ದಕ್ಷಿಣದ ನಿರ್ದೇಶಕನ ಜೊತೆಗೆ ಹೃತಿಕ್ ರೋಷನ್ ಸಿನಿಮಾ

ದಕ್ಷಿಣದ ನಿರ್ದೇಶಕನ ಜೊತೆಗೆ ಹೃತಿಕ್ ರೋಷನ್ ಸಿನಿಮಾ


ದಕ್ಷಿಣದ ನಿರ್ದೇಶಕರ ಜೊತೆಗೆ ಹೃತಿಕ್ ರೋಷನ್ ಸಿನಿಮಾ

ಬಾಲಿವುಡ್ (ಬಾಲಿವುಡ್) ನಟರಿಗೆ ದಕ್ಷಿಣದ ಸಿನಿಮಾ ನಿರ್ದೇಶಕರ ಮೇಲೆ ವಿಶೇಷ ಪ್ರೀತಿ ಬಂದಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಟೈಗರ್ ಶ್ರಾಫ್ ಇನ್ನೂ ದಕ್ಷಿಣದ ನಿರ್ದೇಶಕರುಗಳನ್ನೇ ಬಯಸಿ ಅವರೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅಂತೂ ದೊಡ್ಡ ಯಶಸ್ಸನ್ನೂ ಗಳಿಸಿದ್ದಾರೆ. ಆದರೆ ಸಲ್ಲು ಭಾಯ್ ಸೋತಿದ್ದಾರೆ. ಅಮೀರ್ ಖಾನ್ ಇನ್ನಷ್ಟೇ ಸಿನಿಮಾ ಶುರು ಮಾಡಬೇಕಿದೆ. ಈ ನಡುವೆ ಹೃತಿಕ್ ರೋಷನ್ ಸಹ ಈ ಪಟ್ಟಿಗೆ ಸೇರ್ಪಡೆ ಆಗಿದ್ದು, ದಕ್ಷಿಣದ ನಿರ್ದೇಶಕರ ಜೊತೆ ಕೆಲಸ ಮಾಡಲು ಮುಂದಾಗಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ತೆಲುಗಿನ ಖ್ಯಾತ ಚಿತ್ರಕಥೆಗಾರ ಕೋನಾ ವೆಂಕಟ್ ಮತ್ತು ನಿರ್ದೇಶಕ ಬಾಬಿ ಕೊಲ್ಲಿ (ಇತ್ತೀಚೆಗೆ ‘ಡಾಕು ಮಹಾರಾಜ್’ ಸಿನಿಮಾ ನಿರ್ದೇಶಕ) ಹೃತಿಕ್ ರೋಷನ್ ಅವರನ್ನು ಭೇಟಿಯಾಗಿ ಒಂದು ದೊಡ್ಡ ಪ್ರಾಜೆಕ್ಟ್ ಬಗ್ಗೆ ಚರ್ಚಿಸಲಾಗಿದೆ. ಹೃತಿಕ್ ಅವರಿಗೆ ಕಥೆ ತುಂಬಾ ಇಷ್ಟವಾಗಿದೆ ಮತ್ತು ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಕೋನಾ ವೆಂಕಟ್ ಆಯ್ಕೆಯಾಗಿದ್ದಾರೆ. ಶೀಘ್ರವೇ ಸಿನಿಮಾದ ಘೋಷಣೆ ಸಹ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:’ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದಕ್ಕೆ; ಮತ್ತೊಬ್ಬ ಬಾಲಿವುಡ್ ಹೀರೋಗೆ ಚಿಂತೆ ಶುರು

ಹೃತಿಕ್ ರೋಷನ್ ಅವರು ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಜೊತೆ ಒಂದು ದೊಡ್ಡ ಬಜೆಟ್ ಚಿತ್ರಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಬಾಬಿ ಮತ್ತು ಕೋನಾ ವೆಂಕಟ್ ಹೇಳುತ್ತಿರುವ ಸಿನಿಮಾ ಇದೇ ಇರಬಹುದೇ ಎಂಬ ಕುತೂಹಲವೂ ಇದೆ. ಪ್ರಸ್ತುತ ಹೃತಿಕ್ ರೋಷನ್ ಅವರು 4 ನೇ ನಿರ್ದೇಶನದ ‘ಕೃಷ್’ ಸಿನಿಮಾದ ತಯಾರಿಯಲ್ಲಿದ್ದಾರೆ. ಅದರ ಜೊತೆಗೆ ಯಶ್ ರಾಜ್ ಫಿಲಂಸ್ ಜೊತೆಗೆ ಹೊಸ ಸಿನಿಮಾ ಒಂದನ್ನು ಸಹ ಅವರು ಸಹ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಾರುಖ್ ಖಾನ್ ಅವರು ಅಟ್ಲಿ ಜೊತೆಗೆ ‘ಜವಾನ್’ ಸಿನಿಮಾ ಮಾಡಿ ಭಾರಿ ಯಶಸ್ಸು ಗಳಿಸಿದರು. ಇನ್ನು ಸಲ್ಮಾನ್ ಖಾನ್, ತಮಿಳಿನ ಮುರುಗದಾಸ್ ಜೊತೆಗೆ ಇತ್ತೀಚೆಗೆ ‘ಶಿಖಂಧರ್’ ಸಿನಿಮಾ ಮಾಡಿದರು ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು. ಇದೀಗ ಮತ್ತೊಬ್ಬ ದಕ್ಷಿಣದ ನಿರ್ದೇಶಕನ ಸಿನಿಮಾ ಎಸ್ ಹೇಳಿದ್ದಾರೆ. ಇನ್ನು ಅಮೀರ್ ಖಾನ್ ಅವರು ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗ ಹೃತ್ಕ್ ರೋಷನ್ ಸಹ ಇದೆ ಪಟ್ಟಿ ಇದೆ. ಹೃತಿಕ್ ಗೆ ಜಯ ಸಿಗುತ್ತದೆಯೇ ಇಲ್ಲವೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *