Viral: ಪ್ರಿಯಕರನಿಗೆ ಗಿಫ್ಟ್ ಕೊಡಲು 2ಲಕ್ಷ ರೂ. ಮೌಲ್ಯದ ವಾಚ್ ಕದ್ದ ಯುವತಿ ಅರೆಸ್ಟ್!

Viral: ಪ್ರಿಯಕರನಿಗೆ ಗಿಫ್ಟ್ ಕೊಡಲು 2ಲಕ್ಷ ರೂ. ಮೌಲ್ಯದ ವಾಚ್ ಕದ್ದ ಯುವತಿ ಅರೆಸ್ಟ್!


ಹೈದರಾಬಾದ್: ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎನ್ನುವ ಮಾತಿದೆ, ಆದರೆ ಇಲ್ಲೊಬ್ಬಳು ಯುವತಿ ತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡಲು ಹೋಗಿ ಅರೆಸ್ಟ್ ಆಗಿದ್ದಾಳೆ. ನಗರದ ಜುಬಿಲಿ ಹಿಲ್ಸ್‌ನಲ್ಲಿರುವ ಐಷಾರಾಮಿ ಶೋರೂಮ್‌ನಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಾಚ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ 26 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನೀಡಿದ ಮಾಹಿತಿ ಪ್ರಕಾರ, ಆರೋಪಿ ಯುವತಿ ಜುಬಿಲಿ ಹಿಲ್ಸ್‌ನಲ್ಲಿರುವ ಪ್ರತಿಷ್ಠಿತ ವಾಚ್ ಶೋರೂಮ್‌ಗೆ ಗ್ರಾಹಕಿಯಂತೆ ಎಂಟ್ರಿ ಕೊಟ್ಟಿದ್ದಾಳೆ. ತನಗೆ ಒಳ್ಳೆಯ ವಾಚ್‌ಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳಿದ್ದಾಳೆ. ಸಿಬ್ಬಂದಿ ವಿವಿಧ ಮಾದರಿಗಳನ್ನು ತೋರಿಸುತ್ತಿದ್ದಾಗ, ಯಾರಿಗೂ ಸಂಶಯ ಬರದಂತೆ ತಲಾ 1 ಲಕ್ಷ ರೂಪಾಯಿ ಮೌಲ್ಯದ ಎರಡು ‘ಟಿಸ್ಸೋಟ್’ (ಟಿಸ್ಸಾಟ್) ವಾಚ್‌ಗಳನ್ನು ಸದ್ದಿಲ್ಲದೆ ತನ್ನ ಬ್ಯಾಗ್‌ನಲ್ಲಿ ಅಡಗಿಸಿಕೊಂಡಿದ್ದಾಳೆ. ನಂತರ ಏನೂ ತಿಳಿಯದವಳಂತೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

ಸಿಸಿಟಿವಿಯಲ್ಲಿ ಯುವತಿಯ ಕೈಚಳಕ ಬಯಲು:

ವಾಚ್‌ಗಳು ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಶೋರೂಮ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವತಿಯ ಕೈಚಳಕ ಬಯಲಾಗಿದೆ. ತಕ್ಷಣವೇ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಲಾಗುತ್ತಿದ್ದು, ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಬಂದಿದ್ದ ಕಾರನ್ನು ನಂಬರ್ ಪ್ಲಾಟ್‌ಗಳನ್ನು ಪರಿಶೀಲಿಸಿದರು.

ಮತ್ತಷ್ಟು ಓದಿ: ವಿಡಿಯೋ: ಮಹಾರಾಷ್ಟ್ರ ಪೊಲೀಸ್ ಪಡೆಗೆ ಸೇರ್ಪಡೆಯಾದ ಖುಷಿ, ತಂದೆಯ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು

ಖಮ್ಮಂನಲ್ಲಿ ಸಿಕ್ಕಿಬಿದ್ದ ಪ್ರೇಮಿಗಳು:

ಆರೋಪಿ ಯುವತಿ ಖಮ್ಮಂ ಪತ್ತೆಯಾಗಿದ್ದಾಳೆ ಎಂದು ಆರೋಪಿ ಪತ್ತೆ ಹಚ್ಚಿದ್ದಾರೆ. ಅಲ್ಲಿಗೆ ತೆರಳಿದ ಪೊಲೀಸ್ ತಂಡ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಪ್ರಿಯಕರನಿಗೆ ದುಬಾರಿ ಉಡುಗೊರೆ ನೀಡುವ ಸಲುವಾಗಿ ಆಕೆ ಈ ಕಳ್ಳತನ ಎಸಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿದೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಕಳ್ಳತನ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 11:19 am, ಗುರುವಾರ, 16 ಏಪ್ರಿಲ್ 26



Source link

Leave a Reply

Your email address will not be published. Required fields are marked *