ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ 2ನೇ ಟೆಸ್ಟ್ ಪಂದ್ಯವು 5ನೇ ದಿನದಾಟಕ್ಕೆ ಕಾಲಿಟ್ಟಿದೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ತಂಡ 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 201 ರನ್ ಗಳಿಸಿತು. ಇನ್ನು 288 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 260 ರನ್ ಗಳಿಸಿ ಡಿಕ್ಲರ್ ಘೋಷಿಸಿದೆ.
ಅದರಂತೆ ಕೊನೆಯ ಇನಿಂಗ್ಸ್‌ನಲ್ಲಿ 549 ರನ್ ಗಳಿಸಿದ ಟೀಂ ಇಂಡಿಯಾ ನಾಲ್ಕನೇ ದಿನದಾಟಕ್ಕೆ 2 ವಿಕೆಟ್ ಕಳೆದುಕೊಂಡು 27 ರನ್ ಕಲೆಹಾಕಿದೆ. ಅದರಲ್ಲೂ ನಾಲ್ಕನೇ ದಿನದಾಟದ ಅಂತಿಮ ಹಂತದಲ್ಲಿ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆಗುವ ಮುನ್ನ ಕೈಚೆಲ್ಲಿದ್ದರು.
ಸೈಮನ್ ಹರ್ಮರ್ ಕಾರ್ಯವನ್ನು ಸರಿಯಾಗಿ ಗುರುತಿಸದೇ ಕೆಎಲ್ ರಾಹುಲ್ ಸ್ವೀಪ್ ಶಾಟ್ ಗೆ ಯತ್ನಿಸಿದರು. ಆದರೆ ಒಳ ನುಗ್ಗಿ ಬಂದ ಚೆಂಡು ಎಗರಿಸಿದೆ. ಇತ್ತ ಕೆಎಲ್ ರಾಹುಲ್ ಅವರ ಈ ಶಾಟ್ ನೋಡಿ ಲೆಜೆಂಡ್ ಅನಿಲ್ ಕುಂಬ್ಳೆ ಸಹ ಅಸಮಾಧಾನಗೊಂಡಿದ್ದಾರೆ.
ಈ ಪಂದ್ಯದ ವೇಳೆ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿರುವ ಅನಿಲ್ ಕುಂಬ್ಳೆ ಅವರು ಕೆಎಲ್ ರಾಹುಲ್ ಅವರು ನೀಡಿದ ರಿಯಾಕ್ಷನ್ ವಿಡಿಯೋ ಇದೀಗ ವೈರಲ್ ಆಗಿದೆ.