ಹೈದರಾಬಾದ್, ಅಕ್ಟೋಬರ್ 20: ಕೆಲವರಿಗೆ ದುಡಿಯುವುದು ಅನಿವಾರ್ಯ. ಹೀಗಾಗಿ ಹಬ್ಬದ ಸಂಭ್ರಮ ಸಡಗರವಿರಲಿ, ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಕೆಲಸ ಮಾಡ್ತಾರೆ. ಈ ವಿಚಾರದಲ್ಲಿ ಡೆಲಿವರಿ ವಿತರಕರು (ಡೆಲಿವರಿ ಬಾಯ್) ಹೊರತಾಗಿಲ್ಲ. ಈ ಸಮಯದಲ್ಲಿ ನೀವು ಏನೇ ಆರ್ಡರ್ ಮಾಡಿದ್ರೂ ಆ ಉತ್ಪನ್ನ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡ್ತಾರೆ ಈ ಡೆಲಿವರಿ ಬಾಯ್ಸ್. ಈ ಹಬ್ಬದ ಸಂದರ್ಭ ಅವರ ಮೊಗದಲ್ಲಿ ನಗು ತರಿಸಿದರೆ ಹೇಗಿರುತ್ತದೆ. ಡಿಜಿಟಲ್ ಕಾಂಟೆಂಟ್ ಕ್ರಿಯೇಟರ್ ಹೈದರಾಬಾದ್ನ ಗುಂಡೇಟಿ ಮಹೇಂಧರ್ ರೆಡ್ಡಿಯವರು (ಗುಂಡೇಟಿ ಮಹೇಂದರ್ ರೆಡ್ಡಿ) ಡೆಲಿವರಿ ಬಾಯ್ ಗಳ ಖುಷಿ ಪಡಿಸಲು ಪ್ರಯತ್ನಿಸಿದ್ದಾರೆ. ಆನ್‌ಲೈನ್ ಪ್ಲಾಟ್ ಫಾರ್ಮ್‌ಗಳಲ್ಲಿ ಸಿಹಿ ತಿಂಡಿಗಳನ್ನು ಆರ್ಡರ್ ಮಾಡಿ, ಮನೆಗೆ ತಲುಪಿಸಿದ ಡೆಲಿವರಿ ವಿತರರಿಗೆ ಉಡುಗೊರೆಯಾಗಿ ನೀಡಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಈ ವ್ಯಕ್ತಿಯ ಕೆಲಸವನ್ನು ಮೆಚ್ಚಿದ್ದಾರೆ.
ಗುಂಡೇಟಿ ಮಹೇಂಧರ್ ರೆಡ್ಡಿ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಶೀರ್ಷಿಕೆ ನೀಡಲಿಲ್ಲ, ನಾವು ದೀಪಾವಳಿಗಾಗಿ ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೋ ಮತ್ತು ಬಿಗ್ಬಾಸ್ಕೆಟ್‌ನಿಂದ ಸಿಹಿತಿಂಡಿಗಳನ್ನು ಆರ್ಡರ್ ಮಾಡಿ, ಅದನ್ನು ಮನೆಬಾಗಿಲಿಗೆ ತಂದ ಡೆಲಿವರಿ ವಿತರಕರಿಗೆ ಮರಳಿ ನೀಡಲಾಗಿದೆ. ಈ ದೀಪಾವಳಿಗೆ, ನಮ್ಮ ಡೆಲಿವರಿಗಳನ್ನು ವಿಶೇಷವಾಗಿಸುವ ನಗುವನ್ನು ಸಿಹಿಗೊಳಿಸಲು ನಾವು ನಿರ್ಧರಿಸಿದ್ದೇವೆ.ವಿವಿಧ ಡೆಲಿವರಿ ಆಪ್‌ಗಳಿಂದ ಸಿಹಿತಿಂಡಿಗಳನ್ನು ಆರ್ಡರ್ ಮಾಡಿದ್ದೇವೆ ಎಂದು ಬರೆದಿದ್ದಾರೆ.
ಇದನ್ನೂ ಓದಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಸಿಹಿ ತಿಂಡಿಗಳನ್ನು ನೀಡಲು ಡೆಲಿವರಿ ಬಾಯ್ಸ್ ಮನೆ ಬಾಗಿಲಿಗೆ ಬಂದಿರುವುದನ್ನು ಕಾಣಬಹುದು. ಆದರೆ ಈ ವ್ಯಕ್ತಿಯೂ ಈ ಸಿಹಿತಿಂಡಿಗಳಲ್ಲಿ ಫುಡ್ ಡೆಲಿವರಿ ಮಾಡುವವರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುವುದನ್ನು ಕಾಣಬಹುದು.
ಇದನ್ನೂ ಓದಿ:Viral: ತಿಂಗಳಿಗೆ ಅಲ್ಲ, ವಾರಕ್ಕೆ 21 ಸಾವಿರ ರೂ ಸಂಪಾದನೆ; ಇದು ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ಆದಾಯ
ಈ ವಿಡಿಯೋ ಇದುವರೆಗೂ ಹದಿನೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಸೇರಿದ್ದು ಒಬ್ಬ ಬಳಕೆದಾರ, ಒಳ್ಳೆಯ ಪ್ರಯತ್ನ, ಇತರರ ಮೊಗದಲ್ಲಿ ನಗು ಮೂಡಿಸಲು ಎಲ್ಲರಿಗೂ ಸಾಧ್ಯವಿಲ್ಲ. ಮತ್ತೊಬ್ಬರು, ಅಂತಿಮವಾಗಿ ಯಾರೋ ಅವರ ಪ್ರಯತ್ನಗಳನ್ನು ಗುರುತಿಸಿ, ಉಡುಗೊರೆಗಳನ್ನು ನೀಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇತರ ಬಳಕೆದಾರ ನೀವು ಡೆಲಿವರಿ ವಿತರಕರ ಮುಖ ತೋರಿಸದೇ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ