ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ರೆ ಟ್ರೋಫಿ ಖಚಿತ, ಟಿ20 ವಿಶ್ವಕಪ್ನಲ್ಲಿದೆ ಸಂಪ್ರದಾಯ , ಕಳೆದ ಎರಡು ಬಾರಿ ಈ ಸಂಪ್ರದಾಯ ಸರಿಯಾಗಿದೆ. ಇದರ ಜೊತೆಗೆ ಎರಡು ಪ್ರಮುಖ ಮೈಲಿಗಲ್ಲು ರಚನೆಯಾಗಲಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಮಾರ್ಚ್ 5ರಂದು ಈ ಪಂದ್ ನಡೆಯಲಿದೆ. ಭಾರತಕ್ಕೆ ಇದು ಕಠಿಣ ಸವಾಲು. ಆದರೆ ಸೆಮಿಫೈನಲ್ ಗೆದ್ದರೆ ಟ್ರೋಫಿ ಖಚಿತಗೊಳ್ಳಲಿದೆ ಎಂದು ಟಿ20 ವಿಶ್ವಕಪ್ ಸಂಪ್ರದಾಯ ಹೇಳುತ್ತಿದೆ. ಈ ಹಿಂದಿನ ದಾಖಲೆ, ಸಂಪ್ರದಾಯದ ವಿವರ ಇಲ್ಲಿದೆ.

2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಹಾಗೂ ಭಾರತ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತವನ್ನು 10 ವಿಕೆಟ್ಗಳಿಂದ ಮಣಿಸಿತ್ತು. ಬಳಿಕ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಇನ್ನು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಇಂಗ್ಲೆಂಡ್ ಮಣಿಸಿದ ಭಾರತ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಸೋಲಿಸಿ ಟ್ರೋಫಿ ಗೆದ್ದಿತ್ತು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದವರೇ ಟ್ರೋಫಿ ಗೆಲ್ಲುತ್ತಾರೆ ಅನ್ನೋ ಇತಿಹಾಸವಿದೆ. ಹೀಗಾಗಿಯೇ ಈ ಬಾರಿ 2ನೇ ಸೆಮಿಫೈನಲ್ ತೀವ್ರಕುತೂಹಲ ಕೆರಳಿಸಿದೆ. ಇದರ ಜೊತೆಗೆ ಕೆಲ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಭಾರತ ಸಜ್ಜಾಗಿದೆ.

ಭಾರತಕ್ಕೆ ಕೆಲ ಟಿ20 ವಿಶ್ವಕಪ್ ಸಂಪ್ರದಾಯ ಬ್ರೇಕ್ ಮಾಡುವ ಸವಾಲು ಮುಂದಿದೆ. ಪ್ರಮುಖವಾಗಿ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯವಹಿಸಿದ ದೇಶ ಟ್ರೋಫಿ ಗೆದಿಲ್ಲ. ಈ ಸಂಪ್ರದಾಯಕ್ಕೆ ಭಾರತ ಬ್ರೇಕ್ ಹಾಕುವ ಅವಕಾಶ ಈ ಬಾರಿ ಒದಗಿ ಬಂದಿದೆ. ಇನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳು 2 ಬಾರಿ ಟ್ರೋಫಿ ಗೆದ್ದಿದೆ. ಭಾರತಕ್ಕೆ 3ನೇ ಟ್ರೋಫಿ ಗೆದ್ದು ಗರಿಷ್ಠ ದಾಖಲೆಯ ಬರೆಯುವ ಅವಕಾಶವೂ ಇದೆ.

ಭಾರತ ಹಾಗೂ ಇಂಗ್ಲೆಂಡ್ ಟಿ20 ಮಾದರಿಯಲ್ಲಿ ಒಟ್ಟು 29 ಬಾರಿ ಮುಖಾಮುಖಿಯಾಗಿದೆ. ಈ ಪೈಕಿ 17 ಬಾರಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, 12 ಬಾರಿ ಇಂಗ್ಲೆಂಡ್ ಗೆಲುವು ಸಾಧಿಸಿದೆ. ಇನ್ನು ಹಾಲಿ ಟಿ20 ಚಾಂಪಿಯನ್ ತಂಡಕ್ಕೆ ಟ್ರೋಫಿ ಉಳಿಸಿಕೊಳ್ಳುವ ಅವಕಾಶವೂ ಒದಗಿ ಬಂದಿದೆ.

ಟಿ20 ಮಾದರಿಯಲ್ಲಿ ಇಂಗ್ಲೆಂಡ್ ಬಲಿಷ್ಠ ತಂಡವಾಗಿದೆ. ಮುಂಬೈನ ವಾಂಖೆಡೆಯಲ್ಲಿ ಪಂದ್ಯ ನಡೆಯಲಿದೆ. ಭಾರತ ಚೇಸಿಂಗ್ನಲ್ಲಿ ಕೆಲ ಇತಿಹಾಸ ನಿರ್ಮಿಸಿದೆ. ಹೀಗಾಗಿ ವಾಂಖೆಡೆಯಲ್ಲಿ ಟಾಸ್ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದೆ. ವಾಂಖೆಡೆ ರನ್ ಸ್ಕೋರಿಂಗ್ ಪಿಚ್ ಆಗಿದೆ. ಆದರೆ ಎಚ್ಚರಿಕೆ ಕೂಡ ಅಷ್ಟೇ ಮುಖ್ಯವಾಗಿದೆ.

ಟಿ20ಯಲ್ಲಿ ಇಂಗ್ಲೆಂಡ್ ಬಲಿಷ್ಠ

Source link
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ರೆ ಭಾರತಕ್ಕೆ ಟ್ರೋಫಿ ಖಚಿತ, ಟಿ20 ವಿಶ್ವಕಪ್ನಲ್ಲಿದೆ ಸಂಪ್ರದಾಯ