ಹುಬ್ಬಳ್ಳಿ, ಫೆಬ್ರವರಿ 20: ಎಲ್ಲರೂ ಚೆನ್ನಾಗಿರುವ ಉದ್ಯೋಗ ಮಾಡಬೇಕು, ಕೈ ತುಂಬಾ ಹಣ ಪಡೆಯಬೇಕು ಅನ್ನೋ ಕನಸು ಕಂಡಿರಬೇಕು. ಆದರೆ ಡಿಗ್ರಿ ಮುಗಿದ್ರು ಕೆಲಸ ಸಿಗದೇ ಇದ್ದಾಗ ಜೀವನ ನಿರ್ವಹಣೆಗಾಗಿ ಪರದಾಡುತ್ತಾರೆ. ಇಂಥವರನ್ನು ಟಾರ್ಗೆಟ್ ಮಾಡಿರುವ ಕೆಲ ಚೈನ್ ಲಿಂಕ್ ಬಿಜಿನೆಸ್ (ಚೈನ್ ಲಿಂಕ್ ಹಗರಣ) ಕಂಪನಿಗಳು, ನೀವು ಚೆನ್ನಾಗಿ ಹಣ ಮಾಡಬಹುದು, ಸ್ವಲ್ಪ ಹಣ ಹೂಡಿಕೆ ಮಾಡಿದರೆ ಸಾಕು ಅಂತ ಹೇಳುವ ಬಣ್ಣದ ಮಾತುಗಳಿಗೆ ಯುವ ಜನತೆ ಮರಳುತ್ತಾರೆ. ಇಂತಹ ಬಣ್ಣದ ಮಾತುಗಳನ್ನು ಹೇಳಿ ಸಾವಿರ ಕೋಟಿ ರೂ ವಂಚಿಸಿರುವ ನೂರಾರು ಚೈನ್ ಲಿಂಕ್ ಫ್ರಾಡ್ಗಳು ದೇಶದಲ್ಲಿ ನಡೆದಿವೆ. ಇದೀಗ ಹುಬ್ಬಳ್ಳಿಯಲ್ಲಿ ಚೈನ್ ಕಂಪನಿಯೊಂದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿರುವ ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಕಚೇರಿಗೆ ನುಗ್ಗಿದ ಅನೇಕ ಕನ್ನಡಪರ ಹೋರಾಟಗಾರರು ಮತ್ತು ಸ್ಥಳೀಯರು ಇಂದು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರ ಆಕ್ರೋಶಕ್ಕೆ ಕಾರಣ, ಈ ಕಂಪನಿ ಜನರಿಗೆ ವಂಚನೆ ಮಾಡ್ತಿರೋದಿಲ್ಲ.
ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು: ತನಿಖೆಯಲ್ಲಿ ಹಣದ ರಹಸ್ಯ ಬಯಲು
ಮಹಾರಾಷ್ಟ್ರದ ಪುಣೆ ಮೂಲದ ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿ, ಮಾರ್ಕೆಟಿಂಗ್ ಕಂಪನಿಯಾಗಿದೆ. ಆದರೆ ಇದು ಚೈನ್ ಲಿಂಕ್ ಬಿಜಿನೆಸ್ ಹೆಸರಲ್ಲಿ ಜನರಿಗೆ ವಂಚನೆ ಮಾಡ್ತಿದೆ ಅನ್ನೋದು ಅನೇಕ ಕನ್ನಡಪರ ಮತ್ತು ಸ್ಥಳೀಯರ ಆರೋಪ. ಉದ್ಯೋಗವನ್ನು ಹುಡುಕುತ್ತಿರುವವರನ್ನೇ ಟಾರ್ಗೆಟ್ ಮಾಡಿ, ನಿಮಗೆ ಸ್ವಲ್ಪ ಹಣ ನೀಡಿ ಕೆಲವು ವಸ್ತುಗಳನ್ನು ಖರೀದಿಸಿದರೆ ಸಾಕು, ನೀವು ಕಂಪನಿಯ ಸದಸ್ಯರು ಆಗ್ತಿರಿ. ನೀವು ಅನೇಕರಿಗೆ ವಸ್ತುಗಳನ್ನು ಮಾರಾಟ ಮಾಡಿ, ನಿಮ್ಮ ಕೆಳಗೆ ಸಬ್ ಮೆಂಬರ್ ಮಾಡಿದರೆ ಅವರು ಮಾಡುವ ಬಿಜಿನಿಸ್ ನಿಂದ ನೀವು ಹಣ ಗಳಿಸಬಹುದು ಅಂತ ಹೇಳಿ ಯಾಮಾರಿಸುವ ಕೆಲಸ ಮಾಡ್ತಾರಂತೆ. ಉದ್ಯೋಗ ತರಬೇತಿ ಹೆಸರಲ್ಲಿ ಯುವತಿಯರನ್ನು ಕರೆದು ಅವರಿಗೆ ಹೆಚ್ಚಿನ ಹಣದ ಆಸೆ ತೋರಿಸಿ ಯಾಮಾರಿಸೋ ಕೆಲಸ ನಡೆಯುತ್ತಿದೆ ಅಂತ ಆರೋಪಿಸಿದ್ದಾರೆ.
ಸದಸ್ಯರು ಆಗಬೇಕಾದ್ರೆ ಅವರು 41 ಸಾವಿರ ರೂ ಬೆಲೆಯ ಕಿಟ್ ಖರೀದಿಸಬೇಕು. ಅದರಲ್ಲಿ ಬಟ್ಟೆ ಸೇರಿದಂತೆ ಕೆಲಿದ್ದು, ಖರೀದಿಸಿ ಸದಸ್ಯರು ಆಗಬೇಕು. ನಂತರ ಅವರು ಬೇರೆಯವರನ್ನು ತನ್ನ ಚೈನ್ನಲ್ಲಿ ಸೇರಿಸುತ್ತಾ ಹೋದಂತೆ ಅವರಿಗೆ ದುಡ್ಡು ಬರುತ್ತದೆ. ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚಿನ ಜನರನ್ನು ಆಕರ್ಷಿಸಿ ಇಂತಹದೊಂದು ಚೈನ್ ಲಿಂಕ್ ಬಿಜಿನೆಸ್ ಅನ್ನು ಮಾಡಲಾಗುತ್ತಿದೆ.
ನಾವು ಯಾರಿಗೂ ವಂಚನೆ ಮಾಡುತ್ತಿಲ್ಲ ಎಂದ ಮ್ಯಾನೇಜರ್
ಇನ್ನು ವೆಕ್ಸಾನ್ ಬಿಗ್ ವೆಲ್ ಲಿಮಿಟಿಡ್ ಕಂಪನಿಯ ಬಗ್ಗೆ ಸಬ್ ಅರ್ಬನ್ ಪೊಲೀಸ್ ಪ್ರೈವೇಟ್ ಪರಿಶೀಲನೆ ಇದೆ. ಸದ್ಯ ಕಚೇರಿಗೆ ಬೀಗ ಹಾಕಿದ್ದು, ಕಂಪನಿಯ ಪೂರ್ವಾಪರ ದಾಖಲಾತಿಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಹುಬ್ಬಳ್ಳಿ ಮ್ಯಾನೇಜರ್, ನಾವು ಯಾರಿಗೂ ವಂಚನೆ ಮಾಡುತ್ತಿಲ್ಲ. ಇದೊಂದು ಮಾರ್ಕೆಟಿಂಗ್ ಬಿಜಿನೆಸ್ ಅಷ್ಟೇ. ಇಲ್ಲಿ ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ನೀಡುತ್ತೇವೆ. ಅವರು ವ್ಯವಹಾರ ಮಾಡಿದಂತೆ ಅವರು ಹಣ ಗಳಿಸುವ ಅವಕಾಶವಿದೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?
ನಮ್ಮ ದೇಶದಲ್ಲಿ ಸಾವಿರಾರು ಚೈನ್ ಲಿಂಕ್ ಕಂಪನಿಗಳು ಹುಟ್ಟಿ ಜನರಿಗೆ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಸಾವಿರ ಕೋಟಿ ರೂ ವಂಚಿಸಿವೆ. ಇಂತಹದೊಂದು ಜಾಲವೇ ದೇಶದಲ್ಲಿ ದೊಡಮಟ್ಟದಲ್ಲಿದೆ. ಹೀಗಾಗಿ ವೆಕ್ಸಾನ್ ಬಿಗ್ ವೆಲ್ ಪ್ರೈವೇಟ್ ಲಿಮಿಟಿಡ್ ಕಂಪನಿಯ ಬಗ್ಗೆ ಸರಿಯಾಗಿ ಪರಿಶೀಲಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.