ಸೆಕೆಯೆಂದು ಈಜಲು ಹೋದ ವಿದ್ಯಾರ್ಥಿಗಳು ನೀರುಪಾಲು: ಸಾವಲ್ಲೂ ಒಂದಾದ ಆಪ್ತ ಸ್ನೇಹಿತರು

ಸೆಕೆಯೆಂದು ಈಜಲು ಹೋದ ವಿದ್ಯಾರ್ಥಿಗಳು ನೀರುಪಾಲು: ಸಾವಲ್ಲೂ ಒಂದಾದ ಆಪ್ತ ಸ್ನೇಹಿತರು


ಸೆಕೆಯೆಂದು ಈಜಲು ಹೋದ ವಿದ್ಯಾರ್ಥಿಗಳು ನೀರುಪಾಲು: ಸಾವಲ್ಲೂ ಒಂದಾದ ಆಪ್ತ ಸ್ನೇಹಿತರು

ಹುಬ್ಬಳ್ಳಿ, ಮಾರ್ಚ್ 11: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ರಣಬಿಸಿಲಿಗೆ ಜನರು ಬಸವಳಿಯುತ್ತಿದ್ದಾರೆ. ನೀರು ಕಂಡ್ರೆ ಸಾಕು ಅಲ್ಲಿ ಸ್ವಲ್ಪ ಹೊತ್ತು ಆಟವಾಡಿ, ರಿಲ್ಯಾಕ್ಸ್ ಆಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ನಿಮ್ಮ ಮಕ್ಕಳು ಈ ರೀತಿಯಾಗಿ ಹೋಗಿದ್ದರೆ ಅವರ ಬಗ್ಗೆ ಸ್ವಲ್ಪ ಎಚ್ಚರವಹಿಸೋದು ಉತ್ತಮ. ಯಾಕಂದ್ರೆ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಬೈರಿದೇವರಕೊಪ್ಪದಲ್ಲಿರುವ ರೇಣುಕಾ ನಗರದ ಸಮರ್ಥ್ ಮತ್ತು ಹರೀಶ್ ಎಂಬ ಹದಿನೇಳು ವರ್ಷದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನ ಹೊಂಡದಲ್ಲಿ ಮುಳುಗಿ ಹೊರಟಿದ್ದು,ಇವರು ಅಕ್ಕ-ಪಕ್ಕದ ಮನೆಯ ನಿವಾಸಿಗಳು. ಗೋಪನಕೊಪ್ಪ ಬಳಿಯಿರೋ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಮರ್ಸ್ ಓದುತ್ತಿದ್ದ ಇವರು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ಕಾರಣ ಮನೆಯಲ್ಲಿದ್ದರು. ಹುಬ್ಬಳ್ಳಿಯಲ್ಲಿ ಬಿಸಿಲು ಹೆಚ್ಚಾಗಿರೋದರಿಂದ ಮನೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ RNS ಗಾಲ್ಫ್ ಮೈದಾನದಲ್ಲಿ ಹೊಂಡಕ್ಕೆ ಈಜಲು ಹೋಗಿದ್ದರು. ಮನೆಯಿಂದ ಹೋದವರು, ಸಂಜೆಯಾದರೂ ಬಂದಿರಲಿಲ್ಲ. ಈ ನಡುವೆ ಇವರ ಹೊಂಡದಲ್ಲಿ ಮುಳುಗಿರೋದನ್ನು ಗಮನಿಸಿರುವ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಇದ್ದರು.

ಇದನ್ನೂ ಓದಿ: ಹಿಟ್ ಆ್ಯಂಡ್ ರನ್ ಕೇಸ್ ಗೆ ಟ್ವಿಸ್ಟ್; KSRTC ಬಸ್ ಡ್ಯಾಶ್ ಕ್ಯಾಮರಾದಿಂದ ರಿವೀಲ್ ಆಯ್ತು ಸ್ಫೋಟಕ ಸತ್ಯ

ಇನ್ನು ಈ ಇಬ್ಬರಿಗೂ ಸರಿಯಾಗಿ ಈಜಲು ಬರುವಂತೆ. ಹೀಗಿದ್ದರೂ ಹುಚ್ಚು ಸಾಹಸ ಮಾಡಿ ಈಜಲು ಹೋದವರು ಬಾರದ ಲೋಕಕ್ಕೆ ತೆರಳಿದ್ದಾರೆ. ಆಧಾರವಾಗಿದ್ದ ಏಕೈಕ ಗಂಡು ಮಕ್ಕಳ ಅಕಾಲಿಕ ನಿಧನ ಹೆತ್ತವರನ್ನು ಅವರ ಮನೆಗೆ ದೂಡಿದೆ. ಶವ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಘಟನೆ ಆಕ್ರಂದನ ಕಲ್ಲು ಹೃದಯವನ್ನೂ ಕರಗಿಸುವಂತೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಸಿಲು ಎಂದು ಸಿಕ್ಕ ಸಿಕ್ಕಲ್ಲಿ ಈ ಜಲು ಹೋದ್ರೆ ಸಂಕಷ್ಟ ಎದುರಾಗಿದೆ, ಮಕ್ಕಳು ಮತ್ತು ಯುವಕರು ಈ ಬಗ್ಗೆ ಜಾಗೃತರಾಗುತ್ತಾರೆ. ಜೊತೆಗೆ ಹೆತ್ತವರು ಕೂಡ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳನ್ನು ಕಳೆದುಕೊಂಡ ಮೇಲೆ ಕಣ್ಣೀರು ಹಾಕಿದರೆ ಯಾವುದೇ ಪ್ರಯೋಜನವಾಗಲಾರದು ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *