
ಹುಬ್ಬಳ್ಳಿ, ಏಪ್ರಿಲ್ 05: ಜಿಮ್ಗೆ ಬರುವ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಸಂಬಂಧ ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ವಿರುದ್ಧ ಪ್ರಕರಣ ದಾಖಲಾಗಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಘಟನೆಯ ಬಗ್ಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಹುಬ್ಬಳ್ಳಿಯಲ್ಲಿಯೇ ಮತ್ತೊಂದು ಲವ್ ಜಿಹಾದ್ ಆರೋಪ ಪ್ರಕರಣ ಬಯಲಾಗಿದೆ. ಪ್ರೀತಿಸುವ ನಾಟಕವಾಡಿ ಹಿಂದೂ ಯುವತಿಯ ಮೇಲೆ ಮುಫೀಸ್ ಮಿಯಾನ್ನವರ್ ಎಂಬಾತನಿಂದ ಅತ್ಯಾಚಾರ ನಡೆದಿದೆ, ಬ್ಲ್ಯಾಕ್ ಮೇಲ್ ಮಾಡಿ ನಿರಂತರ ದೌರ್ಜನ್ಯ ಎಸಗಲಾಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 5 ವರ್ಷಗಳ ಹಿಂದೆ ಕಾಲೇಜು ವಿದ್ಯಾರ್ಥಿನಿ ಸಂತ್ರಸ್ತ ಯುವತಿಗೆ ಮತ್ತೊಂದು ಕಾಲೇಜಿನ ಸ್ಟೂಡೆಂಟ್ ಆಗಿದ್ದ ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಸ್ ಮಿಯಾನ್ನವರ್ ಪರಿಚಯ ಕಾರ್ಯಕ್ರಮ. ಆ ಬಳಿಕ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದು, ಯುವತಿಯ ಜೊತೆ ಹಲವು ಪ್ರದೇಶಗಳಲ್ಲಿ ಆರೋಪಿ ಪತ್ತೆಯಾದ. ಇಬ್ಬರ ನಡುವೆ ಸಲುಗೆ ಬೆಳೆದ ಕಾರಣ ಒಂದು ದಿನ ಸಂತ್ರಸ್ತತೆಯನ್ನು ಗದಗ ರಸ್ತೆಯ ಸೇತುವೆಯ ಬಳಿ ಕರೆದುಕೊಂಡು ಹೋಗಿದ್ದ ಮುಫೀಸ್, ಯುವತಿಯ ವಿರೋಧದ ನಡುವೆಯೂ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ. ಜೊತೆಗೆ ಆ ದೃಶ್ಯಗಳನ್ನು ಸೆರೆ ಹಿಡಿದಿದ್ದ. ಬಳಿಕ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ಉಳಿಸುವುದಿಲ್ಲ. ತಾನು ಕರೆದಾಗಲೆಲ್ಲಾ ಬರಬೇಕು ಎಂದು ಬೆದರಿಕೆ ಹಾಕಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್; ಯುವತಿಯನ್ನು ಮಾಡೆಲ್ ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?
ಆ ಬಳಿಕ 2025ರಲ್ಲಿ ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಧಾರವಾಡದಲ್ಲಿ ರಿಜಿಸ್ಟರ್ ಮದುವೆ ಆಗಲು ಮುಫೀಸ್ ಸಿದ್ಧತೆ ನಡೆಸಿದ್ದರು. ಆದರೆ ವಿಷಯ ತಿಳಿದು ವಿಯುವತಿ ಕುಟುಂಬಸ್ಥರು ಮದುವೆ ನಿಲ್ಲಿಸಿದ್ದರು. ಯುವತಿ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಆರೋಪಿ ಸುಮಾರು 10-15 ಬಾರಿ ಭೇಟಿ ನೀಡಿದ್ದ. ಈ ನಡುವೆ 2025ರ ನವೆಂಬರ್ ಮೂರನೇ ವಾರ ಯುವತಿ ಮನೆಗೆ ಮತ್ತೆ ಮುಫೀಸ್ ಬಂದಿದ್ದು, ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಆರೋಪಿ, ವಿಷಯ ಯಾರಿಗಾದರೂ ಹೇಳಿದರೆ ನಿನ್ನ ತಂದೆ ತಾಯಿಯನ್ನ ಸುಮ್ಮನೆ ಬಿಡುವುದಿಲ್ಲ ಎಂದು ಮತ್ತೆ ಬೆದರಿಸಿದ್ದಾನೆ. ಹೀಗಾಗಿ ಹೆದರಿ ವಿಷಯವನ್ನು ಯುವತಿ ಆರಂಭದಲ್ಲಿ ಯಾರಿಗೂ ತಿಳಿಸಲಿಲ್ಲ. ಆದರೆ ಈಗ ಸಮೀರ್ ಮುಲ್ಲಾನ ಜಿಹಾದ್ ಪ್ರಕರಣ ಹೊರ ಬಂದ ಬಳಿಕ ದೈರ್ಯದಿಂದ ಯುವತಿ ದೂರು ನೀಡಿದ್ದಾಳೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.