Headlines

ಪ್ರೇಮ ಸಂಬಂಧವೋ? ಲವ್​​ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?

ಪ್ರೇಮ ಸಂಬಂಧವೋ? ಲವ್​​ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?


ಪ್ರೇಮ ಸಂಬಂಧವೋ? ಲವ್ ಜಿಹಾದೋ?: ಅಸಲಿಗೆ ಹುಬ್ಬಳ್ಳಿಗೆ, ಧಾರವಾಡದಲ್ಲಿ ಆಗ್ತಿರೋದೇನು?

ಹುಬ್ಬಳ್ಳಿ, ಏಪ್ರಿಲ್ 10: ರಾಜ್ಯದ ವಾಣಿಜ್ಯ ನಗರ ಹುಬ್ಬಳ್ಳಿ ಮತ್ತು ಶಿಕ್ಷಣ ಕಾಶಿ ಧಾರವಾಡದಲ್ಲಿ ಅದ್ಯಾಕೋ ಗೊತ್ತಿಲ್ಲ ಮೇಲಿಂದ ಮೇಲೆ ಲವ್ ಜಿಹಾದ್ ಆರೋಪ ಪ್ರಕರಣಗಳು ಕೇಳಿಬರುತ್ತಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಇಂತಹ ನಾಲ್ಕು ಆರೋಪಗಳು ವರದಿಯಾಗಿವೆ, ಈ ಬಗ್ಗೆ ಪರ-ವಿರೋಧಗಳು ಪ್ರಾರಂಭವಾಗುತ್ತವೆ. ಇದನ್ನು ಪ್ರೇಮ ಸಂಬಂಧ ಮಾತ್ರ ಎಂದು ಕರೆದರೆ, ಇನ್ನು ಇದು ವ್ಯವಸ್ಥಿತವಾಗಿ ಹಿಂದೂ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಪ್ರೀತಿ ಪ್ರೇಮದ ಹೆಸರಲ್ಲಿ ಮತಾಂತರ ಮಾಡುವ ಷಡ್ಯಂತ್ರ ಎನ್ನುತ್ತಿದ್ದಾರೆ.

ಏನಿದು ಲವ್ ಜಿಹಾದ್?

ಹಿಂದೂ ಯುವತಿಯರು, ಮಹಿಳೆಯರನ್ನು ಮದುವೆಯಾಗಿ ನಂತರ ಅವರನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡುವುದನ್ನು ಸಾಮಾನ್ಯವಾಗಿ ಲವ್ ಜಿಹಾದ್ ಎಂದು ಕರೆಯುತ್ತಾರೆ. ಈ ಲವ್ ಜಿಹಾದ್ ಕುರಿತು ನಿರ್ದಿಷ್ಟ ವ್ಯಾಖ್ಯಾನಗಳು ಇಲ್ಲದಿದ್ದರೂ ಇಂತಹ ಘಟನೆಗಳ ಹೆಸರಲ್ಲಿ ಉಲ್ಲೇಖಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಕೇರಳ ಲವ್ ಸ್ಟೋರಿ ಪಾರ್ಟ್ 1 ಮತ್ತು ಇತ್ತೀಚೆಗೆ ಬಿಡುಗಡೆಯಾದ ಭಾಗ 2 ಸಿನಿಮಾಗಳ ನಂತರ ದೇಶದ ಲವ್ ಜಿಹಾದ್ ಎಂಬ ಪದವು ಹೆಚ್ಚು ಪ್ರಚಲಿತದಲ್ಲಿದೆ. ಈ ಹಿಂದೆ ಕೇರಳದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಆರೋಪಗಳು ನಮ್ಮ ರಾಜ್ಯದ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಲ್ಲಿಯೂ ಕೇಳಿಬರತೊಡಗಿವೆ.

ಇದನ್ನೂ ಓದಿ: ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್ ಜಿಹಾದ್ ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

2024ರ ಏಪ್ರಿಲ್ 18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಹಿಂದೂ ಯುವತಿ ನೇಹಾ ಹಿರೇಮಠ ಹತ್ಯೆಯಾಗಿತ್ತು. ಫಯಾಜ್ ಎಂಬ ಕಾಲೇಜು ಸ್ನೇಹಿತನೇ ಆಕೆಯನ್ನು ಕೊಲೆ ಮಾಡಿದ್ದಾನೆ. ಮದುವೆಗೆ ನಿರಾಕರಣೆಯೇ ಘಟನೆಗೆ ಕಾರಣ ಎನ್ನಲಾಗುತ್ತದೆ. ಆ ಬಳಿಕ ಕೇಳಿಬರಲು ಆರಂಭವಾದ ಲವ್ ಜಿಹಾದ್ ಎಂಬ ಮಾತು ಇತ್ತೀಚಿನ ಕೆಲ ಪ್ರಕರಣಗಳಲ್ಲಿ ಪ್ರತಿಧ್ವನಿಸಿದೆ. ಜಿಮ್ ಟ್ರೈನರ್ ಸಮೀರ್ ವಿರುದ್ಧ ಆರೋಪ ಕೇಳಿಬಂದಿದ್ದು, ಕಾಲೇಜು ಯುವತಿಗೆ ಬೆದರಿಕೆ ಸಂಬಂಧ ಮುಪಿಜ್ ಮಿಯಾನವರ್ ಪ್ರಕರಣದವರೆಗೂ ಇದೇ ಪದ ಕೇಳಿಬಂದಿದೆ. ಮುಸ್ಲಿಂ ಧರ್ಮದ ವ್ಯಕ್ತಿಯ ಜೊತೆ ತನ್ನ ಮಗಳು ಓಡಿಹೋಗಿದ್ದಾಳೆ ಎಂಬ ತಾಯಿಯ ದೂರಿಗೂ ಲವ್ ಜಿಹಾದ್ ಆರೋಪ ಮೆತ್ತಿಕೊಂಡಿದೆ. ಕಳೆದ ಮೂರು ತಿಂಗಳಿನಲ್ಲಿ ನಾಲ್ಕು ಲವ್ ಜಿಹಾದ್ ಆರೋಪ ಪ್ರಕರಣಗಳು ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿ ಬಂದಿವೆ.

ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿ ಬರ್ತಿರುವ ಲವ್ ಜಿಹಾದ್ ಆರೋಪ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕಮಿಷನರ್, ಸದ್ಯ ಯಾವೆಲ್ಲ ಪ್ರಕರಣದಲ್ಲಿ ದೂರು ನೀಡಿದ್ದಾರೋ ಅವರನ್ನು ದಾಖಲಿಸಲಾಗಿದೆ. ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅದು ಪ್ರೀತಿನಾ ಅಥವಾ ಲವ್ ಜಿಹಾದ್ ಭಾಗವಾ ಎಂಬುದು ಆ ಬಳಿಕವೇ ಗೊತ್ತಾಗಲಿದೆ ಎಂದು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *