ಇತ್ತೀಚೆಗಿನ ದಿನಗಳಲ್ಲಿ ಕೃಷಿಯತ್ತ (ಕೃಷಿ) ಮುಖ ಮಾಡುವ ಯುವಕರ ಸಂಖ್ಯೆ ಇರುತ್ತದೆ. ಅದಲ್ಲದೇ ಆಧುನಿಕ ಕೃಷಿಯಲ್ಲಿ ಟ್ರಾಕ್ಟರ್‌ಗಳು, ಡ್ರೋನ್‌ಗಳು, ಸ್ಮಾರ್ಟ್ ನೀರಾವರಿ, ಮತ್ತು ಜೈವಿಕ ತಂತ್ರಜ್ಞಾನದ ಆಧುನಿಕ ಪರಿಕರಗಳ ಬಳಕೆಯ ಮೂಲಕ ಇಳುವರಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಆದರೆ ಕೃಷಿಯಲ್ಲಿ ಆಸಕ್ತಿ ಇದ್ದು, ತೆಂಗಿನ ತೋಟ ಮಾಡಬೇಕೆಂದುಕೊಂಡವರು ಈ ವಿಧಾನ ಅನುಸರಿಸಿದ್ರೆ 28 ಲಕ್ಷ ರೂ ಆದಾಯ ಬರೋದು ಗ್ಯಾರಂಟಿಯಂತೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೈತ ಪ್ರಗತಿ (ರೈತಾ ಪ್ರಗತಿ) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತೆಂಗಿನ ತೋಟದಲ್ಲಿ ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಒಂದು ತೆಂಗಿನ ತೋಟದಲ್ಲಿ 28 ಲಕ್ಷ ದುಡಿಯಬಹುದು. ತೆಂಗಿನ ತೋಟದಲ್ಲಿ ಹೆಚ್ಚು ಆದಾಯ ಬರಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕೆಂದು ವಿವರಿಸಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಇದು ಹಳ್ಳಿ ಜೀವನದ ಗಮ್ಮತ್ತು; ಕಾಯಕದಲ್ಲಿ ನಿರತರಾದ ಹಳ್ಳಿ ಜನ್ರು
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಬಯಸಿದ್ದು, ಒಬ್ಬ ಬಳಕೆದಾರ ಒಳ್ಳೆಯ ಮಾಹಿತಿ ಎಂದರೆ, ಮತ್ತೊಬ್ಬರು, ಇವರ ಹೇಳಿಕೆಯಲ್ಲಿ ವಿಸ್ತಾರವಾದ ಅರ್ಥವಿದೆ. ಯೋಚಿಸಿ ಚಿಂತಿಸಿ ಅರ್ಥ ಮಾಡಿಕೊಳ್ಳಿ, ಇಂದಿನ ದಿನಮಾನದಲ್ಲಿ ಯಾವುದೂ ಕಷ್ಟವಲ್ಲ. ಇವರೇ ಹೇಳಿದ್ದು ಒಂದು ತೆಂಗಿನಕಾಯಿ ಜೊತೆಗೆ ಹಲವಾರು ಬೆಳೆಗಳನ್ನು ಕೂಡ ಹೇಳಿದ್ದಾರೆ ಅಮೌಂಟ್ ಸ್ವಲ್ಪ ಹೆಚ್ಚಿಗೆ ಹೇಳಿದ್ದಾರೆ ಆದರೆ ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಾಡು ಪ್ರಾಣಿಗಳು ಬಿಟ್ರೆ ನಮಗೆ ಫಸಲು ಸಿಗೋದು ಎಂದರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 4:02 pm, ಸೋಮ, 2 ಫೆಬ್ರವರಿ 26