IAS Officer Pulkit Garg: ದುಬಾರಿ ಬೇಬಿ ಸಿಟ್ಟಿಂಗ್​ ಬದಲಾಗಿ ತನ್ನ ಮಗಳನ್ನು ಅಂಗನವಾಡಿಗೆ ಸೇರಿಸಿದ IAS ಅಧಿಕಾರಿ

IAS Officer Pulkit Garg: ದುಬಾರಿ ಬೇಬಿ ಸಿಟ್ಟಿಂಗ್​ ಬದಲಾಗಿ ತನ್ನ ಮಗಳನ್ನು ಅಂಗನವಾಡಿಗೆ ಸೇರಿಸಿದ IAS ಅಧಿಕಾರಿ


ಸರ್ಕಾರಿ ಶಾಲೆ ಮೂಗು ಮುರಿಯುವವರ ನಡುವೆ ಇಲೊಬ್ಬರು ಐಎಎಸ್ ಅಧಿಕಾರಿ ತನ್ನ ಮೂರು ವರ್ಷದ ಮಕ್ಕಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲಾ ಜಿಲ್ಲಾ ಮ್ಯಾಜಿಸ್ಟ್ (DM) ಪುಲ್ಕಿತ್ ಗರ್ಗ್ ಅವರು ತಮ್ಮ ಮಗಳು ಶಿಯಾನ ಅಂಗನವಾಡಿಗೆ ಸೇರಿಸುವ ಮೂಲಕ ದುಬಾರಿ ಶಿಕ್ಷಣದತ್ತ ಮುಖ ಮಾಡದೆ ಸರಳವಾಗಿ ಮೆರೆದು ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.

ಭಾರತದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಶಕ್ತಿಶಾಲಿ ನಾಗರಿಕ ಸೇವೆಯಲ್ಲಿರುವ ಪುಲ್ಕಿತ್ ಗರ್ಗ್ ಅವರಿಗೆ ತನ್ನ ಮಗಳನ್ನು ದುಬಾರಿ ಖಾಸಗಿ ಶಾಲೆಗಳಲ್ಲಿ ಓದುವುದು ಕಷ್ಟವೇನಲ್ಲ, ಆದರೂ ಕೂಡ ತನ್ನ ಸ್ಥಳೀಯ ಅಂಗನವಾಡಿಗೆ ಕೇಂದ್ರಕ್ಕೆ ಸೇರಿಸಿದೆ. ಈ ನಿರ್ಧಾರವು ಅವರ ಸರ್ಕಾರಿ ವ್ಯವಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯ ಸಂಕೇತ ಅಂಗನವಾಡಿ ಕಾರ್ಯಕರ್ತೆ ಸಪ್ನಾ ಸೋನಿ ಮಾಧ್ಯಮದ ಮುಂದೆ.

ಪುಲ್ಕಿತ್ ಗರ್ಗ್ ಯಾರು?

ಪುಲ್ಕಿತ್ ಗರ್ಗ್ ಮೂಲತಃ ಹರಿಯಾಣದವರು. ಅವರು ಉತ್ತರ ಪ್ರದೇಶ ಕೇಡರ್ನ 2016 ಬ್ಯಾಚ್ನ ಐಎಸ್ಎಸ್ ಅಧಿಕಾರಿ. ಚಿತ್ರಕೂಟದ ಜಿಲ್ಲಾಧಿಕಾರಿಯಾಗುವ ಮೊದಲು, ಪುಲ್ಕಿತ್ ಗರ್ಗ್ ಅವರನ್ನು ಝಾನ್ಸಿ ನಗರ ಪಾಲಿಕೆ ಆಯುಕ್ತರಾಗಿ ಮತ್ತು ಬನಾರಸ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಪುಲ್ಕಿತ್ ಗರ್ಗ್ ಅವರ ತಂದೆ ಪ್ರದೀಪ್ ಗರ್ಗ್ ಹರಿಯಾಣ ಗ್ರಾಮೀಣ ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೈಕ್ ಶೋರೂನ್ನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್

ಜಿಲ್ಲಾ ಮ್ಯಾಜಿಸ್ಟ್ರೇಟ್ ಹುದ್ದೆಯನ್ನು ಹೊಂದಿದ್ದರೂ, ಸರ್ಕಾರಿ ಶಿಕ್ಷಣ ಕೇಂದ್ರಗಳಲ್ಲಿ ಹೊಂದಿಕೊಂಡಿರುವ ಗುಣಮಟ್ಟದ ಸುಧಾರಣೆಗಳ ಬಗ್ಗೆ ಪುಲ್ಕಿತ್ ಗಾರ್ಗ್ ವಿಶ್ವಾಸ, ಒಂದು ವಿಶಿಷ್ಟ ಉಪಕ್ರಮದಲ್ಲಿ, ಅವರು ತಮ್ಮ ಮಗಳು ಶಿಯಾಳನ್ನು ತನ್ನ ಪ್ರಧಾನ ಕಚೇರಿಯ ಧನುಷ್ ಚೌಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸೇರಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:01 pm, ಮಂಗಳವಾರ, 3 ಫೆಬ್ರವರಿ 26



Source link

Leave a Reply

Your email address will not be published. Required fields are marked *