ಹುಬ್ಬಳ್ಳಿ ಲವ್ ಜಿಹಾದ್: ತಮ್ಮ ಸಮೀರ್‌ಗೆ ಹಿಂದೂ ಯುವತಿಯರನ್ನು ಪೂರೈಸುತ್ತಿದ್ದಳಾ ಅಕ್ಕ ತೈಸೀಮ್? ಸ್ಫೋಟಕ ಮಾಹಿತಿ!

ಹುಬ್ಬಳ್ಳಿ ಲವ್ ಜಿಹಾದ್: ತಮ್ಮ ಸಮೀರ್‌ಗೆ ಹಿಂದೂ ಯುವತಿಯರನ್ನು ಪೂರೈಸುತ್ತಿದ್ದಳಾ ಅಕ್ಕ ತೈಸೀಮ್? ಸ್ಫೋಟಕ ಮಾಹಿತಿ!

ಹುಬ್ಬಳ್ಳಿ ಲವ್ ಜಿಹಾದ್: ತಮ್ಮ ಸಮೀರ್‌ಗೆ ಹಿಂದೂ ಯುವತಿಯರನ್ನು ಪೂರೈಸುತ್ತಿದ್ದಳಾ ಅಕ್ಕ ತೈಸೀಮ್? ಸ್ಫೋಟಕ ಮಾಹಿತಿ!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪದಡಿ ಬಂಧಿತನಾಗಿರುವ ಸಮೀರ್ ಮುಲ್ಲಾ ಪ್ರಕರಣದಲ್ಲಿ ಆತನ ಸಹೋದರಿ ತೈಸೀಮ್ ಮುಲ್ಲಾಳೇ ಕಿಂಗ್‌ಪಿನ್ ಎಂಬ ಸ್ಫೋಟಕ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿಯನ್ನು ತನ್ನ ಸಹೋದರನಿಗೆ ಪರಿಚಯಿಸಿ, ಪಾರ್ಟಿಗಳಲ್ಲಿ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನಲಾಗಿದೆ.

ಧಾರವಾಡ/ಹುಬ್ಬಳ್ಳಿ (ಏ.03): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಆರೋಪದಡಿ ಬಂಧಿತನಾಗಿರುವ ಸಮೀರ್ ಮುಲ್ಲಾ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಪ್ರೀತಿಯ ನಾಟಕವಾಡಿ ಅತ್ಯಾ*ಚಾರ ಎಸಗಿದ್ದಲ್ಲದೆ, ಈತ ಅನೇಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿದ್ದ ಎನ್ನುವ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ. ಅಚ್ಚರಿಯ ವಿಷಯವೆಂದರೆ, ಈತನ ಈ ಕೃತ್ಯಗಳಿಗೆ ಸ್ವತಃ ಈತನ ಸಹೋದರಿಯೇ ಸಾಥ್ ನೀಡುತ್ತಿದ್ದಳು ಎಂಬ ದೂರು ಕೇಳಿಬಂದಿದೆ.

ಈ ಪ್ರಕರಣದಲ್ಲಿ ಸಮೀರ್ ಮುಲ್ಲಾ ಎನ್ನುವ ಆರೋಪಿಗೆ ಆತನ ಸಹೋದರಿ ತೈಸೀಮ್ ಮುಲ್ಲಾ ಪ್ರಮುಖವಾಗಿ ಸಾಥ್ ನೀಡುತ್ತಿದ್ದಳು ಎನ್ನಲಾಗಿದೆ. ಸಂತ್ರಸ್ತೆ ಯುವತಿ ಮೊದಲು ತೈಸೀಮ್ ಮುಲ್ಲಾಳನ್ನು ಏರೋಬಿಕ್ಸ್ ಕ್ಲಾಸ್‌ನಲ್ಲಿ ಪರಿಚಯ ಮಾಡಿಕೊಂಡಿದ್ದಳು. ಅಲ್ಲಿಂದ ಶುರುವಾದ ಇವರ ಸ್ನೇಹವನ್ನು ತೈಸೀಮ್ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿದ್ದಾಳೆ. ಸಂತ್ರಸ್ತ ಯುವತಿಯನ್ನು ತನ್ನ ಸಹೋದರ ಸಮೀರ್‌ಗೆ ಪರಿಚಯಿಸಿದ್ದೇ ಈ ತೈಸೀಮ್ ಎಂದು ಹೇಳಲಾಗುತ್ತಿದೆ.

ತೈಸೀಮ್ ಮುಲ್ಲಾ ಸಂತ್ರಸ್ತ ಯುವತಿಯೊಂದಿಗೆ ಅತಿಯಾದ ಆತ್ಮೀಯತೆ ಬೆಳೆಸಿಕೊಂಡಿದ್ದಳು. ಯಾವುದೇ ಬರ್ತ್‌ಡೇ ಪಾರ್ಟಿ ಇರಲಿ ಅಥವಾ ಹೋಟೆಲ್‌ಗಳಿಗೆ ಹೋಗುವ ಸಂದರ್ಭವಿರಲಿ, ತೈಸೀಮ್ ಸಂತ್ರಸ್ತೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದಳು. ಅಲ್ಲಿ ತನ್ನ ಸಹೋದರ ಸಮೀರ್‌ನನ್ನು ಕರೆಸಿ, ಅವರಿಬ್ಬರ ನಡುವೆ ಸಂಬಂಧ ಬೆಳೆಯುವಂತೆ ಮಾಡುತ್ತಿದ್ದಳು. ಪಾರ್ಟಿಯ ಮಧ್ಯದಲ್ಲಿ ತೈಸೀಮ್ ತನ್ನ ಪತಿಯೊಂದಿಗೆ ಅಲ್ಲಿಂದ ಹೊರಟು ಹೋಗಿ, ಸಂತ್ರಸ್ತ ಯುವತಿಯನ್ನು ಸಮೀರ್ ಜೊತೆ ಏಕಾಂಗಿಯಾಗಿ ಬಿಡುತ್ತಿದ್ದಳು ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಪೊಲೀಸರು ವಶಕ್ಕೆ ಪಡೆದಿರುವ ಸಮೀರ್ ಮುಲ್ಲಾನ ಮೊಬೈಲ್ ಫೋನ್ ಈಗ ಹತ್ತಾರು ರಹಸ್ಯಗಳನ್ನು ಹೊರಹಾಕುತ್ತಿದೆ. ಈತನ ಮೊಬೈಲ್‌ನಲ್ಲಿ ಹತ್ತಾರು ಹಿಂದೂ ಯುವತಿಯರ ಫೋಟೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಕೇವಲ ಒಬ್ಬ ಯುವತಿಯಲ್ಲದೆ, ಜಿಮ್‌ಗೆ ಬರುತ್ತಿದ್ದ ಮತ್ತು ಇತರ ಸಂಪರ್ಕಗಳ ಮೂಲಕ ಪರಿಚಯವಾಗಿದ್ದ ಹಲವಾರು ಹಿಂದೂ ಯುವತಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ ಎಂಬ ಸಂಶಯ ದಟ್ಟವಾಗಿದೆ.

ಈಗಾಗಲೇ ಸಾರ್ವಜನಿಕವಾಗಿರುವ ಕೆಲವು ವಿಡಿಯೋಗಳಲ್ಲಿ ತೈಸೀಮ್ ಮುಲ್ಲಾ, ಆಕೆಯ ಪತಿ, ಸಮೀರ್ ಮತ್ತು ಸಂತ್ರಸ್ತ ಯುವತಿ ಒಟ್ಟಾಗಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋಗಳು ಈ ಪ್ರಕರಣದಲ್ಲಿ ತೈಸೀಮ್ ಮತ್ತು ಆಕೆಯ ಪತಿಯ ಪಾತ್ರವಿರುವುದನ್ನು ಪುಷ್ಟೀಕರಿಸುವಂತಿದೆ. ಪ್ರೀತಿಯ ಹೆಸರಿನಲ್ಲಿ ಯುವತಿಯರನ್ನು ಸೆಳೆದು, ನಂತರ ಅತ್ಯಾ*ಚಾರ ಎಸಗಿ ಬ್ಲ್ಯಾಕ್‌ಮೇಲ್ ಮಾಡುವ ಈ ವ್ಯವಸ್ಥಿತ ಜಾಲದ ಬಗ್ಗೆ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ. ಹಿಂದೂ ಸಂಘಟನೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮೀರ್ ಮಾತ್ರವಲ್ಲದೆ ಆತನಿಗೆ ಸಾಥ್ ನೀಡಿದ ಕುಟುಂಬಸ್ಥರನ್ನೂ ಬಂಧಿಸಬೇಕೆಂದು ಒತ್ತಾಯಿಸಿವೆ.

Source link

Leave a Reply

Your email address will not be published. Required fields are marked *