದರ ನಿಗದಿ ಸಮತಿ ರಚನೆ ಮಾಡಲಾಗುತ್ತೆ. ಸಮಿತಿಯಲ್ಲಿ ನಿವೃತ್ತ ಅಥವಾ ಹಾಲಿ ಜಡ್ಜ್ ಇರುತ್ತಾರೆ. ಹಿರಿಯ ಪ್ರಧಾನ ಕಾರ್ಯದರ್ಶಿ ಅಥವಾ ಅಪರ ಮುಖ್ಯ ಕಾರ್ಯದರ್ಶಿ, ಕೇಂದ್ರ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇರಲಿದ್ದಾರೆ. ಇನ್ನು ದರ ಏರಿಕೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಥವಾ ಮೆಟ್ರೋ ಸಂಸ್ಥೆ ಪ್ರಸ್ತಾಪ ಮಾಡಬಹುದು. ಆದರೆ ನೇರವಾಗಿ ದರ ಮಾಡುವ ಅಧಿಕಾರ ಯಾವ ಸರ್ಕಾರಕ್ಕೂ ಇರುವುದಿಲ್ಲ. ಸಮಿತಿಯ ನಿರ್ಧಾರವೇ ದರ ಪರಿಷ್ಕರಣೆ ಅಂತಿಮ ಆಗುತ್ತೆ.
ಕಳೆದ ವರ್ಷ ಅಂದ್ರೆ 2025ರ ಫೆಬ್ರವರಿ 9ರಂದು ಶೇ.51ರಷ್ಟು ದರ ಏರಿಕೆ ಮಾಡಿ ಸಮಿತಿ ಆದೇಶ ನೀಡಿತ್ತು. ದರ ಏರಿಕೆ ಆಗಿ ಇಂದಿಗೆ ಕರೆಕ್ಟ್ ಒಂದು ವರ್ಷ ಆಗಲಿದೆ. 2017ರಿಂದ 2025ರವರೆಗೂ ದರ ನಿಗದಿಯಾಗದ ಹಿನ್ನೆಲೆ ಮುಂದಿನ ಪ್ರತಿವರ್ಷವೂ ಶೇ. 5ರಷ್ಟು ದರಕ್ಕೆ ಸಮಿತಿಯೂ ಕೊಟ್ಟಿತ್ತು. ಅದರಂತೆಯೇ ಇಂದು ಶೇ.5ರಷ್ಟು ದರಕ್ಕೆ BMRCL ಮುಂದಾಗಿತ್ತು. ಆದರೆ ಇದೀಗ ತಡೆ ಹಿಡಿಯಲಾಗಿದೆ. ಆದರೆ ದರ ಏರಿಕೆ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಮಧ್ಯೆ ಗುದ್ದಾಟ ಮಾತ್ರ ಜೋರಾಗಿಯೇ ನಡೆಯುತ್ತಿದೆ.
ಇದನ್ನೂ ಓದಿ: ಗುಡ್ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL
ಆರ್.ವಿ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ದೊಡ್ಡ ಹಂಗಾಮವನ್ನೇ ಮಾಡಿತು. ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಖಾಲಿ ಟ್ರಂಕ್ ಹಿಡಿದು, ಮೆಟ್ರೋದಲ್ಲಿ ಪ್ರಯಾಣಕ್ಕೆ ಮುಂದಾಗಿದ್ದರು. ಆದಾಗ್ಯೂ ಮೆಟ್ರೋ ಒಳಗೆ ಬಿಡಲಿಲ್ಲ. ಈ ವೇಳೆ ಸಂಸದರು, ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಜನಾಕ್ರೋಶ ಹೆಚ್ಚಾಗ್ತಿದ್ದಂತೆಯೇ ತಾತ್ಕಾಲಿಕವಾಗಿ ದರ ಹೆಚ್ಚಳಕ್ಕೆ ತಡೆ ಕೊಡಲಾಗಿದೆ. ಆದರೆ BMRCL ಸಿಪಿಆರ್ ಓ ಯಶವಂತ್ ಚೌಹಾಣ್ ಮಾತು ಕೇಳಿದ್ರೆ ಜನರಿಗೆ ಬರೆ ಬೀಳೋದು ಪಕ್ಕಾನಾ? ಅನ್ನೋ ಅನುಮಾನವೂ ಮೂಡ್ತಿದೆ. ಯಾಕೆಂದ್ರೆ ತಾತ್ಕಾಲಿಕವಾಗಿ ತಡೆ ಹಿಡಿದ್ರೂ ಕೂಡ, ಅದಕ್ಕೆ ಇಂತಿಷ್ಟು ಅವಧಿ ಅಂತಾ ಇರೋದಿಲ್ಲ ಅಂದಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 6:19 pm, ಸೋಮ, 9 ಫೆಬ್ರವರಿ 26