ಚಿಕ್ಕಬಳ್ಳಾಪುರ, ಜನವರಿ 26: ವಿವಾಹತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದುರಂತ ಅಂತ್ಯ ಕಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಸಲ್ಮಾಳನ್ನು ಚಾಕುವಿನಿಂದ ಇರಿದು ಕೊಂಡು ಆಕೆಯ ಪ್ರಿಯತಮ ಬಾಬಾಜಾನ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬಾಜಾನ್ ಯಾಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ಇವರಿಬ್ಬರ ಅನೈತಿಕ ಸಂಬಂಧ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಈ ಹಿಂದೆ ಗಲಾಟೆ ಆಗುತ್ತಿದೆ.
ಸಲ್ಮಾ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲೂಕಿನ ಗರಿಗಿರೆಡ್ಡಿಪಾಳ್ಯ ನಿವಾಸಿ, ಈಕೆಯ ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದ. ಈಕೆಯೂ ಅದೇ ಕೆಲಸ ಮಾಡುತ್ತಿದೆ. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮತ್ತೊಂದೆಡೆ ಮೂಲತಃ ಆಂಧ್ರದ ನಿವಾಸಿಯಾಗಿರುವ ಬಾಬಾಜಾನ್ ಕುಟುಂಬ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮನೆಗೆ ವಾಸವಿತ್ತು. ಈತ ಚೇಳೂರು ಪಟ್ಟಣದಲ್ಲಿ ರೂಮ್ ಮಾಡಿಕೊಂಡು ವಾಸವಿದ್ದ. ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳು ಇದ್ದರೂ ಪ್ರೀತಿ ಪ್ರೇಮದ ಹೆಸರಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ನಡುವೆ ಅದೇನಾಗಿತ್ತೋ ಗೊತ್ತಿಲ್ಲ. ಸಲ್ಮಾ ಮನೆಗೆ ಬಂದಿದ್ದ ಬಾಬಾಜಾನ್ ಆಕೆಯನ್ನು ಕೊಯ್ದು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಮಾಜಿ ಪ್ರಿಯಕರನ ಪತ್ನಿಗೆ ಎಚ್ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ ಮಹಿಳೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಇನ್ನು ಸಲ್ಮಾ ಕೊಲೆ ಬಳಿಕ ಚೇಳೂರು ಪಟ್ಟಣದಲ್ಲಿ ಬಾಡಿಗೆ ರೂಮಿಗೆ ತೆರಳಿರುವ ಬಾಬಾಜಾನ್, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೇಳೂರು ಪೊಲೀಸರು ಎರಡು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಲ್ಮಾ ಹತ್ಯೆ ಪ್ರಕರಣದ ಜೊತೆಗೆ ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅನೈತಿಕ ಸಂಬಂಧದ ವಿಚಾರವಾಗಿ ಕುಟುಂಬಸ್ಥರ ಗಲಾಟೆ ಬಳಿಕವೂ ಇವರು ಬೇರೆ ಆಗಿರಲಿಲ್ಲ ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.