Headlines

ಬಾಯ್ಕಾಟ್​ನಿಂದ ಪಾಕಿಸ್ತಾನ್ ಎದುರಿಸಲಿರುವ ಪರಿಣಾಮಗಳೇನು?

ಬಾಯ್ಕಾಟ್​ನಿಂದ ಪಾಕಿಸ್ತಾನ್ ಎದುರಿಸಲಿರುವ ಪರಿಣಾಮಗಳೇನು?


ಟಿ20 ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸ ವರಸೆ ಮಾಡಿದೆ. ಅದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡುವ ಮೂಲಕ. ಫೆಬ್ರವರಿ 15 ರಂದು ಕೊಲೊಂಬೊದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಹಿಂದೆ ಸರಿಯಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಪಿಸಿಬಿಯ ಈ ಹೇಳಿಕೆ ಬೆನ್ನಲ್ಲೇ ಐಸಿ ತುರ್ತು ಸಭೆ ಕರೆದಿದೆ.

ಈ ಸಭೆಯ ಬಳಿಕ ಪಾಕಿಸ್ತಾನ್ ತಂಡವನ್ನು 20 ರಲ್ಲಿ ಮುಂದುವರೆಸಬೇಕಾ ಅಥವಾ ಬೇಡವಾ ಎಂಬುದು ನಿರ್ಧಾರ ಟಿ. ಒಂದು ವೇಳೆ ಪಾಕ್ ತಂಡವನ್ನು ಮುಂದುವರೆಸಬೇಕಿದ್ದರೆ ಭಾರತದ ವಿರುದ್ಧ ಪಂದ್ಯವಾಡಬೇಕೆಂದು ಒತ್ತಾಯಿಸಲಾಗುತ್ತದೆ.

ಇದಾಗ್ಯೂ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಪಾಕಿಸ್ತಾನದ ಹಿಂದೆ ಸರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಿದ್ದಾರೆ. ಈ ಕ್ರಮಗಳೇನು ಎಂದು ನೋಡುವುದಾದರೆ…

  • ಐಸಿಸಿ ನಿಯಮವನ್ನು ಉಲ್ಲಂಘಿಸಿದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಅನ್ನು ಅಮಾನತುಗೊಳಿಸಲಾಗಿದೆ.
  • ಪಾಕಿಸ್ತಾನ್ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಡೆ ಹಿಡಿಯುವುದಿಲ್ಲ. ಅಂದರೆ ಕೆಲ ವರ್ಷಗಳ ಕಾಲ ಪಾಕ್ ತಂಡ ಬ್ಯಾನ್ ಆಗಲಿದೆ.
  • ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿ ವಾರ್ಷಿಕ ಆದಾಯವನ್ನು ನೀಡುವುದಿಲ್ಲ.
  • ವಿರುದ್ಧದ ಪಂದ್ಯದಿಂದ ಹಿಂದೆ ಸರಿದರೆ ಆದಾಯ ನಷ್ಟಕ್ಕೆ ಜಿಯೋ-ಸ್ಟಾರ್‌ಗೆ ಸಂಪೂರ್ಣ ಪರಿಹಾರವನ್ನು ಪಾವತಿಸಲು ಪಿಸಿಬಿಯನ್ನು ಭಾರತವು ಒತ್ತಾಯಿಸುತ್ತದೆ.
  • ಪಾಕಿಸ್ತಾನ್ ಸೂಪರ್ ಕೂಟ ವಿದೇಶಿ ಆಟಗಾರರಿಗೆ ಎನ್ ಒಸಿ ನೀಡಲು ನಿರಾಕರಿಸಲಾಗಿದೆ.

ಪಾಕಿಸ್ತಾನ್ ಬ್ಯಾನ್?

ಐಸಿಸಿ ನಿಯಮ ಉಲ್ಲಂಘಿಸಿದರೆ ಪಾಕಿಸ್ತಾನ ತಂಡವನ್ನು ಬ್ಯಾನ್ ಮಾಡುವುದು ಖಚಿತ. ಇದರಿಂದ ಪಾಕಿಸ್ತಾನ್ ವಿರುದ್ಧ ಯಾವುದೇ ಪಂದ್ಯ ನಡೆಯುವುದಿಲ್ಲ. ಅಂದರೆ ಯಾವುದೇ ರಾಷ್ಟ್ರ ಕೂಡ ಪಾಕ್ ವಿರುದ್ಧ ಸರಣಿ ಆಡುವುದಿಲ್ಲ.

ಅಷ್ಟೇ ಅಲ್ಲದೆ ಐಸಿಸಿ ನಡೆಯುವ ಶಾಲೆಯ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡುವುದಿಲ್ಲ. ಅಂದರೆ ನಿರ್ದಿಷ್ಟ ಕಾಲದ ನಿಷೇಧದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿ ಆತಿಥ್ಯದ ಹಕ್ಕನ್ನು ರದ್ದುಗೊಳಿಸಲಾಗುವುದು. ಇದರಿಂದ ಕೂಡ ಪಿಸಿಬಿಯ ಆದಾಯಕ್ಕೆ ಹೊಡೆತ ಬೀಳಲಿದೆ.

ಇದನ್ನೂ ಓದಿ: ಟಿ20 ನಲ್ಲಿ ಕಣಕ್ಕಿಳಿಯಲಿರುವ 20 ತಂಡಗಳು ಪ್ರಕಟ

ಒಟ್ಟಿನಲ್ಲಿ ಟಿ20 ಔಟ್ ನಲ್ಲಿ ಹೊಸ ವರಸೆ ಶುರುವಾಗಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಬಹಿರಂಗ ಪತ್ರದ ಮೂಲಕ ಐಸಿಸಿ ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಕೇಳಿಕೊಂಡಿದೆ. ಇದಾಗ್ಯೂ ಪಿಸಿಬಿ ತನ್ನ ನಿರ್ಧಾರವನ್ನು ಬದಲಿಸದೇ ಇದ್ದರೆ ಮೇಲಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಂದಿನ ನಡೆಯೇನು ಎಂಬುದೇ ಈಗ ಕುತೂಹಲ.

ರಂದು ಪ್ರಕಟಿಸಲಾಗಿದೆ – 11:31 am, ಸೋಮ, 2 ಫೆಬ್ರವರಿ 26



Source link

Leave a Reply

Your email address will not be published. Required fields are marked *