
ಅಂದಿನಿಂದ ಇಂದಿಗೆ 14 ವರ್ಷಗಳು ಕಳೆದಿವೆ. ನನಗೆ ಈಗ 47 ವರ್ಷ. ಹಲವು ವರ್ಷಗಳ ಚಿಕಿತ್ಸೆಯ ನಂತರ, ನಾನು ಕೋಲು ಇಲ್ಲದೆ ನಡೆಯಬಹುದು ಎಂಬುದು ಖಚಿತವಾಯ್ತು. ಜೊತೆಗೆ ನನ್ನ ಕುಟುಂಬವನ್ನು ನಾನು ನೋಡಿಕೊಳ್ಳಬಹುದು. ನನ್ನ ಕಾಲು ಇನ್ನೂ ದುರ್ಬಲವಾಗಿದೆ ನಾನು ಹೋರಾಡಿದ ಯುದ್ಧದ ಬಗ್ಗೆ ಅವು ನನಗೆ ನೆನಪಿಸುತ್ತಿವೆ. ಮೊದಲಿನಂತೆ ನಡೆಯುವುದಕ್ಕೆ ಆಗುತ್ತಿಲ್ಲ ಎಂದು ದುಃಖವಿದೆಯೇ ಎಂದು ಜನರು ನನ್ನ ಕೇಳಿದಾಗ ನಾನು ನಗುತ್ತೇನೆ. ಒಮ್ಮೆ ನಾನು ಸತ್ತಿದ್ದೇನೆ ಎಂದು ಘೋಷಿಸಲಾಯಿತು. ಆದರೆ ಇಂದು, ನನ್ನ ಮಕ್ಕಳು ಬೆಳೆಯುವುದನ್ನು ನಾನು ನೋಡುತ್ತಿದ್ದೇನೆ. ನನಗೆ ಪರಿಪೂರ್ಣತೆಯ ಅಗತ್ಯವಿಲ್ಲ; ನನ್ನನ್ನು ಎಂದಿಗೂ ಬಿಟ್ಟುಕೊಡದ ಜೀವನ ಮತ್ತು ಕುಟುಂಬ ನನಗಿದೆ ಎಂದು ಅವರು ಹೇಳಿಕೊಂಡಿದ್ದು, ಕಷ್ಟಕಾಲದಲ್ಲಿ ತನ್ನ ಬೆನ್ನೆಲುಬಾಗಿ ನಿಂತ ತನ್ನ ಕುಟುಂಬವನ್ನು ಶ್ಲಾಘಿಸಿದ್ದಾರೆ.
ಇವರ ಕತೆ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, ಕೇವಲ ಸಾವಿತ್ರಿ ಮಾತ್ರವಲ್ಲ, ಸತ್ಯವಾನ್ ಕೂಡ ಇರ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅವರ ಬೆನ್ನಿಗೆ ನಿಂತ ಕುಟುಂಬ ಹಾಗೂ ಪತಿಯನ್ನು ಶ್ಲಾಘಿಸಿದ್ದಾರೆ.
ಅಂದಹಾಗೆ ಇವರಿಗೆ ಬಂದ GBS ಎಂದರೆ ಗ್ವಿಲೆನ್-ಬಾರ್ ಸಿಂಡ್ರೋಮ್, ಇದು ಅಪರೂಪದ, ಗಂಭೀರವಾದ ಕಾಯಿಲೆಯಾಗಿದ್ದು, ಇದರಲ್ಲಿ ರೋಗನಿರೋಧಕ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ದಾಳಿ ಮಾಡುತ್ತದೆ, ಇದು ಹೆಚ್ಚಾಗಿ ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನ ನಂತರ ಸಂಭವಿಸುತ್ತದೆ. ಇದು ತ್ವರಿತ ಸ್ನಾಯು ದೌರ್ಬಲ್ಯ, ಜುಮ್ಮೆನಿಸುವಿಕೆ ಮತ್ತು ಸಂಭಾವ್ಯ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.