90 ದಿನಗಳ ಬಳಿಕ ಜೈಲಿನಿಂದ ಹೊರಬಂದ ಪೈರಸಿ ಕಿಂಗ್ ಐಬೊಮ್ಮ ರವಿ

90 ದಿನಗಳ ಬಳಿಕ ಜೈಲಿನಿಂದ ಹೊರಬಂದ ಪೈರಸಿ ಕಿಂಗ್ ಐಬೊಮ್ಮ ರವಿ


ಪೈರಸಿ (ಪೈರಸಿ) ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ರವಿ ಅಲಿಯಾಸ್ ಐಬೊಮ್ಮ ರವಿ ನಿನ್ನೆ ಚಂಚಗುಡ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಐಬೊಮ್ಮ ಸೇರಿದಂತೆ ಕೆಲವು ಪೈರಸಿ ವೆಬ್ ಸೈಟ್ ಮತ್ತು ಅಪ್ಲಿಕೇಶನ್ ಗಳನ್ನು ನಡೆಸುತ್ತಿದ್ದ ರವಿಯನ್ನು ಮೂರು ತಿಂಗಳ ಹಿಂದೆ ಪೊಲೀಸರು ಬಂದಿಸಿದ್ದರು. ಐಬೊಮ್ಮ ರವಿ ವಿರುದ್ಧ ಪೈರಸಿಯ ಹಲವಾರು ಪ್ರಕರಣಗಳು ಕಂಡುಬಂದಿವೆ. ವಿದೇಶದಲ್ಲಿ ಕೂತು ಪೈರಸಿ ವೆಬ್ ಸೈಟ್ ನಡೆಸುತ್ತಿದ್ದ ರವಿ, ಕೌಟುಂಬಿಕ ಕಾರಣಗಳಿಗಾಗಿ ಹೈದರಾಬಾದ್ ಗೆ ಬಂದಾಗ ಆತನನ್ನು ಪೊಲೀಸರು ಬಂಧಿಸಿದ್ದರು.

ಆದರೆ ಬಂಧಿಸಿದ 90 ದಿನಗಳ ಬಳಿಕವೂ ರವಿ ವಿರುದ್ಧ ಚಾರ್ಜ್ ಶೀಟ್ ದಾಖಲು ಮಾಡಿರಲಿಲ್ಲ. ಇದರ ಆಧಾರದ ಮೇಲೆ ಐಬೊಮ್ಮ ರವಿ ಜಾಮೀನು ಪಡೆದಿದ್ದಾರೆ. ಕೆಲವು ಕಠಿಣ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ರವಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರತಿ ದಿನವೂ ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕುವುದು, ತನ್ನ ಪಾಸ್‌ಪೋರ್ಟ್ ಮತ್ತು ವಿಸಾಗಳನ್ನು ಪೊಲೀಸರು ಒಪ್ಪಬೇಕು, ದೇಶ ಬಿಟ್ಟು ಹೋಗುವ ಪ್ರಯತ್ನ ಮಾಡುವುದನ್ನು ಮತ್ತು ಪೈರಸಿ ವೆಬ್‌ಸೈಟ್‌ಗಳ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ಹಾಕಿದೆ.

ಪೊಲೀಸರ ಪರವಾಗಿ ವಕೀಲರು, ‘ರವಿ ಸಾವಿರಾರು ಕೋಟಿ ನಷ್ಟಕ್ಕೆ ಕಾರಣವಾಗಿದ್ದು, ವಿದೇಶಿ ನಾಗರೀಕ ಸಹ ಆಗಿದ್ದಾನೆ. ಆದ್ದರಿಂದ ಆತ ಪಲಾಯನ ಮಾಡುವ ಅಪಾಯ ಇದೆ’ ಎಂದಿದ್ದರು. ಆದರೆ 90 ದಿನಗಳ ಬಳಿಕವೂ ಚಾರ್ಜ್ ಶೀಟ್ ಸಲ್ಲಿಸದೇ ಇರುವುದನ್ನೇ ಮುಖ್ಯವಾಗಿ ಪರಿಗಣಿಸಿದ ನ್ಯಾಯಾಧೀಶರು ರವಿಗೆ ಷರತ್ತುಗಳನ್ನು ವಿಧಿಸಿ ಮಧ್ಯಂತರ ಜಾಮೀನು ನೀಡಿದ್ದಾರೆ.

ಇದನ್ನೂ ಓದಿ:’ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?

ಐಬೊಮ್ಮ ರವಿ, ಸಾವಿರಾರು ಸಿನಿಮಾಗಳನ್ನು ಪೈರಸಿ ಮಾಡಿದ್ದ. ವಿದೇಶದಲ್ಲೇ ಕೂತು ತನ್ನ ಐಬೊಮ್ಮ ಸೇರಿದಂತೆ ಹಲವು ವೆಬ್ ಸೈಟ್‌ಗಳಿಗೆ ಉಚಿತ ಸಿನಿಮಾಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಕೆಲವು ಬಾರಿಯಂತೂ ಸಿನಿಮಾಗಳು ಬಿಡುಗಡೆ ಆಗುವ ಮುಂಚೆಯೇ ಅವುಗಳನ್ನು ವೆಬ್ ಸೈಟ್‌ಗೆ ಅಪ್ಲೋಡ್ ಮಾಡಿಬಿಡುತ್ತಿದ್ದವು. ತೆಲುಗು ಸಿನಿಮಾಗಳೇ ಹೆಚ್ಚಾಗಿ ಐಬೊಮ್ಮ ರವಿಯ ಟಾರ್ಗೆಟ್ ಆಗುತ್ತಿದ್ದವು. ಕೆಲ ವರದಿಗಳ ಪ್ರಕಾರ, ಐಬೊಮ್ಮ ರವಿ ಒಬ್ಬನಿಂದಲೇ ತೆಲುಗು ಚಿತ್ರರಂಗಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ತೆಲುಗು ಚಿತ್ರರಂಗದ ಹಲವು ನಿರ್ಮಾಣ ಸಂಸ್ಥೆಗಳು, ನಿರ್ಮಾಪಕ ಸಂಘ, ಫಿಲಂ ಚೇಂಬರ್‌ಗಳು ರವಿ ವಿರುದ್ಧ ಹಲವು ಬಾರಿ ದೂರು ನೀಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *