Mahantesh Bilagi Death: ಕಲಬುರಗಿಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಅಪಘಾತವಾಗಿದ್ದು, ಕಾರ್‌ನಲ್ಲಿದ್ದ ನಾಲ್ವರು ನಿಧನರಾಗಿದ್ದಾರೆ. ಅವರಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಕೂಡ ಒಬ್ರು. ಇವರು ದಕ್ಷ ಅಧಿಕಾರಿಯಾಗಿದ್ದರು.

ಡ್ರೈವರ್ ಅತಿವೇಗವಾಗಿ ಕಾರ್ ಓಡಿಸುತ್ತಿದ್ದರು. ಬೈಕ್ ಬಂದಿದ್ದು, ಅವರನ್ನು ತಪ್ಪಿಸಲು ಹೋಗಿ ಕಾರ್ ಮೂರು ನಾಲ್ಕು ಬಾರಿ ಪಲ್ಟಿ ಆಗಿದೆ. ಆಸ್ಪತ್ರೆಯಲ್ಲಿ ಮಹಾಂತೇಶ್ ಅವರು ನಿಧನರಾಗಿದ್ದಾರೆ.

ಕಾರ್ ಚಾಲಕ ಆಂಥೋನಿ ರಾಜ್ ಅವರಿಗೂ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ವಿರುದ್ಧ ದೂರು ದಾಖಲಾಗಿದೆ. ಬಸವರಾಜ್ ಕಮರಟಗಿ ಎನ್ನುವವರು ಜೇವರ್ಗಿ ಠಾಣೆಯಲ್ಲಿ ಡ್ರೈವರ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮಹಾಂತೇಶ್ ಬೀಳಗಿ ಅವರ ಚಿಕ್ಕಪ್ಪನ ಮಕ್ಕಳಾದ ಈರಣ್ಣ ಬೀಳಗಿ, ಶಂಕರ ಬೀಳಗಿ, ಸ್ನೇಹಿತ ಈರಣ್ಣ ಸರಸಂಗಿ ಅವರು ನಿಧನರಾಗಿದ್ದಾರೆ.

ಶಂಕರ್ ಅವರು ಒಂದು ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದರು. ಆ ಮಕ್ಕಳಿಗೆ ನಾಮಕರಣ ಮಾಡಿಲ್ಲ. ಇಡೀ ಊರಿಗೆ 150kg ಪೇಡೆ ಹಚ್ಚಿದ್ದರು.

ಮಹಾಂತೇಶ್ ಅವರು ಹಣೆಗೆ ವಿಭೂತಿ ಹಚ್ಚಿಯೇ ಮನೆಯಿಂದ ಹೊರಗಡೆ ಬರುತ್ತಿದ್ದರು. ಈ ರೀತಿ ಕಾಣಸಿಗೋದು ಅಪರೂಪ.

ಬಡತನದಲ್ಲಿ ಬೆಳೆದ ಮಹಾಂತೇಶ್ ಅವರು ಡಿಪ್ರೆಶನ್‌ಗೆ ಜಾರಿ, ಅದನ್ನು ಗೆದ್ದು ಕೆಎಎಸ್ ಆಫೀಸರ್ ಆಗಿದ್ದರು, ಆಮೇಲೆ ಬಡ್ತಿ ಪಡೆದರು.

ಸಾಕಷ್ಟು ಜನರಿಗೆ ಅವರು ಸಹಾಯ ಮಾಡಿದ್ದಾರೆ. ಇಂದು ಕೂಡ ಜನರು ಅವರ ಸಹಾಯವನ್ನು ಸ್ಮರಿಸುತ್ತಾರೆ.

Source link
Mahantesh Bilagi Death: ತಿಂಗಳ ಹಿಂದೆ ಅವಳಿ ಮಕ್ಕಳು ಹುಟ್ಟಿದ್ದಕ್ಕೆ 150kg ಪೇಡೆ ಹಂಚಿದ್ದ ಶಂಕರ್