ತಮ್ಮ 25 ವರ್ಷಗಳ ಸಿನಿಪಯಣದಲ್ಲಿ ‘ನೋ ಕಿಸ್ಸಿಂಗ್’ ಪಾಲಿಸಿ ಅನುಸರಿಸುತ್ತಿದ್ದ ನಟಿ ತಮನ್ನಾ ಭಾಟಿಯಾ, ವಿಜಯ್ ದೇವರಕೊಂಡ ಜೊತೆ ಮಾತ್ರ ಲಿಪ್‌ಲಾಕ್ ಮಾಡುವುದಾಗಿ ಹೇಳಿದ್ದರು. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಅವರ ಮದುವೆಯ ಸುದ್ದಿಯ ಬೆನ್ನಲ್ಲೇ ಇದೀಗ ಮತ್ತೆ ವೈರಲ್ ಆಗ್ತಿದೆ. ಏನದು ಸುದ್ದಿ?

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಬಗ್ಗೆ ಇದಾಗಲೇ ಅಧಿಕೃತ ಮಾಹಿತಿಯೂ ಹೊರಬಂದಿದ್ದು, ಇನ್ನೇನು ಮದುವೆಗೆ ಕೆಲವೇ ದಿನಗಳು ಬಾಕಿ ಇವೆ. ಆದರೆ ಇದರ ಬೆನ್ನಲ್ಲೇ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೊತೆಗಿನ ಲಿಪ್‌ಲಾಕ್ ವಿಷಯವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಅಷ್ಟಕ್ಕೂ, ಕನ್ನಡದಲ್ಲಿ `ಜಾಗ್ವಾರ್’ (Jagwar) ಮತ್ತು `ಕೆಜಿಎಫ್’ ಚಿತ್ರಗಳ ಐಟೆಮ್ ಹಾಡುಗಳಿಗೆ ನೃತ್ಯ ಮಾಡಿರೋ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಪ್ರಮುಖವಾಗಿ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಕೆಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಇದೀಗ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಕೂಡ.

ತಮನ್ನಾ ಒಂದು ವಿಷಯದಲ್ಲಿ ಭಾರಿ ಸ್ಟ್ರಿಕ್ಟ್ ಆಗಿದ್ದರು. ಅದು ಲಿಪ್‌ಲಾಕ್ (Liplock) ವಿಷಯ. ಕೆಲವೇ ಕೆಲವು ನಟಿಯರು ಕಿಸ್ ಕೊಡದ ಸಾಲಿಗೆ ಸೇರಿದ್ದು ಅದರಲ್ಲಿ ತಮನ್ನಾ ಕೂಡ ಒಬ್ಬರು. ಬಾಲ್ಯದ ಚಿತ್ರಗಳನ್ನು ಹಿಡಿದರೆ ತಮನ್ನಾ ನಟನಾ ಪ್ರಪಂಚಕ್ಕೆ ಬಂದು 23 ವರ್ಷಗಳೇ ಕಳೆದಿವೆ. ಈಕೆ ನಾಯಕಿಯಾಗಿ ಭಾರಿ ಜನಪ್ರಿಯತೆ ಪಡೆದಿದ್ದರೂ ಲಿಪ್ ಲಾಕ್ ಮತ್ತು ಇಂಟಿಮೇಟ್ ಸೀನ್‌ಗಳಿಂದ ಭಾರಿ ದೂರ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದ ನಟ, ಇಂಥ ಸನ್ನಿವೇಶಗಳಲ್ಲಿ ನಟಿಸಬಾರದು ಎಂದು ಷರತ್ತು ವಿಧಿಸಿಕೊಂಡಿರುವುದಾಗಿ ಹೇಳಿದ್ದರು.

ಆದರೆ, ಇದೇ ವೇಳೆ ವಿಜಯ ದೇವರಕೊಂಡ ಜೊತೆ ಮಾತ್ರ ಲಿಪ್‌ಲಾಕ್ ಮಾಡುವುದಾಗಿ ನಟಿ ಹೇಳಿದ್ದೇ, ಇದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ವಿಜಯ್ ದೇವರಕೊಂಡ ಅವರು ಹಾಟ್ ನಟ ಎಂದು ಫೇಮಸ್ ಆಗಿದ್ದವರು. ಆದರೆ ಅವರ ಜೊತೆ ಮಾತ್ರ ಲಿಪ್‌ಲಾಕ್ ಮಾಡಲು ತಾವು ಸಿದ್ಧ ಎಂದು ನಟಿ ಹೇಳಿದ್ದು ಯಾಕೆ ಎನ್ನುವುದು ಮಾತ್ರ ಇದುವರೆಗೂ ನಿಗೂಢವಾಗಿಯೇ ಉಳಿದಿದೆ.

ಆದರೆ, ತಮನ್ನಾ ಈ ಮಾತನ್ನು ಉಳಿಸಿಕೊಳ್ಳಲಿಲ್ಲ ಅನ್ನಿ. ವೆಬ್ ಸೀರಿಸ್‌ವೊಂದರಲ್ಲಿ (Web series) ಸೀನ್ ಒಂದರಲ್ಲಿ ತಮನ್ನಾ ಲಿಪ್‌ಲಾಕ್ ಮಾಡಿರುವುದು ಮಾತ್ರವಲ್ಲದೇ ಸಿಕ್ಕಾಪಟ್ಟೆಯಾಗಿ ಹಾಟ್ ಆಗಿ ನಟಿಸಿ ತಮ್ಮ ಮಾತನ್ನು ಬ್ರೇಕ್ ಮಾಡಿದರು. ‘ಲಸ್ಟ್ ಸ್ಟೋರಿಸ್’ ಸೀಸನ್- 2 ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ತಮನ್ನಾ.

ತಮನ್ನಾ ಜೊತೆ ಆಕೆಯ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ವಿಜಯ್ ವರ್ಮಾ ನಟಿಸಿದ್ದಾರೆ. ಆದ್ದರಿಂದಲೇ ಲಿಪ್ಲಾಕ್ಗೆ ತಾವು ಒಪ್ಪಿಕೊಂಡಿರುವುದಾಗಿ ನಟಿ ಹೇಳಿದ್ದರು. ಹಾಗಿದ್ದರೆ ವಿಜಯ ದೇವರಕೊಂಡ ಅವರ ಜೊತೆ ಯಾಕೆ ಒಪ್ಪಿಕೊಂಡರು ಎನ್ನುವುದು ನೆಟ್ಟಿಗರ ಪ್ರಶ್ನೆ. ಅಷ್ಟಕ್ಕೂ ಸಿನಿಮಾ ಮಂದಿಯ ತೀರಾ ವೈಯಕ್ತಿಕ ಜೀವನವನ್ನು ಕೆಣಕಬಾರದು ಎನ್ನುವುದು ಅಷ್ಟೇ ಸತ್ಯ ಅಲ್ವಾ?

Source link
Vijay Devarakonda ಜೊತೆ ಲಿಪ್‌ಲಾಕ್ ಮಾಡುವೆ: ಮೈಸೂರು ಸ್ಯಾಂಡಲ್ ಬ್ಯೂಟಿ ತಮನ್ನಾ ಆಸೆ ಕೇಳಿ!