
ಹುಬ್ಬಳ್ಳಿ, ಮಾರ್ಚ್ 30: ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ವಿಭಾಗದ ಡಿಸಿ ಭರತ್ ಹೆಗಡೆ ಜಿಎಸ್ಟಿ ಬಾಕಿ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಲೋಕ (ಲೋಕಾಯುಕ್ತ) ಬಲೆಗೆ ಬಿದ್ದಿದ್ದಾರೆ. ಅವರ ಈ ಅವ್ಯವಹಾರದ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರು ದೂರು ನೀಡಿದ ಹಿನ್ನೆಲೆ ಕಾರ್ಯಾಚರಣೆ ನಡೆಸುತ್ತಿದ್ದ ಲೋಕಾಯುಕ್ತ ಅಧಿಕಾರಿಗಳು ಭರತ್ ಹೆಗಡೆಯನ್ನು ಟ್ರ್ಯಾಪ್ ಮಾಡಿದ್ದಾರೆ.
60 ಲಕ್ಷ ರೂ. ಹಣಕ್ಕೆ ಬೇಡಿಕೆ
ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ವಿಭಾಗದ ಡೆಪ್ಯುಟಿ ಕಮಿಷನರ್ (DC) ಆಗಿರುವ ಭರತ್ ಹೆಗಡೆ, ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ. ತೆರಿಗೆ ಪರಿಶೀಲನೆ (ಆಡಿಟ್), ಜಿಎಸ್ಟಿ ಸಂಬಂಧಿತ ಪ್ರಕರಣಗಳ ಪರಿಶೀಲನೆ ಮತ್ತು ವ್ಯಾಪಾರಿಗಳ ತೆರಿಗೆ ಬಾಕಿ ವಿಚಾರಗಳನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಆದರೆ ಇವರು, ವಿಶ್ವನಾಥ್ ನಾಯಕ್ ಎಂಬ ಪೆಟ್ರೋಲ್ ಬಂಕ್ಗೆ 60 ಲಕ್ಷ ರೂ.ಜಿಎಸ್ಟಿ ಹಣ ಕಟ್ಟಬೇಕು ಎಂದು ನೋಟಿಸ್ ನೀಡದೆ ಪ್ರಕರಣವನ್ನು ಸುಗಮಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ ವಿಕ್ಟೋರಿಯಾ ಆಸ್ಪತ್ರೆಯ ಮೇಲೆ ಲೋಕಾ ದಿಢೀರ್ ದಾಳಿ! ಐಸಿಯು ಅವ್ಯವಸ್ಥೆ ಬಯಲು
ಬೆಂಗಳೂರಿನಿಂದ ಬಂದ ಆರು ಅಧಿಕಾರಿಗಳ ತಂಡ
ಈ ಕುರಿತು ವಿಶ್ವನಾಥ್ ನಾಯಕ್ ಹುಬ್ಬಳ್ಳಿಯಿಂದ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡು ಸೂಕ್ತ ಯೋಜನೆಯೊಂದಿಗೆ ಟ್ರ್ಯಾಪ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಬೆಂಗಳೂರಿನಿಂದ ಬಂದ ಆರು ಅಧಿಕಾರಿಗಳ ತಂಡ ಭರತ್ನ ಬಲೆಗೆ ಬಿದ್ದಿದೆ. ಮುಂಜಾನೆ ಸುಮಾರು 11:30 ರ ವೇಳೆಗೆ ಹುಬ್ಬಳ್ಳಿ ನವನಗರದಲ್ಲಿರುವ ಕಮರ್ಷಿಯಲ್ ಟ್ಯಾಕ್ಸ್ ಕಛೇರಿಯಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಭರತ್ ಹೆಗಡೆಯ ಬಲೆಗೆ ಬಿದ್ದ ಘಟನೆ, ನಂತರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.