ಬಾಯ್‌ಫ್ರೆಂಡ್‌ಗಾಗಿ ಮನೆಯಲ್ಲಿ ಜಗಳವಾಡಿದೆ, ಆತನ ಧರ್ಮ ಬೇರೆಯಾಗಿತ್ತು, ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಆತನಿಗಾಗಿ ಪೋಷಕರಲ್ಲಿ ಜಗಳವಾಡಿದೆ. ಆದರೆ ಆತ ನನಗೆ ನೋವು ಮಾಡಿದ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ನೋವು ತೋಡಿಕೊಂಡಿದ್ದಾರೆ.

ನಾವಿಬ್ಬರು ರಿಲೇಶನ್‌ಶಿಪ್‌ನಲ್ಲಿ ಹಲವು ವರ್ಷಗಳಾಗಿದೆ. ಪ್ರೀತಿ ಗಾಢವಾಗಿತ್ತು. ಮನೆಯಲ್ಲಿ ಎಲ್ಲರ ವಿರೋಧವಿತ್ತು. ಕಾರಣ ಆತನ ಧರ್ಮ ಬೇರೆಯಾಗಿತ್ತು. ಆದರೂ ನಾನು ಮನೆಯಲ್ಲಿ ಆತನಿಗಾಗಿ ಹೋರಾಟ ಮಾಡಿದ್ದೆ, ಪೋಷಕರಲ್ಲಿ ಜಗಳ ಮಾಡಿದ್ದೆ. ಆತನ ಪ್ರೀತಿಗಾಗಿ ಎಲ್ಲರ ವಿರೋಧ ಕಟ್ಟಿಕೊಂಡಿದ್ದೆ. ಆದರೆ ಆತ ನನಗೆ ಹರ್ಟ್ ಮಾಡಿದಾಗ ಸಹಿಸಲು ಸಾಧ್ಯವಾಗಿಲ್ಲ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ ಹೇಳಿದ್ದಾರೆ.

ನಿಕ್ಕಿ ತಾಂಬೋಲಿ ಹಿಂದಿ ಬಿಗ್ ಬಾಸ್ 14ರಲ್ಲಿ ಕಾಣಿಸಿಕೊಂಡ ಬಳಿಕ ಮರಾಠಿ ಸೀಸನ್ 5ನಲ್ಲೂ ಕಾಣಿಸಿಕೊಂಡಿದ್ದರೆ. ನಿಕ್ಕಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಅರ್ಬಾಜ್ ಪಟೇಲ್ ಇಬ್ಬರು ಬಿಗ್ ಬಾಸ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ದಿ 50 ರಿಯಾಲಿಟಿ ಶೋದಲ್ಲಿ ಸ್ಪರ್ಧಿಗಳಾಗಿದ್ದಾರೆ. ಈ ಸ್ಪರ್ಧೆಯಲ್ಲಿ ನಿಕ್ಕಿ ಕೆಲ ಘಟನೆ ಹೇಳಿ ಭಾವುಕರಾಗಿದ್ದಾರೆ.

ದಿ 50 ರಿಯಾಲಿಟಿ ಶೋದಲ್ಲಿ ನಿಕ್ಕಿ ಹಾಗೂ ಅರ್ಬಾಜ್ ಬೇರೆ ಬೇರೆ ತಂಡವಾಗಿ ಹೋರಾಡುತ್ತಿದ್ದಾರೆ. ಸ್ಪರ್ಧೆಯಲ್ಲಿನ ಏರಿಳಿತದಲ್ಲಿ ನಿಕ್ಕಿ ತಾಂಬೋಲಿ ತನ್ನ ಗೆಳೆಯ ಅರ್ಬಾಜ್ ಮೇಲೆ ಅಸಮಾಧಾನಗೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ನಿಕ್ಕಿ ತಾಂಬೋಲಿ ಹಾಗೂ ಅರ್ಬಾಜ್ ಇಬ್ಬರು ಜಗಳವಾಡಿದ್ದಾರೆ. ಈ ವೇಳೆ ಭಾವುಕರಾಗಿ ನಿಕ್ಕಿ ತಮ್ಮ ಆಪ್ತ ಸ್ಪರ್ಧಿಗಳಲ್ಲಿ ನೋವು ಹೇಳಿಕೊಂಡಿದ್ದಾರೆ.

ಅರ್ಬಾಜ್ ಪಟೇಲ್ ಪ್ರೀತಿಗಾಗಿ ನಾನು ಮನೆಯಲ್ಲಿ ಜಗಳವಾಡಿದ್ದೇನೆ. ಅವನಿಗಾಗಿ ನನ್ನ ಕುಟುಂಬವನ್ನು ಎದುರು ಹಾಕಿಕೊಂಡಿದ್ದೇನೆ. ಆದರೆ ಆತ ಈಗ ನನಗೆ ಹರ್ಟ್ ಮಾಡಿದ್ದಾನೆ ಎಂದು ನಿಕ್ಕಿ ತಾಂಬೋಲಿ ಕಣ್ಣೀರಿಟ್ಟಿದ್ದಾರೆ. ಇತ್ತ ನಿಕ್ಕಿ ತಾಂಬೋಲಿ ಭಾವುಕರಾಗಿದ್ದಾರೆ ಅನ್ನೋದು ಅರಿತ ಅರ್ಬಾಜ್ ಪಟೇಲ್ ಸಮಾಧಾನ ಪಡಿಸಲು ಆಗಮಿಸಿದ್ದಾರೆ. ಇವರಿಬ್ಬ ಜೋಡಿ ಇದೀಗ ಮತ್ತೆ ಟಿವಿಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಇಷ್ಟು ವರ್ಷ ನಾವು ರಿಲೇಶನ್‌ಶಿಪ್‌ನಲ್ಲಿದ್ದೇವೆ. ಆದರೆ ನನ್ನ ತಂದೆ ಇನ್ನೂ ಅರ್ಬಾಜ್‌ನನ್ನು ಒಪ್ಪಿಕೊಂಡಿಲ್ಲ. ನಾನು ಹಲವು ಬಾರಿ ಮನ ಒಲಿಸುವ ಪ್ರಯತ್ನ ಮಾಡಿದ್ದೇನೆ, ಕೋಪಗೊಂಡಿದ್ದೇನೆ, ಆಕ್ರೋಶಗೊಂಡಿದ್ದೇನೆ. ಆದರೆ ತಂದೆ ಮನಸ್ಸು ಬದಲಿಸಿಲ್ಲ. ಎಲ್ಲಾ ಸಂದರ್ಭದಲ್ಲೂ ನಾನು ಕುಟುಂಬದ ವಿರುದ್ಧವಾಗಿ ಹಾಗೂ ಅರ್ಬಾಜ್ ಪರವಾಗಿ ನಿಂತಿದ್ದೇನೆ ಎಂದು ನಿಕ್ಕಿ ಹೇಳಿದ್ದಾರೆ.

ಇದೇ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಅರ್ಬಾಜ್ ಪಟೇಲ್ ನಿಕ್ಕಿ ತಾಂಬೋಲಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು. ಈ ಜೋಡಿ ಕಳೆದ ಕೆಲ ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಆದರೆ ಬಹಿರಂಗವಾಗಿ ಪ್ರಪೋಸ್ ಮಾಡಿರಲಿಲ್ಲ. ಮೊದಲ ಬಾರಿಗೆ ಅರ್ಬಾಜ್ ಪ್ರಪೋಸ್ ಮಾಡಿದ್ದರು. ಈದು ಭಾರಿ ಸದ್ದು ಮಾಡಿತ್ತು. ಇದೀಗ ಇದೇ ಜೋಡಿ ಸಣ್ಣದಾಗಿ ಜಗಳವಾಡಿ ಭಾವುಕರಾಗಿದ್ದಾರೆ.

Source link
ಬಾಯ್‌ಫ್ರೆಂಡ್‌ಗಾಗಿ ಮನೆಯಲ್ಲಿ ಜಗಳವಾಡಿದೆ, ಆದ್ರೆ ಆತ..ನೋವು ತೋಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ