ಬೆಂಗಳೂರು, ನವೆಂಬರ್ 26: ರಸ್ತೆ ಅಪಘಾತದಲ್ಲಿ ಮಂಗಳವಾರ ಐಇಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿ) ಬಾಲ್ಯ ಜೀವನ ಬಹಳ ಕಷ್ಟದಿಂದ ಕೂಡಿತ್ತು ಅವರ ಬಾಲ್ಯ ಸ್ನೇಹಿತರು ನೆನಪಿಸಿಕೊಂಡಿದ್ದಾರೆ. ಮತ್ತೊಂದೆಡೆ, ಬಡತನದ ಬೇಗೆಯಿಂದ ಇದ್ದ ಮಹಾಂತೇಶ್ ಬೀಳಗಿ, ವಿಧವಾ ವೇತನಕ್ಕಾಗಿ ಲಂಚ ನೀಡಿರುವುದನ್ನು ನೆನಪಿಸಿಕೊಂಡಿರುವ ತಾಯಿ ತಮ್ಮ ಮೊದಲ ಗುರಿಯ ಬಗ್ಗೆ ಹೆಸರಿಸಿರುವ ಬರಹದ ಸಾಲುಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಹಾಂತೇಶ್ ಬೀಳಗಿ ಅವರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭ ಬರೆದುಕೊಂಡಿರುವ ಬರಹ ಇದು.
ಏನು ಹೇಳಿದ್ದರು ಮಹಾಂತೇಶ್ ಬೀಳಗಿ?
”ನನ್ನ ತಂದೆ ನಾನು 5 ವರ್ಷದವನಾಗಿದ್ದಾಗ ಅಕಾಲಿಕ ಮರಣ ಹೊಂದಿದ್ದರು. ಆಗ ನಮಗೆ ಕಿತ್ತು ತಿನ್ನುವ ಬಡತನ. ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ಸ್ಥಳೀಯ ಅಧಿಕಾರಿಗಳು ಅಲೆದಾಡಿಸಿದ್ದರು. ಕೊನೆಗೆ ನನ್ನ ತಾಯಿ 25 ರೂಪಾಯಿ ವಿಧವಾ ವೇತನ ಪಡೆಯಲು ನೂರು ರೂಪಾಯಿಗಳನ್ನು ಲಂಚವಾಗಿ ನೀಡಿದ್ದರು. ಆ ಮೇಲೆ ನನ್ನ ತಾಯಿಗೆ ವಿಧವಾ ವೇತನದ ಆದೇಶ ಪತ್ರವನ್ನು ನೀಡಬೇಕಾಗುತ್ತದೆ” ಎಂದು ಬೀಳಗಿ ಬರೆದುಕೊಂಡಿದ್ದಾರೆ.
”ಇದನ್ನೆಲ್ಲ ಗಮನಿಸಿ, ತಾಯಿಗೆ ಆದ ಅನ್ಯಾಯ ಸಮಾಜ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲ್ಪ ಮಾಡಿದೆ. ಕಷ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ. ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ನಾನು ಜಿಲ್ಲಾಧಿಕಾರಿಯಾದ ತಕ್ಷಣ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಜಾರಿಗೆ ತಂದರು. ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಎಂಬುದು. ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸಬೇಕು” ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: ಹೊತ್ತಿನ ಊಟಕ್ಕೂ ಪರದಾಟ, ಕಿರಾಣಿ ಅಂಗಡಿಯಲ್ಲಿ ಕೆಲಸ: ಮಹಾಂತೇಶ್ ಬೀಳಗಿ ಐಎಎಸ್ ಅಧಿಕಾರಿಯಾಗಲು ಪಟ್ಟ ಪಾಡು ಒಂದೇ ಎರಡೇ!
ಈ ಮಹತ್ವಾಕಾಂಕ್ಷೆಯ ಯೋಜನೆ ಜಿಲ್ಲೆಯ ಎಲ್ಲಾ ಮಹಾ ಅಧಿಕಾರಿಗಳು ಚಾಚೂತಪ್ಪದೆ ನಿರ್ವಹಿಸಬೇಕೆಂದು ಸೂಚಿಸುತ್ತೇನೆ ಎಂದು ಅವರು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ, ಅಂದು ಮಹಾಂತೇಶ ಬೀಳಗಿ ಬರೆದಿದ್ದ ಬರಹದ ಪ್ರತಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ