ಸ್ಕ್ವಾಷ್ ವಿಶ್ವಕಪ್ ಗೆದ್ದ ಭಾರತ

ಸ್ಕ್ವಾಷ್ ವಿಶ್ವಕಪ್ ಗೆದ್ದ ಭಾರತ


ಸ್ಕ್ವಾಷ್ ನಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಚೆನ್ನೈನ ಎಕ್ಸ್‌ಪ್ರೆಸ್ ಅವೆನ್ಯೂ ಮಾಲ್ನ ಕೋರ್ಟ್‌ನಲ್ಲಿ ನಡೆದ ಫೈನಲ್ ಪಂದ್ಯ ಅಗ್ರ ಶ್ರೇಯಾಂಕಿತ ಹ್ಯಾಂಗ್ ಕಾಂಗ್ ಅನ್ನು 3-0 ಅಂತರದಿಂದ ಸೋಲಿಸಿ ಭಾರತ ತಂಡವು ಮುಡಿಗೇರಿಸಿಕೊಂಡಿದೆ.

ಸ್ಕ್ವಾಷ್ಿದ್ದು ಎರಡು ವರ್ಷದ ಇತಿಹಾಸದಲ್ಲಿ ಏಷ್ಯಾದ ದೇಶಗಳು ಫೈನಲ್‌ನಲ್ಲಿ ಇದೇ ಮೊದಲು. ಹೀಗಾಗಿಯೇ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ. ಈ ನಿರೀಕ್ಷೆಯನ್ನು ಭಾರತೀಯ ತಾರೆಗಳು ಹುಸಿಗೊಳಿಸಲಿಲ್ಲ.

ಮೊದಲ ಸುತ್ತಿನಲ್ಲಿ ಕಣಕ್ಕಿಳಿದ ಜೋಶ್ನಾ ಚಿನಪ್ಪ 7-3, 2-7, 7-5, 7-1 ಅಂತರದಿಂದ ಹಾಂಗ್ ಕಾಂಗ್‌ನ ಕಾ ಯಿ ಲೀಗೆ ಸೋಲುಣಿಸಿದರು. ಇನ್ನು ದ್ವಿತೀಯ ಸುತ್ತಿನಲ್ಲಿ ಅಭಯ್ ಸಿಂಗ್ ಹಾಂಗ್ ಕಾಂಗ್ನ ಅಲೆಕ್ಸ್ ಲಾವ್ 7-1, 7-4, 7-4 ಅವರನ್ನು ನೇರ ಸೆಟ್‌ಗಳಿಂದ ಮನನ ಮಾಡಿದರು. ಅಂತಿಮ ಸುತ್ತಿನಲ್ಲಿ ಟೊಮ್ಯಾಟೊ ಹೊ ವಿರುದ್ಧ 7-2, 7-2, 7-5 ಸೆಟ್‌ಗಳಿಂದ ಗೆಲ್ಲುವಲ್ಲಿ ಅನಾಹತ್ ಸಿಂಗ್ ಯಶಸ್ವಿಯಾದರು.

ಈ ಮೂಲಕ ಭಾರತ ತಂಡವು ಮೊದಲ ಬಾರಿಗೆ ಸ್ಕ್ವಾಷ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಕ್ಕೂ ಮುನ್ನ 2023 ರಲ್ಲಿ ಕಂಚಿನ ಪದಕ ಗೆದ್ದಿದ್ದು ಭಾರತ ತಂಡದ ಶ್ರೇಷ್ಠ ಸಾಧನೆಯಾಗಿದೆ. ಈ ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜೋಶ್ನಾ ಚಿನ್ನಪ್ಪ, ಅಭಯ್ ಸಿಂಗ್ ಹಾಗೂ ಅನಾಹತ್ ಸಿಂಗ್ ಭಾರತಕ್ಕೆ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.



Source link

Leave a Reply

Your email address will not be published. Required fields are marked *