‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ

‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ


'ಧುರಂಧರ್ 2', 'ಕೆಜಿ 2' ಚಿತ್ರ ಟೀಕಿಸಿದ ಎಫ್ ಬಾಲಿವುಡ್ ನಟ

ಯಾವುದೇ ಸಿನಿಮಾ ರಿಲೀಸ್ ಆದರೂ ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಅದೇ ರೀತಿ ‘ಅನಿಮಲ್’, ‘ಕೆಜಿಎಫ್’ ಹಾಗೂ ‘ಧುರಂಧರ 2’ (ಧುರಂಧರ 2) ರೀತಿಯ ಚಿತ್ರಗಳನ್ನು ಟೀಕೆ ಮಾಡಿದವರು ಅನೇಕರಿದ್ದಾರೆ. ಈಗ ಬಾಲಿವುಡ್ ನಟ ಇಮ್ರಾನ್ ಖಾನ್ ಕೂಡ ಈ ಸಾಲಿಗೆ ಸೇರಿದ್ದಾರೆ. ‘ಉದ್ದ ಕೂದಲು ಬಿಟ್ಟುಕೊಂಡು, ಕೋಪ ಮಾಡಿಕೊಂಡು, ಮುಖವೆಲ್ಲ ರಕ್ತ ಮಾಡಿಕೊಳ್ಳುವ ಪಾತ್ರ ನನಗೆ ಇಷ್ಟವಿಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ. ಜೊತೆಗೆ, ಅವರು ಈ ರೀತಿಯ ಪಾತ್ರಗಳನ್ನು ವೈಭವೀಕರಿಸುತ್ತಿರುವ ವಿಷಯದ ಬಗ್ಗೆ ಆತಂಕ ಹೊರಹಾಕಿದ್ದಾರೆ.

ಇಮ್ರಾನ್ ಖಾನ್ ಅವರು ‘ಆಸ್ಕ್ ಮಿ ಎನಿಥಿಂಗ್’ ಸೆಷನ್. ಈ ವೇಳೆ ಅವರಿಗೆ ‘ಮ್ಯಾಚೋ ಪಾತ್ರಗಳನ್ನು ಮಾಡಬೇಡಿ’ ಎಂದು ಕೋರಿದರು. ಇದಕ್ಕೆ ಉತ್ತರಿಸಿದ ಇಮ್ರಾನ್ ಖಾನ್, ‘ಉದ್ದ ಕೂದಲು ಬಿಟ್ಟುಕೊಂಡು, ಸಿಟ್ಟಾಗಿ ಕಾಣಿಸಿಕೊಳ್ಳುವುದು, ದೇಹವೆಲ್ಲ ರಕ್ತ ಮಾಡಿಕೊಳ್ಳುವ ಪಾತ್ರದ ಬಗ್ಗೆ ಆಸಕ್ತಿ ಇಲ್ಲ’ ಎಂದು ಅವರು ಹೇಳಿದ್ದಾರೆ.

ಆಲ್ಫಾ ಮೇಲ್ ಪುರುಷರ ಅಂದರೆ ಗ್ರೇಟ್ ಎಂಬ ರೀತಿಯ ಸಿನಿಮಾಗಳು ಕೆಲವು ಬರುತ್ತಿವೆ. ಈ ಸಂದರ್ಭದಲ್ಲಿ ಪುರುಷತ್ವವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎಂದು ಅವರಿಗೆ ಕೇಳಲಾಯಿತು. ‘ನಮ್ಮ ಚಲನಚಿತ್ರಗಳಲ್ಲಿ ಮತ್ತು ಒಟ್ಟಾರೆಯಾಗಿ ಪ್ರಪಂಚದಲ್ಲಿ ಸ್ತ್ರೀದ್ವೇಷ ಮತ್ತು ವಿಷಕಾರಿ ಪುರುಷತ್ವವನ್ನು ಹೇಗೆ ಪ್ರಚಾರ ಮಾಡಲಾಗಿದೆ ಎಂಬುದನ್ನು ನೋಡಿ ನಾನು ವಿಚಲಿತನಾಗಿದ್ದೇನೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಧುರಂಧರ 2′ ಚಿತ್ರದಲ್ಲಿ ಹೇಳಿದ್ದು ತಪ್ಪೆನಿಸಿದರೆ, ಅದರ ವಿರುದ್ಧ ನೀವು ಸಿನಿಮಾ ಮಾಡಿ’; ಆರ್ಜೀವಿ

ಅನೇಕರು ಇಮ್ರಾನ್ ಹೇಳಿಕೆಯನ್ನು ನಾನಾ ಸಿನಿಮಾಗಳಿಗೆ ಕನೆಕ್ಟ್ ಮಾಡುತ್ತಿದ್ದಾರೆ. ‘ಕೆಜಿಎಫ್ 2’ ಎಂದು ಹೇಳಿದ್ದಾರೆ. ಇದರಲ್ಲಿ ಯಶ್ ಉದ್ದ ಕೂದಲು ಬಿಟ್ಟಿದ್ದಾರೆ. ಅವರ ಮುಖ ರಕ್ತಸಿಕ್ತವಾಗಿದೆ. ‘ಅನಿಮಲ್’, ‘ಧುರಂಧರ, ‘ಧುರಂಧರ 2’ ಸಿನಿಮಾಗಳು ಕೂಡ ಇದೇ ರೀತಿ ಇವೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಷಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *