ನಿಂಬೆಹಣ್ಣು (ನಿಂಬೆ) ಅಡುಗೆ ಮನೆಯಲ್ಲಿ ತೀರಾ ಹೆಚ್ಚಾಗಿ ಬಳಸುವ ಹಣ್ಣಾಗಿದೆ. ಹೌದು ಜ್ಯೂಸ್, ಅಡುಗೆಯಿಂದ ಹಿಡಿದು ಸ್ಕಿನ್ ಕೇರ್, ಮನೆ ಕ್ಲಿನಿಂಗ್ ಕೆಲಸದಲ್ಲಿಯೂ ನಿಂಬೆ ಹಣ್ಣನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅದಕ್ಕಾಗಿಯೇ ಅನೇಕ ಒಂದೆರಡು ನಿಂಬೆಹಣ್ಣುಗಳನ್ನು ಖರೀದಿಸುವ ಬದಲು ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಖರೀದಿಸುತ್ತಾರೆ. ಆದರೆ ಹೀಗೆ ಖರೀದಿಸಿ ತಂದಂತಹ ನಿಂಬೆ ಬಣ್ಣಗಳು ದಿನದಲ್ಲಿಯೇ ಒಣಗಿ ಹೋಗುತ್ತವೆ, ಅವುಗಳ ಮೇಲ್ಮೈ ಕಂದು ಬಣ್ಣಕ್ಕೆ ತಿರುಗುತ್ತದೆ. ನೀವು ಸಹ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ಈ ಒಂದಷ್ಟು ಸಲಹೆಯನ್ನು ಪಾಲಿಸಿ, ನಿಂಬೆಹಣ್ಣು ಬೇಗ ಹಾಳಾಗುವುದೇ ಇಲ್ಲ.
ನಿಂಬೆಹಣ್ಣನ್ನು ಈ ರೀತಿ ಸಂಗ್ರಹಿಸಿಡಿ:
ಖರೀದಿಸುವಾಗ ಗಮನಿಸಬೇಕಾದ ವಿಷಯಗಳು?
ನಿಂಬೆಹಣ್ಣುಗಳನ್ನು ಈಗಾಗಲೇ ತಾಜಾವಾಗಿಡಲು, ಮಾರುಕಟ್ಟೆಯಿಂದ ಸರಿಯಾದ ನಿಂಬೆಹಣ್ಣನ್ನು ಖರೀದಿಸುವ ಮುಖ್ಯ. ನಿಂಬೆ ತುಂಬಾ ಗಟ್ಟಿಯಾಗಿದ್ದರೆ, ಅದನ್ನು ಖರೀದಿಸಬೇಡಿ. ಸ್ವಲ್ಪ ಮೃದುವಾದ ನಿಂಬೆಹಣ್ಣನ್ನು ಆರಿಸಿ. ಜೊತೆಗೆ ತಾಜಾ ನಿಂಬೆ ಉತ್ತಮ ವಾಸನೆಯನ್ನು ನೀಡುತ್ತದೆ. ಅದನ್ನೇ ಖರೀದಿಸಿ.
ರೆಫ್ರಿಜರೇಟರ್‌ನಲ್ಲಿ ಹೇಗೆ ಸಂಗ್ರಹಿಸುವುದು?
ನಿಂಬೆಹಣ್ಣುಗಳನ್ನು ತಾಜಾವಾಗಿಡಲು, ಅದನ್ನು ನೇರವಾಗಿ ರೆಫ್ರಿಜರೇಟರ್‌ನಲ್ಲಿ ಇಡಬೇಡಿ. ನಿಂಬೆಹಣ್ಣುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಈಗ ಗಾಜಿನ ಬಾಟಲಿಯಲ್ಲಿ ನೀರನ್ನು ತುಂಬಿಸಿ, ನಿಂಬೆಹಣ್ಣನ್ನು ಆ ಪಾತ್ರೆಯಲ್ಲಿ ಇಟ್ಟು, ಬಿಗಿಯಾಗಿ ಗಾಜಿನ ಬಾಟಲಿಯಲ್ಲಿ ಇರಿಸಿ ಮತ್ತು ಮುಚ್ಚಳ ಬಿಗಿಯಾಗಿ ಮುಚ್ಚಿ ಫ್ರಿಡ್ಜ್‌ನಲ್ಲಿ ಇಡಿ. ಈ ಸಲಹೆಯನ್ನು ಅನುಸರಿಸಿದರೆ, ನಿಂಬೆಹಣ್ಣುಗಳು ಬೇಗನೆ ಹಾಳಾಗುವುದಿಲ್ಲ. ಇನ್ನೂ ನಿಂಬೆ ರಸವನ್ನು ಸಹ ಫ್ರಿಡ್ಜ್ನಲ್ಲಿ ಸಂಗ್ರಹಿಸಬಹುದು.
ಇದನ್ನೂ ಓದಿ: ಪಾತ್ರೆ ತೊಳೆಯುವಾಗ ಅರಿವಿಲ್ಲದೆ ಮಾಡುವ ಈ ತಪ್ಪುಗಳು ಅಪಾಯವನ್ನು ಉಂಟುಮಾಡಬಹುದು
ರೆಫ್ರಿಜರೇಟರ್ ಇಲ್ಲದೆ ಸಂಗ್ರಹಿಸುವುದೇ?
ನಿಮ್ಮ ಬಳಿ ರೆಫ್ರಿಜರೇಟರ್ ಇಲ್ಲದಿದ್ದರೂ ಸಹ ನೀವು ನಿಂಬೆಹಣ್ಣುಗಳನ್ನು ಹೆಚ್ಚು ಕಾಲ ತಾಜಾವಾಗಿ ಸಂಗ್ರಹಿಸಿ. ಇದಾದ ನಂತರ, ನಿಂಬೆಹಣ್ಣುಗಳನ್ನು ಟಿಶ್ಯೂ ಪೇಪರ್‌ನಲ್ಲಿ ಪ್ರತ್ಯೇಕವಾಗಿ ಸುತ್ತಿ ಒಂದು ಇಟ್ಟು ತಂಪಾದ ಸ್ಥಳದಲ್ಲಿ ಇರಿಸಿ. ಈ ರೀತಿ ಮಾಡಿದರೆ ತಾಜಾ ಮತ್ತು ರಸಭರಿತವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ