ನವದೆಹಲಿ, ಫೆಬ್ರುವರಿ 17: ಫೆಬ್ರುವರಿ 20 ರವರೆಗೆ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ (ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ) ಭಾರತೀಯ ಐ ಎಕ್ಸ್ ಪೋ ಪ್ರಮುಖ ಆಕರ್ಷಣೆಯಾಗಿದೆ. ಭಾರತದಲ್ಲಿ ಮತ್ತು ಭಾರತೀಯರೇ ಸ್ವಂತವಾಗಿ ನಿರ್ಮಿಸಿದ ಎಐ ಮಾದರಿಗಳು, ಎಐ ಏಜೆಂಟ್‌ಗಳು, ರೋಬೋಗಳ ಪ್ರದರ್ಶನ ನಡೆಯಿತು. ಪ್ರಧಾನಿ ನರೇಂದ್ರ ಮೋದಿ (ನರೇಂದ್ರ ಮೋದಿ) ಅವರು ಪ್ರತೀ ಸ್ಟಾಲ್ಗೂ ಹೋಗಿ ಹೊಸ ಆವಿಷ್ಕಾರಗಳನ್ನು ಕಂಡಿದ್ದಾರೆ. ಅದರ ಬಗ್ಗೆ ವಿವರಣೆಗಳನ್ನೂ ಪಡೆದಿದ್ದಾರೆ. ಶಿಕ್ಷಣ, ಕೃಷಿ, ತಂತ್ರಜ್ಞಾನ, ಫೈನಾನ್ಸ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಈ ಪ್ರದರ್ಶನದಲ್ಲಿ ಸಮರ್ಥವಾಗಿ ಉಪಯೋಗಿಸಬಹುದು. ಸರ್ವಮ್ ಎಐ, ಮೈಕೋ ರೋಬೋ ಇತ್ಯಾದಿ ನಾನಾ ರೀತಿಯ ಐ ಮಾದರಿಗಳು, ಐ ಆವಿಷ್ಕಾರಗಳು ಎಐ ಇಂಪ್ಯಾಕ್ಟ್ ಸಮಿಟ್ನ ಮೊದಲ ದಿನ ಪ್ರದರ್ಶನಗೊಂಡವು. ಭಾರತವು ಎಐ ಅನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡುವ ಮೂಲಕ ಮಾದರಿಯಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಭಾರತ್ ಮಂಟಪದಲ್ಲಿ ನಿನ್ನೆ (ಫೆ. 16) ಆರಂಭಗೊಂಡ ಎಐ ಇಂಪ್ಯಾಕ್ಟ್ ಸಮಿತಿ ಫೆಬ್ರವರಿ 20 ರವರೆಗೂ ಇದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ