ಸೀಡಿಂಗ್ ಸಿಸ್ಟಂ… ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಇಲ್ಲ ಅವಕಾಶ!

ಸೀಡಿಂಗ್ ಸಿಸ್ಟಂ… ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಇಲ್ಲ ಅವಕಾಶ!


T20 ವಿಶ್ವಕಪ್ 2026: T20 ನಿಂದ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಭಾರತ, ಸೌತ್ ಆಫ್ರಿಕಾ, ನ್ಯೂಜಿಲೆಂಡ್, ಜಂಬಾಬ್ವೆ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳು ಸೂಪರ್-8 ಹಂತಕ್ಕೇರಿದೆ. ಇನ್ನು ನಮೀಬಿಯ ವಿರುದ್ಧ ಗೆದ್ದರೆ ಪಾಕಿಸ್ತಾನ್ ತಂಡ ಕೂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.

ಇದಾಗ್ಯೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೂಪರ್-8 ಸುತ್ತಿನಲ್ಲಿ ಮುಖಾಮುಖಿಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಐಸಿಸಿ ನಿಗದಿಪಡಿಸಿರುವ ಸೀಡಿಂಗ್ ಸಿಸ್ಟಂ.

ಟಿ20 ಅದರ ಆರಂಭದಲ್ಲೇ ಐಸಿ ಸೀಡಿಂಗ್ ವ್ಯವಸ್ಥೆ ರೂಪಿಸಿದೆ. ಈ ಮೂಲಕ ಪಂದ್ಯಾವಳಿಗೂ ಮುನ್ನವೇ ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಮುಂದಿನ ಹಂತದಲ್ಲಿ (ಸೂಪರ್ 8) ಯಾವ ಗುಂಪಿನಲ್ಲಿ ಇರಬೇಕೆಂದು ನಿರ್ಧರಿಸಲಾಗಿದೆ.

ಅಂದರೆ ಗುಂಪಿನ ಹಂತದಲ್ಲಿ ಒಂದು ತಂಡ ಮೊದಲ ಸ್ಥಾನ ಪಡೆಯಲಿ ಅಥವಾ ಎರಡನೇ ಸ್ಥಾನ ಪಡೆಯಲಿ, ಅದು ತನ್ನ ಸೀಡಿಂಗ್‌ಗೆ ನಿಗದಿಯಾದ ಸೂಪರ್ 8 ಗುಂಪನ್ನೇ ಸೇರುತ್ತದೆ. ಉದಾಹರಣೆಗೆ, ಭಾರತವು ತನ್ನ ಗುಂಪಿನಲ್ಲಿ ಎಷ್ಟನೇ ಸ್ಥಾನದಲ್ಲಿದ್ದರೂ ಸೂಪರ್ 8ರಲ್ಲಿ ‘X1’ ಸ್ಥಾನವನ್ನೇ ಪಡೆಯುತ್ತದೆ. ಅತ್ತ ಪಾಕಿಸ್ತಾನಕ್ಕೆ Y3 ಸ್ಥಾನವನ್ನು ನೀಡಿದೆ.

ಹೀಗಾಗಿ ಸೂಪರ್-8 ಹಂತದಲ್ಲಿ ಭಾರತ ತಂಡವು ಗ್ರೂಪ್- 1 ರಲ್ಲಿ ಕಣಕ್ಕಿಳಿದರೆ, ಪಾಕ್ ತಂಡವು ಅರ್ಹತೆ ಪಡೆದರೆ ಗ್ರೂಪ್-2 ನಲ್ಲಿ ಕಣಕ್ಕಿಳಿಯಲಿದೆ.

ಸೀಡಿಂಗ್ ಸಿಸ್ಟಂ ಯಾಕೆ?

ವಾಣಿಜ್ಯ ಮತ್ತು ಸಾರಿಗೆ ಅನುಕೂಲಕ್ಕಾಗಿ ಟಿ20 ಆರಂಭದಲ್ಲೇ ಸೀಡಿಂಗ್ ಸಿಸ್ಟಂ ಪರಿಚಯಿಸಲಾಗಿದೆ. ಇದರಿಂದ ಪ್ರಸಾರಕರು ಮತ್ತು ಅಭಿಮಾನಿಗಳಿಗೆ ಯಾವ ತಂಡ ಯಾವ ದಿನ ಎಲ್ಲಿ ಆಡಲಿದೆ ಎಂಬುದು ಮೊದಲೇ ತಿಳಿಯಲು ಸಹಾಯ ಮಾಡುತ್ತದೆ. ಇದರಿಂದ ಟಿಕೆಟ್ ಬುಕ್ಕಿಂಗ್ ಮತ್ತು ಪ್ರಯಾಣ ಕೂಡ ಸುಲಭವಾಗುತ್ತದೆ.

ಹೀಗಾಗಿ ಈ ಬಾರಿ ಸೂಪರ್-8 ಸುತ್ತಿಗೆ ಸೀಡಿಂಗ್ ವ್ಯವಸ್ಥೆ ಮಾಡಲಾಗಿತ್ತು, ಅದರಂತೆ ಗ್ರೂಪ್- 1 ರಲ್ಲಿ ಕಣಕ್ಕಿಳಿಯುವ ತಂಡಗಳು ತನ್ನೆಲ್ಲಾ ಪಂದ್ಯಗಳನ್ನು ಭಾರತದಲ್ಲೇ ಆಡಲಿದೆ. ಅದೇ ಗ್ರೂಪ್-2 ತಂಡಗಳ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.

ಸೂಪರ್-8 ಗುಂಪು:

  • ಗ್ರೂಪ್ 1 (X): ಭಾರತ (X1), ಝಿಂಬಾಬ್ವೆ (X2), ವೆಸ್ಟ್ ಇಂಡೀಸ್ (X3), ಸೌತ್ ಆಫ್ರಿಕಾ (X4).
  • ಗುಂಪು 2 (Y): ಇಂಗ್ಲೆಂಡ್ (Y1), ನ್ಯೂಝಿಲೆಂಡ್ (Y2), ಪಾಕಿಸ್ತಾನ್ (ಅರ್ಹತೆ ಪಡೆದರೆ) (Y3), ಶ್ರೀಲಂಕಾ (Y4).

ಈ ಎಂಟು ತಂಡಗಳು ಸೂಪರ್-8 ಸುತ್ತಿನಲ್ಲಿ ಗ್ರೂಪ್ ತಂಡಗಳ ವಿರುದ್ಧ ಸೆಣಸಲಿದೆ. ಅಂದರೆ ಭಾರತ ತಂಡವು ತನ್ನ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಲಿದೆ.

ಇತ್ತ ಪಾಕಿಸ್ತಾನ್ ತಂಡವು ಸೂಪರ್-8 ಸುತ್ತಿಗೆ ಪ್ರವೇಶಿಸಿದರೆ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಸೆಣಸಬೇಕಿದೆ.

ಇದನ್ನೂ ಓದಿ: ಭಾರತದಲ್ಲಿ ‘ಬಿಗ್ ಬ್ಯಾಷ್ ಲೀಗ್’

ಇಲ್ಲಿ ಗ್ರೂಪ್‌ನಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯುವುದರಿಂದ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದಿಲ್ಲ. ಇದಾಗ್ಯೂ ಉಭಯ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿದರೆ ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಹೀಗಾಗಿ ಇಂಡೋ-ಪಾಕ್ ಕದನವನ್ನು ಮತ್ತೆ ವೀಕ್ಷಿಸಲು ಸೆಮಿಫೈನಲ್ ಅಥವಾ ಫೈನಲ್‌ಗೆ ಕಾಯಲೇಬೇಕು.



Source link

Leave a Reply

Your email address will not be published. Required fields are marked *