ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಟೀಮ್ ಇಂಡಿಯಾ ಕಾಂಗರೂನಾಡಿಗೆ ತೆರಳಿದೆ. ಬುಧವಾರ ದೆಹಲಿ ಏರ್‌ಪೋರ್ಟ್‌ನಲ್ಲಿ ಜೊತೆಗೂಡಿದ ಟೀಮ್ ಇಂಡಿಯಾ ಆಟಗಾರರು, ಅಲ್ಲಿಂದ ನೇರವಾಗಿ ಪರ್ತ್‌ಗೆ ಪ್ರಯಾಣಿಸಿದ್ದಾರೆ. ಈ ಪ್ರಯಾಣದ ಮುನ್ನ ವಿರಾಟ್ ಲಂಡನ್‌ನಿಂದ ದೆಹಲಿಗೆ ಆಗಮಿಸಿದ್ದರು.
ಇತ್ತ ಮುಂಬೈನಿಂದ ಬಂದ ರೋಹಿತ್ ಶರ್ಮಾ ಟೀಮ್ ಬಸ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಕಾಣದಂತೆ ಕಿಚಾಯಿಸುವಂತೆ ನಮಸ್ಕರಿಸುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರ ನಡುವಣ ಫ್ರೆಂಡ್ ಶಿಪ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಂದಹಾಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭೇಟಿಯಾಗಿ 7 ತಿಂಗಳು ಕಳೆದಿವೆ. ಕೊನೆಯ ಬಾರಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕಣಕ್ಕಿಳಿದಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಲಂಡನ್‌ಗೆ ತೆರಳಿದ್ದರು. ಇತ್ತ ರೋಹಿತ್ ಶರ್ಮಾ ಭಾರತಕ್ಕೆ ಮರಳಿದ್ದರು. ಇದೀಗ ಏಳು ತಿಂಗಳ ಬಳಿಕ ಟೀಮ್ ಇಂಡಿಯಾದ ದಿಗ್ಗಜರು ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಿದೆ. ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳನ್ನಾಡುವುದಿಲ್ಲ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಐದು ಮ್ಯಾಚ್ಗಳ ಟಿ20 ಸರಣಿಯನ್ನೂ ಸಹ ಆಡಲಿದೆ.