ನವದೆಹಲಿ, ಫೆಬ್ರುವರಿ 18: ಎಐ ಇಂಪ್ಯಾಕ್ಟ್ ಸಮಿಟ್‌ನಲ್ಲಿ (AI ಇಂಪ್ಯಾಕ್ಟ್ ಸಮ್ಮಿಟ್) ಜಾಗತಿಕವಾಗಿ ಅಭಿವೃದ್ಧಿಯಾಗಿರುವ, ಅಭಿವೃದ್ಧಿಯಾಗುತ್ತಿರುವ ಐ ತಂತ್ರಜ್ಞಾನಗಳು, ನಾವೀನ್ಯತೆ, ಆವಿಷ್ಕಾರಗಳ ಪ್ರದರ್ಶನ. ಭಾರತದ ನೂರಾರು ಮಳಿಗೆಗಳಲ್ಲಿ ದೇಶದ ಎಐ ಭವಿಷ್ಯದ ದಿಗ್ಸೂಚಿಯನ್ನು ಕಾಣಬಹುದಾಗಿದೆ. ದೇಶೀಯವಾಗಿ ಅಭಿವೃದ್ಧಿಯಾದ ಎಐ ಫೌಂಡೇಶನಲ್ ಮ್ಯಾಟಲ್‌ಗಳಿಂದ ಹಿಡಿದು ರೋಬೋಟಿಕ್ಸ್‌ವರೆಗೆ ನೂರಾರು ಆವಿಷ್ಕಾರಗಳನ್ನು ಭಾರತೀಯರು ಜಗತ್ತಿಗೆ ತೋರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಎಐ ಆವಿಷ್ಕಾರಗಳು ನಡೆಯುವುದು ನಿಶ್ಚಿತವೆನಿಸಿದೆ.
ದೆಹಲಿಯ ಗಲ್ಗೋಟಿಯ ಯೂನಿವರ್ಸಿಟಿ ಇದೇ ಶೃಂಗಸಭೆಯಲ್ಲಿ ಸ್ಟಾಲ್ ಸ್ಥಾಪಿಸಿ, ಚೀನಾ ನಿರ್ಮಿತ ರೋಬೋನಾಯಿಯನ್ನು ಆವಿಷ್ಕರಿಸಿದ್ದು ತಾನೆಂದು ಹೇಳಿಕೊಂಡು ವಿವಾದ ಹುಟ್ಟುಹಾಕಿದೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಗಲ್ಗೋಟಿಯ ಯುನಿವರ್ಸಿಟಿಯ ಒಂದು ಪ್ರಮಾದ ಇಟ್ಟುಕೊಂಡು ಭಾರತದ ಎಐ ಸಾಧನೆಗಳನ್ನು ಹೀಗಳೆಯುವುದು ಸರಿಯಲ್ಲ ಎಂಬ ವಾದ ಇದೆ. ಪತ್ರಕರ್ತ ತಪಸ್ ಭಟ್ಟಾಚಾರಿ ಅವರು ಸಮಿತಿಯಲ್ಲಿ ಪ್ರದರ್ಶನಗೊಂಡಿರುವ ಭಾರತದ ಇತರ ಐ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನಗಳನ್ನು ಮಾಡಿದ್ದಾರೆ. ಕೆಲವು ಮಹತ್ವದ ಈ ಆವಿಷ್ಕಾರಗಳು ಈ ಕೆಳಕಂಡಂತಿವೆ:
ಇದನ್ನೂ ಓದಿ: ಎಐ ಸಮಿಟ್ ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾದರಿಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ
ಭಾರತ್ ಜೆನ್ ಎಐ
ಭಾರತ್ ಜೆನ್ ಸಂಸ್ಥೆ 22 ಭಾರತೀಯ ಭಾಷೆಗಳನ್ನು ಬೆಂಬಲಿಸುವಂತಹ 17 ಬಿಲಿಯನ್ ಪ್ಯಾರಾಮಿಟರ್ ನ ಮಲ್ಟಿಲಿಂಗ್ ಮಾಡಲ್ ಆದ ಪರಮ್ 27ಬಿ ಅನ್ನು ಅನಾವರಣಗೊಳಿಸಿದೆ. ಭಾರತದ ದತ್ತಾಂಶ ಬಳಸಿ ನಿರ್ಮಿತವಾಗಿರುವ ಈ ಐ ಮಾಡಲ್, ಆರೋಗ್ಯ, ಫಿನ್ಟೆಕ್, ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ಎಐ ಅಳವಡಿಕೆಯನ್ನು ಸುಲಭಗೊಳಿಸುತ್ತದೆ.
ParadigmIT ಸೋವರಿನ್ ಎಐ ಬಾಕ್ಸ್
ಪ್ಯಾರಾಡಿಗಮ್ ಐಟಿ ಕಂಪನಿಯ ಸೋವರಿನ್ ಎಐ ಬಾಕ್ಸ್ ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಇದಕ್ಕೆ ಬೇಕಾಗುವ ದತ್ತಾಂಶವೆಲ್ಲವೂ ಭಾರತದ ಒಳಗೆಯೇ ಇರುತ್ತದೆ. ಸೂಕ್ಷ್ಮ ದತ್ತಾಂಶದ ರಕ್ಷಣೆ ಆಗುತ್ತದೆ.
ತಪಸ್ ಭಟ್ಟಾಚಾರಿ ಅವರ ಎಕ್ಸ್ ಪೋಸ್ಟ್
ಭಾರತ AI ಇಂಪ್ಯಾಕ್ಟ್ ಶೃಂಗಸಭೆಯು ಸ್ಥಳೀಯ ಆವಿಷ್ಕಾರಗಳು ಮತ್ತು ಸಾಧನೆಗಳ ಕುರಿತು ಅನೇಕ ಕಥೆಗಳನ್ನು ಹೊಂದಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತ ಮತ್ತು ಭವಿಷ್ಯದ AI ತಂತ್ರಜ್ಞಾನಗಳ ಪ್ರದರ್ಶನಕ್ಕಾಗಿ ಮಾರ್ಕ್ಯೂ ಈವೆಂಟ್ ಆಗಿದೆ.
ಅಂತಹ ಪ್ರತಿಯೊಂದು ಕಥೆಯು ಭಾರತದ ಬೆಳೆಯುತ್ತಿರುವ AI ಪರಿಸರ ವ್ಯವಸ್ಥೆಗೆ ಸಾಕ್ಷಿಯಾಗಿದೆ. ನೂರಾರು ಸ್ಟಾಲ್ಗಳಿವೆ… pic.twitter.com/R4QCy0fTkW
– ತಪಸ್ ಭಟ್ಟಾಚಾರ್ಯ (@tapasjournalist) ಫೆಬ್ರವರಿ 18, 2026
ಸ್ಕೈ ಏರ್ ಮೊಬಿಲಿಟಿ
ಸ್ಕೈ ಏರ್, ಅರೈವ್ ಎಐ ಮತ್ತು ಅಟ್ಟೋನಮಿ ಕಂಪನಿಗಳು ವಿಶ್ವದ ಮೊದಲ ಎಂಡ್-ಟು-ಎಂಡ್ ಆಟೊನಾಮಸ್ ಕಾಮರ್ಸ್ ಡೆಲಿವರಿ ಸಿಸ್ಟಂ ಅನ್ನು ನಿರ್ಮಿಸಿವೆ. ಇದರಲ್ಲಿ ಡ್ರೋನ್‌ಗಳು ಪಾರ್ಸಲ್‌ಗಳನ್ನು ಮನೆಬಾಗಿಲಿಗೆ ಸಾಗಿಸಬಲ್ಲವು. ಪ್ರಯೋಗಾವಧಿಯಲ್ಲಿ 36 ಲಕ್ಷಕ್ಕೂ ಅಧಿಕ ಡೋರ್ ಡೆಲಿವರಿ ಮಾಡಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಸ್ಕೈ ಏರ್ ಮೊಬಿಲಿಟಿ ಭಾರತೀಯ ಮೂಲದ ಕಂಪನಿಯಾಗಿದೆ. ಅಟ್ಟೋನಮಿ ಅಮೆರಿಕನ್ ಕಂಪನಿಯಾದರೂ ಭಾರತೀಯ ಮೂಲದವರು ಕಟ್ಟಿದ ಸಂಸ್ಥೆ.
ಇದನ್ನೂ ಓದಿ: ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್‌ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್
ತಾರಕರಾಮ್ ಮಾರಂ
ತಾರಕರಾಮ್ ಮಾರಮ್ ನೇತೃತ್ವದ ವಿಶನ್ ಡಿಜಿಟಲ್ ಇಂಡಿಯಾದಿಂದ ಭಾರತದ ಮೊದಲ ಎಐ ಟ್ರೈನರ್ ಮೆಷೀನ್ ಅನಾವರಣಗೊಂಡಿತು. ಇಂಟೆಲ್ ನೆರವಿನಿಂದ ನಿರ್ಮಿಸಲಅದ ಎಐ ಲ್ಯಾಬ್ ಇದೆ.
ಅದೇ, ಸ್ಟಾರ್ಟಪ್ ಸನಾತನ ಎಂಬ ಬೆಂಗಳೂರು ಮೂಲದ ಸಂಸ್ಥೆಯು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಎಐ ಅಳವಡಿಕೆ ಮಾಡುತ್ತಿದೆ. ಇದೂ ಕೂಡ ಎಐ ಇಂಪ್ಯಾಕ್ಟ್ ಸಮಿಟ್ ನಲ್ಲಿ ಗಮನ ಸೆಳೆದ ಆವಿಷ್ಕಾರವಾಗಿದೆ.
ಅಗ್ನಿವ ಮತ್ತು ಆದಿತ್ಯ ಎಂಬ ಯುವ ವಿದ್ಯಾರ್ಥಿಗಳು ಸ್ಥಾಪಿಸಿದ ಡ್ರುಬ್ಲೆಟ್ ಇನ್ನೋವೇಶನ್ ಪ್ರೈ ಲಿ ಸಂಸ್ಥೆಯ ರೊಬೊಟಿಕ್ಸ್ ತಂತ್ರಜ್ಞಾನ, ಸರ್ವಮ್ ಎಐನ ಭಾರತೀಯ ಭಾಷೆಗಳಲ್ಲಿ ಐ ಸಂಸ್ಥೆಗಳು, ರಿಲಯನ್ಸ್ ಜಿಯೋದ ವಿವಿಧ ಎಐ ಆವಿಷ್ಕಾರಗಳು ಹೀಗೆ ನೂರಾರು ಭಾರತೀಯರ ಐ ಸಾಧನೆಗಳು ಸಮಿಟ್‌ನಲ್ಲಿ ಅನಾವರಣಗೊಂಡಿವೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ