
ಬೀಜಿಂಗ್, ಮಾರ್ಚ್ 31: ಡ್ಯಾನ್ಸ್ ಮಾಡುತ್ತಾ ಬಂದು ರೋಬೋಟ್ ಬಾಲಕನ ಕೆನ್ನೆಗೆ ಹೊಡೆದಿರುವ ಘಟನೆ ಚೀನಾದಲ್ಲಿ ನಡೆದಿದೆ. ಮಾರ್ಚ್ 21 ರಂದು ಚೀನಾದ ಶಾಂಕ್ಸಿಯಲ್ಲಿ ನಡೆದ ತಂತ್ರಜ್ಞಾನದಲ್ಲಿ ಈ ಘಟನೆ ನಡೆದಿದೆ.ರೋಬೋಟ್ ಯುನಿಟ್ರೀ ರೊಬೊಟಿಕ್ಸ್ ಅಭಿವೃದ್ಧಿಪಡಿಸಿದ G1 ಹ್ಯೂಮನಾಯ್ಡ್ ಮಾದರಿ ಎಂದು ಹೇಳಲಾಗಿದೆ. ಸುಮಾರು 35 ಕಿಲೋಗ್ರಾಂಗಳಷ್ಟು ತೂಕ ಮತ್ತು ಸುಮಾರು 13,500 ಡಾಲರ್ ಬೆಲೆ ಈ ಯಂತ್ರವನ್ನು ಪ್ರಾಥಮಿಕವಾಗಿ ಸಂಶೋಧನೆ, ಶೈಕ್ಷಣಿಕ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ