5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್

5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್

5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್

5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಹ್ಯುಂಡೈ ವರ್ನಾ, ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್ ಸೇರಿ ಆಯ್ದ ಕಾರುಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.

ಹೊಸ ಕಾರು ಖರೀದಿಸಲು ಯೋಚಿಸುತ್ತಿರುವವರಿಗೆ ಫೆಬ್ರವರಿ ತಿಂಗಳು ಒಂದು ವಿಶೇಷ ಅವಕಾಶ ನೀಡುತ್ತಿದೆ. ಹ್ಯುಂಡೈ ಕಂಪನಿಯು ತನ್ನ ಹಲವು ಮಾಡೆಲ್‌ಗಳ ಮೇಲೆ ಗರಿಷ್ಠ ₹73,000 ವರೆಗೆ ಪ್ರಯೋಜನ ಹಾಗೂ ರಿಯಾಯಿತಿಗಳನ್ನು ಘೋಷಿಸಿದೆ. ಇದು ಲಿಮಿಟೆಡ್ ಪೀರಿಯೆಡ್ ಆಫರ್ ಆಗಿದ್ದು, ನಗರದಿಂದ ನಗರಕ್ಕೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಸಾಧ್ಯತೆ ಇದೆ.
ಹ್ಯುಂಡೈ ವರ್ನಾ ಮಾಡೆಲ್‌ಗೆ ಗರಿಷ್ಠ ₹73,000 ವರೆಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾದ ಈ ಸೆಡಾನ್ ಕಾರಿನ ಮೇಲಿನ ಹೆಚ್ಚುವರಿ ಆಫರ್ ಗ್ರಾಹಕರನ್ನು ಸೆಳೆಯುತ್ತಿದೆ. ಇದರ ಆರಂಭಿಕ ಬೆಲೆ ಸುಮಾರು ₹10.79 ಲಕ್ಷ (ಎಕ್ಸ್ ಶೋರೂಂ).ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಮಾಡೆಲ್‌ಗೆ ₹33,000 ವರೆಗೆ ಪ್ರಯೋಜನಗಳು ಲಭ್ಯವಿದೆ. ಕಡಿಮೆ ಬೆಲೆಯ ಈ ಎಸ್‌ಯುವಿ, ಟಾಟಾ ಪಂಚ್‌ನಂತಹ ಮಾಡೆಲ್‌ಗಳಿಗೆ ಪೈಪೋಟಿ ನೀಡುತ್ತದೆ. ಇದರ ಆರಂಭಿಕ ಬೆಲೆ ₹5.68 ಲಕ್ಷದಿಂದ ಶುರುವಾಗುತ್ತದೆ.
ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್ ಮಾಡೆಲ್‌ಗಳಿಗೆ ತಲಾ ₹48,000 ವರೆಗೆ ಆಫರ್‌ಗಳನ್ನು ಘೋಷಿಸಲಾಗಿದೆ. ನಗರ ಪ್ರದೇಶದ ಪ್ರಯಾಣಕ್ಕೆ ಸೂಕ್ತವಾದ ಈ ಕಾರುಗಳು ಯುವಜನರ  ನೆಚ್ಚಿನ ಕಾರಾಗಿ ಬದಲಾಗಿದೆ. ಜೊತೆಗೆ ಹ್ಯುಂಡೈ ಕಾರುಗಳ ಗರಿಷ್ಠ ಮಾರಾಟ ಪಟ್ಟಿಯಲ್ಲೂ ಈ ಕಾರುಗಳು ಕಾಣಿಸಿಕೊಂಡಿದೆ.

ಈ ಆಫರ್‌ಗಳು ಫೆಬ್ರವರಿ 28, 2026 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಪ್ರಮುಖವಾಗಿ ಇದು ಫೆಬ್ರವರಿ ತಿಂಗಳ ಆಫರ್ ಆಗಿದೆ.  ಸ್ಟಾಕ್ ಲಭ್ಯತೆಯನ್ನು ಅವಲಂಬಿಸಿ ಬೆಲೆ ಮತ್ತು ಆಫರ್‌ಗಳು ಬದಲಾಗಬಹುದು ಎಂದು ಕಂಪನಿ ತಿಳಿಸಿದೆ.

Source link

Leave a Reply

Your email address will not be published. Required fields are marked *