ಹುಬ್ಬಳ್ಳಿ, (ಡಿಸೆಂಬರ್ 22): ಹುಬ್ಬಳ್ಳಿ ನಡೆದ ಮರ್ಯಾದೆ ಹತ್ಯೆ (ಹುಬ್ಬಳ್ಳಿ ಮರ್ಯಾದೆ ಹತ್ಯೆ) ಇಡೀ ರಾಜ್ಯವನ್ನೇ ಬಿಚ್ಚಿಬೀಳಿಸಿದೆ. 22 ವರ್ಷ ವಯಸ್ಸಿನ ಮಾನ್ಯ ಹಾಗೂ ವಿವೇಕಾನಂದ ಇಬ್ಬರೂ ಧಾರವಾಡ (ಧಾರವಾಡ) ಜಿಲ್ಲೆ ಹುಬ್ಬಳ್ಳಿ (ಹುಬ್ಬಳ್ಳಿ) ತಾಲೂಕಿನ ಇನಾಂ ವೀರಾಪುರ ಗ್ರಾಮದವರು. ಯುವತಿ ಲಿಂಗಾಯತ ಸಮಾಜಕ್ಕೆ ಸೇರಿದ್ರೆ.. ಯುವಕ ದಲಿತನಾಗಿದ್ದ. ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಮನೆಯವರ ಬೆದರಿಕೆಗೂ ಬಗ್ಗದಷ್ಟು ಆಳವಾಗಿ ಇಬ್ಬರ ನಡುವೆ ಪ್ರೀತಿ ಬೇರೂರಿತ್ತು. ಮಾನ್ಯ, ವಿವೇಕಾನಂದನ ಬಿಟ್ಟು ಬದುಕಲ್ಲ ಅಂತಾ ಹಠ ಹಿಡಿದ್ದಳು. ವಿವೇಕಾನಂದನಿಗೆ ನನ್ನ ನೀನು ಮದುವೆಯಾಗದೆ ಇದ್ರೆ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಹಠಕ್ಕೆ ಬಿದ್ದಾಗ, ವಿವೇಕಾನಂದ ಜುಲೈ 19ರಂದು ಹುಬ್ಬಳ್ಳಿಯಲ್ಲಿ ಮಾನ್ಯಳನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಆದರೆ, ಈಗ ಹೆತ್ತ ತಂದೆಯೇ ಮಗಳ ಬದುಕಿಗೆ ಮುಳ್ಳಾಗಿದ್ದಾನೆ.
ಹೌದು..ನಿನ್ನೆ(ಡಿಸೆಂಬರ್ 21) ಸಂಜೆ ಮಾನ್ಯ ತಂದೆ ಪ್ರಕಾಶ್ ಗೌಡ ಪಾಟೀಲ್ ವಿವೇಕಾನಂದ ವೀರನಗೌಡ ಪಾಟೀಲ್ ಮತ್ತು ಅರುಣ್ ಗೌಡ ಪಾಟೀಲ್ ಸೇರಿ ವಿವೇಕಾನಂದನ ಮನೆ ಮೇಲೆ ದಾಳಿ ಮಾಡಿದ್ದು, ಆನಂದ ಹಾಗೂ ಅವನ ತಾಯಿ ಜಯಶ್ರೀ ಹಾಗೂ ತಂದೆ ಸುಭಾಷ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗೇ ಮಗಳು 6 ತಿಂಗಳ ಗರ್ಭಿಣಿ ಅನ್ನೋದನ್ನು ನೋಡದ ರಾಕ್ಷಸ ತಂದೆ ಪ್ರಕಾಶ್ ಗೌಡ, ಕಬ್ಬಿಣದ ಪೈಪ್ ಹಾಗೂ ಗುದ್ದಲಿಯಿಂದ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ಮಾನ್ಯ ಮಾಡಿದ್ದು, ಇಂದು (ಡಿಸೆಂಬರ್ 22) ಅಂತ್ಯಕ್ರಿಯೆ ಸಹ ಸಂಭವಿಸಿದೆ.
ಇದನ್ನೂ ನೋಡಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಕೊನೆ ಸಲ ಮಗಳ ಮುಖ ನೋಡಲು ಬಾರದೆ, ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ
ಪತಿ ವಿವೇಕಾನಂದನೇ ಅಂತ್ಯಕ್ರಿಯೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ ಅಂತಿಮವಾಗಿ ಪತ್ನಿ ಮಾನ್ಯಗಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಬಳಿಕ ಟಿವಿ9ಗೆ ಜೊತೆ ಮಾತನಾಡಿರುವ ವಿವೇಕಾನಂದ, ಘಟನೆಯ ಭೀಕರತೆಯನ್ನು ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾನೆ. ಹಾಗಾದ್ರೆ, ಪ್ರೀತಿಸಿ ಮದುವೆ ಬಳಿಕ ಏನೆಲ್ಲಾ ಕಷ್ಟಗಳನ್ನ ಅನುಭವಿಸಿ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.