24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!

24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!


ಜುಲೈ, ಅಕ್ಟೋಬರ್ 31: ಚಿನ್ನದ ಬೆಲೆ (ಚಿನ್ನ) ಕಳೆದ ಎರಡು ವಾರದಿಂದ ಇಳಿಮುಖವಾಗುವ ಮುನ್ನ ಯಾರೂ ನೋಡದ ರೇಂಜ್‌ನಲ್ಲಿ ಏರಿ ಹೊಸ ದಾಖಲೆಯನ್ನೇ ಬರೆದಿತ್ತು. ಒಂದು ವರ್ಷದ ಶೇ. 50ರಿಂದ 60ರ ಶ್ರೇಣಿಯಲ್ಲಿ ಚಿನ್ನದ ಬೆಲೆ ಏರಿದ್ದು ಹಿಂದೆಂದೂ ಕಂಡು ಕೇಳಿರಲಿಲ್ಲ. ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುತ್ತಿರುವ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದಕ್ಕೆ ಇಂಬು ಕೊಡುವಂತೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ವರದಿಯಲ್ಲಿ ಈ ವಿಚಾರವನ್ನು ದೃಢಪಡಿಸಲಾಗಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ಸೆಪ್ಟೆಂಬರ್ ಕ್ವಾರ್ಟರ್‌ನಲ್ಲಿ (ಜುಲೈನಿಂದ ಸೆಪ್ಟೆಂಬರ್) 10 ಬಿಲಿಯನ್ ಡಾಲರ್‌ನಷ್ಟು ಹೂಡಿಕೆಗಳು ಶುದ್ಧ ಚಿನ್ನದ ಮೇಲೆ ಹರಿದುಬಂದಿವೆ. ಗೋಲ್ಡ್ ಬಾರ್‌ಗಳು, ಗೋಲ್ಡ್‌ಕಾಯಿನ್‌ಗಳ ಮೇಲೆ ಹೂಡಿಕೆದಾರರು ಸುಮಾರು 88,700 ಕೋಟಿ ರೂ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: ಮೆಚ್ಯೂರಿಟಿಗೆ ಬಂದ 2017-18ರ ಸಾವರಿನ್ ಗೋಲ್ಡ್ ಬಾಂಡ್; 2,971 ರೂನಿಂದ 11,922 ರೂಗೆ ಏರಿಕೆ

ಕುತೂಹಲ ಎಂದರೆ, ಭಾರತದಲ್ಲಿ ಸಾಂಪ್ರದಾಯಿಕವಾಗಿ ಜನರು ಚಿನ್ನದ ಖರೀದಿ ಮಾಡುತ್ತಾರೆ ಎಂದರೆ ಆಭರಣಗಳ ಖರೀದಿಯೇ ಹೆಚ್ಚು. ದೇಶದಲ್ಲಿ ಆಗುವ ಒಟ್ಟಾರೆ ಚಿನ್ನ ಖರೀದಿಯಲ್ಲಿ ಆಭರಣಗಳ ಪಾಲು ಅತಿಹೆಚ್ಚು ಇರುತ್ತದೆ. ಹೂಡಿಕೆಯಾಗಿ ಚಿನ್ನ ಖರೀದಿಸುವುದು ಕಡಿಮೆಯೇ. ಕಳೆದ ಕೆಲ ತಿಂಗಳಿಂದ ಹೂಡಿಕೆಗಾಗಿ ಚಿನ್ನದ ಖರೀದಿ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಜಾಗತಿಕ ಮಾರುಕಟ್ಟೆಗೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚು ವ್ಯತ್ಯಯವಾಗುತ್ತಿರಬಹುದು.

‘ಚಿನ್ನವನ್ನು ಈಗ ಪ್ರಮುಖ ಆಸ್ತಿಯಾಗಿ ಪರಿಗಣಿಸಲಾಗುತ್ತಿದೆ. ಹೆಚ್ಚು ಹೂಡಿಕೆದಾರರು ಚಿನ್ನವನ್ನು ಸೇರಿಸಿ ತಮ್ಮ ಪೋರ್ಟ್ಫೋಲಿಯೋಗಳನ್ನು ವಿಸ್ತರಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಹೂಡಿಕೆದಾರರಿಗೆ ಚಿನ್ನದ ಮೇಲಿನ ಆಸಕ್ತಿ ಮುಂದುವರಿಯಬಹುದು ಎಂದು ಭಾವಿಸುತ್ತೇನೆ’ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಯೋ ಸಚಿನ್ ಜೈನ್ ಹೇಳುತ್ತಾರೆ.

ಇದನ್ನೂ ಓದಿ: ಚಿನ್ನ, ಬೆಳ್ಳಿಗೆ ಸಾಲ; ಎಲ್ ಟಿವಿ ಇತ್ಯಾದಿ ಆರ್ ಬಿಐನ ಹೊಸ ಮಾರ್ಗಸೂಚಿ ಗಮನಿಸಿ…

ವಿಶ್ವಾದ್ಯಂತ ಸೆಪ್ಟೆಂಬರ್ ಕ್ವಾರ್ಟರ್‌ನಲ್ಲಿ ಚಿನ್ನದ ಖರೀದಿ ಭರಾಟೆ

ಜಾಗತಿಕವಾಗಿಯೂ ಕೂಡ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ ಇತ್ತು. ಬರೋಬ್ಬರಿ 1,313 ಟನ್ ಚಿನ್ನ ಬಿಕರಿಯಾಗಿದೆ. ಈ ಮೇಲಿನ ಹೂಡಿಕೆಗೆಂದೇ 524 ಟನ್ ಚಿನ್ನ ಖರೀದಿಯಾಗಿದೆ. ಭಾರತದಲ್ಲೇ 91.6 ಟನ್ ಚಿನ್ನದ ಮೇಲೆ ಹೂಡಿಕೆಯಾಗಿದೆ. ಇದರಲ್ಲಿ ಗೋಲ್ಡ್ ಕಾಯಿನ್, ಗೋಲ್ಡ್ ಬಾರ್‌ಗಳು, ಗೋಲ್ಡ್ ಐಟಿಎಫ್ ನಿಲುಗಡೆ ಹೆಚ್ಚಿರುವುದು ಹೌದು. ಆರ್ಥಿಕ ಅನಿಶ್ಚಿತ ಪರಿಸ್ಥಿತಿಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ ಎನ್ನುವ ಟ್ರೆಂಡ್ ನಿಜವಾಗುವುದು ಮತ್ತೆ ಖಚಿತವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *