ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಈ ಸಿನಿಮಾ 100 ಕೋಟಿ ಗಳಿಕೆ ದಾಟಿದೆ. ಸಿನಿಮಾವನ್ನು ಮುಗಿಬಿದ್ದು ಜನ ವೀಕ್ಷಿಸುತ್ತಿದ್ದಾರೆ. ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ಭಾರತೀಯ ಸೇನೆಗೆ ರವಾನೆ ಮಾಡುವ ಕಥೆ ‘ಧುರಂಧರ’ ಸಿನಿಮಾ ಒಳಗೊಂಡಿದೆ. ಕೆಲವು ನಿಜ ಘಟನೆಗಳಿಂದ ಸ್ಪೂರ್ತಿ ಪಡೆದು ಈ ಸಿನಿಮಾ ಮಾಡಿದೆ. ಸಿನಿಮಾದಲ್ಲಿ ಕೆಲ ನಿಜ ವ್ಯಕ್ತಿಗಳ ಪಾತ್ರಗಳು, ಸ್ಥಳಗಳು ಸಹ ಇವೆ. ಆದರೆ ಇದೀಗ ಭಾರತೀಯ ಸರ್ಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ‘ಧುರಂಧರ’ ಸಿನಿಮಾದ ಎರಡು ಸಂಭಾಷಣೆ ಅಥವಾ ಹೆಸರನ್ನು ತೆಗೆಸಿದ್ದು, ಒಂದು ಸಂಭಾಷಣೆಯನ್ನು ಬದಲಾಯಿಸಲು ಸೂಚಿಸಲಾಗಿದೆ.
ಎಲ್ಲ ಚಿತ್ರಮಂದಿರಗಳಿಗೆ ವಿತರಕರು ಮತ್ತು ನಿರ್ಮಾಪಕರು ಮೇಲ್ ಮಾಡಿದ್ದು, ‘ಧುರಂಧರ’ ಸಿನಿಮಾದ ಹೊಸ ಆವೃತ್ತಿಯನ್ನು ಕ್ಯೂಬ್ ಮೂಲಕ ಡೌನ್‌ಲೋಡ್ ಮಾಡಿ ಹೊಸ ಆವೃತ್ತಿಯ ಪ್ರದರ್ಶನವನ್ನು ಮಾಡಬೇಕೆಂದು ಮನವಿ ಮಾಡಿದ್ದು, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸೂಚನೆಯ ಸಿನಿಮಾದ ಸಂಭಾಷಣೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಹ ಮೇಲ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ದೈವಕ್ಕೆ ಅವಮಾನ: ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ದೂರು ದಾಖಲು
‘ಧುರಂಧರ’ ಸಿನಿಮಾದಲ್ಲಿ ಎರಡು ಹೆಸರನ್ನು ತೆಗೆಯಲಾಗಿದೆ, ಒಂದು ಸಂಭಾಷಣೆಯನ್ನು ಬದಲಾಯಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸೂಚನೆಯಂತೆ ಸಿನಿಮಾ ತಂಡ ಈ ಬದಲಾವಣೆಯನ್ನು ಮಾಡಿದೆ. ಅಳಿಸಲಾದ ಎರಡು ಪದಗಳಲ್ಲಿ ‘ಬಲೂಚ್’ ಸಹ ಹೊಂದಿದೆ. ಪಾಕಿಸ್ತಾನದ ಬಲೂಚಿಸ್ಥಾನವನ್ನು ಸಿನಿಮಾದಲ್ಲಿ ಬಲೂಚ್ ಎಂದು ಕರೆಯಲಾಗಿದೆ. ಇದರ ಜೊತೆಗೆ ಮತ್ತೊಂದು ಹೆಸರನ್ನು ಸಹ ಅಳಿಸಲಾಗಿದೆ ಅಥವಾ ಬೀಪ್ ಮಾಡಲಾಗಿದೆ. ‘ಧುರಂಧರ’ ಸಿನಿಮಾದ ಈ ಬದಲಾದ ಆವೃತ್ತಿಯು ಜನವರಿ 1 ರಿಂದಲೇ ಪ್ರಸಾರ ಆಗಲಿದೆ.
‘ಧುರಂಧರ’ ಸಿನಿಮಾ ಈ ವರ್ಷ ಭಾರತದ ಭಾರಿ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿಗೂ ಹೆಚ್ಚು ಮೊತ್ತವನ್ನು ಹೊಂದಿದೆ. ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನ, ಆರ್ ಮಾಧವನ್, ಸಂಜಯ್ ದತ್ ಇನ್ನೂ ನಟಿಸಿದ್ದಾರೆ. ಸಿನಿಮಾದ ನಾಯಕಿ ಪಾತ್ರದಲ್ಲಿ ಸಾರಾ ಅರ್ಜುನ್ ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ